ವಿಟ್ಲ | ಪಂಪ್‌ಸೆಟ್‌ ಸಂಪರ್ಕ ಸ್ಥಗಿತಕ್ಕೆ ಸೂಚನೆ ಇಲ್ಲ: ಎಸ್‌ಇ ಕೃಷ್ಣರಾಜ್

ವಿಟ್ಲ | ಪಂಪ್‌ಸೆಟ್‌ ಸಂಪರ್ಕ ಸ್ಥಗಿತಕ್ಕೆ ಸೂಚನೆ ಇಲ್ಲ: ಎಸ್‌ಇ ಕೃಷ್ಣರಾಜ್

ವಿಟ್ಲ | ಪಂಪ್‌ಸೆಟ್‌ ಸಂಪರ್ಕ ಸ್ಥಗಿತಕ್ಕೆ ಸೂಚನೆ ಇಲ್ಲ: ಎಸ್‌ಇ ಕೃಷ್ಣರಾಜ್

ವಿಟ್ಲ: ಪರಿವರ್ತಕ, ಮನೆಗಳಲ್ಲಿ ಅರ್ಥಿಂಗ್ ಸರಿಪಡಿಸುವ ಕಾರ್ಯ ವಾಗಬೇಕು. ಪೇಟೆಯಲ್ಲಿ ಅರ್ಥಿಂಗ್‌ ಇಲ್ಲದ ಕಟ್ಟಡಗಳೇ ಹೆಚ್ಚಿವೆ. ಗೃಹ ಜ್ಯೋತಿಯ ಮರು ಅರ್ಜಿಗಳನ್ನು ಮನೆ ಮನೆಗೆ ತೆರಳಿ ನೀಡಿಲ್ಲ. ನೆಟ್ವರ್ಕ್ ಸಮಸ್ಯೆ, ಅಳಿಸಿ ಹೋಗುವ ಬಿಲ್ ಸಮಸ್ಯೆ, ಮರಗಳ ತೆರವು ಮಾಡಬೇಕು ಎಂಬ ಆಗ್ರಹ ಇಲ್ಲಿ ನಡೆದ ವಿಟ್ಲ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಕೇಳಿ ಬಂತು.

ಪಂಚಲಿಂಗೇಶ್ವರ ಸಭಾ ಭವನದಲ್ಲಿ ಬುಧವಾರ ನಡೆದ ವಿಟ್ಲ ಉಪವಿಭಾಗ ಮಟ್ಟದ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಗ್ರಾಹಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.

ಕರ್ವೇಲು ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮ ಆಗುತ್ತಿಲ್ಲ. ಪೆರ್ನೆ ಶಾಖಾ ಕಚೇರಿಯ ವಿಚಾರ ಏನಾಗಿದೆ? ಕಚೇರಿಯಲ್ಲಿ ಕಡತ ಇದೆ ಎಂದು ಹೇಳುತ್ತೀರಿ, ಕನಿಷ್ಠ ಕಡತ ಸಂಖ್ಯೆಯಾದರೂ ನೀಡಿ ಸಂಬಂಧಪಟ್ಟವರ ಮೂಲಕ ಅದನ್ನು ಮುಂದುವರಿಸುವ ಕಾರ್ಯ ಮಾಡುತ್ತೇವೆ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಕುಮಾರ್ ಹೇಳಿದರು.

ಕಟ್ಟಡ ಕಾಮಗಾರಿಗಳನ್ನು ಗಮನಿಸುವುದಕ್ಕೆ ಮೆಸ್ಕಾಂನಲ್ಲಿ ಸಿವಿಲ್ ಎಂಜಿನಿಯರಿಂಗ್‌ ವಿಭಾಗವಿದೆ. ₹5 ಲಕ್ಷ ಕ್ಕೂ ಮೇಲ್ಪಟ್ಟ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯ ಮೂಲಕವೇ ನಡೆಸಬೇಕು. ಕನ್ಯಾನ ಶಾಖೆಯ ಕಾಮಗಾರಿ ಬಗ್ಗೆ ಗುತ್ತಿಗೆದಾರರಗೆ ನೋಟಿಸ್ ಜಾರಿ ಮಾಡಿದ್ದೇವೆ. ಅಗತ್ಯ ಬಿದ್ದರೆ, ಮುಟ್ಟುಗೋಲು ಹಾಕಿಕೊಳ್ಳಲು ಇಲಾಖೆ ಸಿದ್ಧವಿದೆ ಎಂದು ಬಂಟ್ವಾಳ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ನಾಯಕ್ ಹೇಳಿದರು.

