
ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಬರವಿಲ್ಲ: ಬಿಜೆಪಿಯ ಡಿ.ಎಸ್.ಅರುಣ್
ಬೆಂಗಳೂರು: ‘ರಾಜ್ಯದಲ್ಲಿ ಮಳೆಗೆ ಬರವಿದೆ, ಭ್ರಷ್ಟಾಚಾರಕ್ಕೆ ಬರವಿಲ್ಲ’ ಎಂದು ಬಿಜೆಪಿಯ ಡಿ.ಎಸ್.ಅರುಣ್ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಬರಗಾಲದ ಕುರಿತ ಚರ್ಚೆಯ ವೇಳೆ ಅರುಣ್, ‘ಯಾವುದೇ ಕೆಲಸಕ್ಕೂ ಹಣ ನೀಡಬೇಕು ಎಂದು ಸಚಿವ ಮಧು ಬಂಗಾರಪ್ಪ ಅವರ ಆಪ್ತ ಸಹಾಯಕರು ಕೇಳುತ್ತಾರೆ ಎಂದು ಶಿವಮೊಗ್ಗ ಕಾಂಗ್ರೆಸ್ ಘಟಕದ ಎಚ್.ಎಂ.ಸುಂದರೇಶ್ ಆರೋಪಿಸಿ ದ್ದಾರೆ. ಮುಖ್ಯಮಂತ್ರಿ ಅವರ ಸಭೆಗೆ ಜನರನ್ನು ಕರೆತರಲು ₹25 ಲಕ್ಷ ವೆಚ್ಚ ಮಾಡಿದ್ದಾರೆ’ ಎಂದು ಆರೋಪಿಸಿದರು.
ಜೆಡಿಎಸ್‌ನ ಟಿ.ಎ.ಶರವಣ, ‘ಯಾರಾದರೂ ಲಂಚ ಕೇಳಿದರೆ ಕರೆ ಮಾಡಿ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಈಗ ಯಾರಿಗೆ ಕರೆ ಮಾಡಬೇಕು’ ಎಂದು ಪ್ರಶ್ನಿಸಿದರು.
ಆರೋಪವನ್ನು ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್, ಬಲ್ಕೀಸ್ ಬಾನು ನಿರಾಕರಿಸಿದರು.