ಜಿಲ್ಲೆಗೆ 390 ಲೈನ್‌ಮನ್ ಲಭಿಸಿದ್ದಾರೆ. ಇದರಲ್ಲಿ ಕೆಲವರು ಇನ್ನೂ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ. ಐಪಿ ಪಂಪ್‌ಸೆಟ್‌ಗೆ ಸಂಪರ್ಕ ನಿಲ್ಲಿಸಲು ಎಲ್ಲೂ ಸೂಚನೆ ನೀಡಿಲ್ಲ. ನಿರ್ದಿಷ್ಟ ಲೋಡ್‌ಗಿಂತ ಹೆಚ್ಚಿದ್ದಲ್ಲಿ ಸಂಪರ್ಕ ನಿಧಾನವಾಗಬಹುದು. ಮೆಸ್ಕಾಂ ನೆಟ್ವರ್ಕ್ 500 ಮೀ ಗಿಂತ ದೂರ ಇದ್ದರೆ, ಕೃಷಿಕರೇ ಅಗತ್ಯ ನೆಟ್ವರ್ಕ್ ಮಾಡಬೇಕೊಳ್ಳಬೇಕು ಅಥವಾ ಸೋಲಾರ್ ಪಂಪ್‌ಸೆಟ್‌ಗೆ ಹೋಗಬೇಕು. ಅರ್ಜಿ ನೀಡಿದ ಎಲ್ಲರಿಗೂ ಆದ್ಯತೆಯ ಮೇರೆಗೆ ಸಂಪರ್ಕ ನೀಡುತ್ತೇವೆ. ಮನೆಯ ಮಾಲೀಕತ್ವ ಬದಲಾವಣೆಗೆ ನೋಂದಣಿಯಲ್ಲಿ ಮೆಸ್ಕಾಂ ಮೀಟರ್ ನಂಬರ್ ನಮೂದಾಗಿದ್ದರೆ, ಅಂತಹ ಪ್ರಕರಣದಲ್ಲಿ ಹೆಸರು ಬದಲಾವಣೆಗೆ ಸಮಸ್ಯೆಯಾಗುತ್ತಿಲ್ಲ ಎಂದು ಸೂಪರಿಂಟೆಂಡಿಂಗ್‌ ಎಂಜಿನಿಯರ್ ಕೃಷ್ಣರಾಜ್ ಹೇಳಿದರು.

ಸಭೆಯಲ್ಲಿ ಬಂಟ್ವಾಳ ತಾಲ್ಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ತಾಲ್ಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮನಾಥ ಶೆಟ್ಟಿ ಪೆರ್ನೆ, ಬಂಟ್ವಾಳ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದ ರಾಜ್, ಲೆಕ್ಕಾಧಿಕಾರಿ ಚಂದ್ರಶೇಖರ್, ಸಹಾಯಕ ಎಂಜಿನಿಯರ್ ಶ್ರೀನಿವಾಸ್, ಕಿರಿಯ ಎಂಜಿನಿಯರ್‌ಗಳಾದ ಸತೀಶ್ ಮಹಾದೇವ್, ದುರ್ಗೇಶ್, ಯೋಗೀಶ್, ಪ್ರಸಾದ್, ಲಿಂಗಪ್ಪ, ಸಹಾಯಕ ಲೆಕ್ಕಾಧಿಕಾರಿ ರೇವತಿ, ಕಚೇರಿ ಮೇಲ್ವಿಚಾರಕ ಪ್ರಸನ್ನ ಭಾಗವಹಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