
ದಸರಾ ಸಿಎಂ ಕಪ್ ಕ್ರೀಡಾಕೂಟ: ಭರತ್, ವಿಜಯಲಕ್ಷ್ಮಿ ವೇಗದ ಓಟಗಾರರು
ಕಲಬುರಗಿ: ಕಲಬುರಗಿಯ ಭರತ್ ಹಾಗೂ ವಿಜಯಲಕ್ಷ್ಮಿ, ಶನಿವಾರ ಇಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟದ 100 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದರು.
ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶನಿವಾರ ಪುರುಷ ಹಾಗೂ ಮಹಿಳೆಯರಿಗಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಫಲಿತಾಂಶ: ಪುರುಷರ ವಿಭಾಗ: ಅಥ್ಲೆಟಿಕ್ಸ್–100 ಮೀ. ಓಟ–ಕಲಬುರಗಿಯ ಭರತ್–1, ಬಾಬು–2; 200 ಮೀ. ಓಟ–ಕಲಬುರಗಿಯ ಭರತ್–1, ವಿಶಾಲ–2; 400 ಮೀ. ಓಟ– ಸೇಡಂ ವಿಶ್ವರಾಜ ಭೀಮರಾಯ–1, ಅಫಜಲಪುರದ ನಾಗೇಶ್ ಎಸ್.–2; 800 ಮೀ. ಓಟ– ಕಲಬುರಗಿಯ ಶ್ರೀನಿವಾಸ–1, ಕಮಲಾಪುರದ ಇಮ್ರಾನ್–2; 1500 ಮೀ. ಓಟ–ಕಲಬುರಗಿಯ ಸಾಗರ–1, ಅಫಜಲಪುರದ ಅಂಬ್ರೇಶ–2; 5000 ಮೀ. ಓಟ– ಕಲಬುರಗಿಯ ಸಾಗರ–1, ಶಾಂತಲಿಂಗಯ್ಯ ಆರ್.–2.
ಲಾಂಗ್‌ಜಂಪ್–ಕಲಬುರಗಿಯ ಯಲ್ಲಾಲಿಂಗ–1, ಆಳಂದದ ರಾಹುಲ್–2; ಹೈಜಂಪ್–ಯಲ್ಲಾಲಿಂಗ–1, ಕಮಲಾ ಪುರದ ಪ್ರಶಾಂತ್–2; ತ್ರಿವಿಧ ಜಿಗಿತ–ಕಲಬುರಗಿಯ ಬಸವರಾಜ ಆರ್. ಹೂಗಾರ–1, ಕಾಳಗಿಯ ಸಮೀರ–2; ಶಾಟಪಟ್ ಥ್ರೋ–ಆಳಂದದ ಸಾಹೀಲ್–1, ಕಲಬುರಗಿಯ ಮೀರ್ ಸೈಫಾನ್–2; ಡಿಸ್ಕಸ್ ಥ್ರೋ–ಕಲಬುರಗಿಯ ಇಸ್ಮಾಯಿಲ್–1, ಕಮಲಾಪುರದ ಭೋಲೆನಾಥ–2; ಜಾವೆಲಿನ್ ಥ್ರೋ–ಕಲಬುರಗಿಯ ರಾಮು–1, ಆಳಂ ದದ ಶ್ರವಣಕುಮಾರ 2ನೇ ಸ್ಥಾನ ಗಳಿಸಿದರು. 4X100 ಮೀ. ರಿಲೇಯಲ್ಲಿ ಕಿರಣಕುಮಾರ ನಾಯಕತ್ವದ ತಂಡ –1 ಹಾಗೂ ಆಳಂದ ತಾಲ್ಲೂಕಿನ ರಾಹುಲ್ ನಾಯಕತ್ವದ ತಂಡ 2.
ಥ್ರೋಬಾಲ್–ಸೇಡಂ ತಂಡ –1, ಯಡ್ರಾಮಿ ತಂಡ –2; ಬಾಲ್‌ಬ್ಯಾಡ್ಮಿಂಟನ್–ಕಲಬುರಗಿಯ ಜಿಬಿಬಿ ಕ್ಲಬ್ –1, ಕೆಎಚ್‌ಬಿ ಹೈಕೋಟ್ ತಂಡ–2; ಟಿಟಿ–ಕಲಬುರಗಿ ತಂಡವು 1.
ಮಹಿಳೆಯರ ವಿಭಾಗ: ಅಥ್ಲೆಟಿಕ್ಸ್–100 ಮೀ.ಓಟ– ಕಲಬುರಗಿಯ ವಿಜಯಲಕ್ಷ್ಮೀ–1, ಸಮೃದ್ಧಿ ಎ.–2; 200 ಮೀ.– ಕಲಬುರಗಿಯ ಸಮೃದ್ಧಿ ಎ.–1, ವೈಷ್ಣವಿ ಆರ್.–2; 400 ಮೀ. ಓಟ– ಕಲಬುರಗಿಯ ವೈಷ್ಣವಿ ಆರ್.–1, ಶಹಾಬಾದ್‌ನ ಎ. ಜನ್ನಿಧರ್–2; 800 ಮೀ.– ಕಲಬುರಗಿಯ ವಿದೇಶಾ–1, ಸೋನಾಕ್ಷಿ–2; 1,500 ಮೀ.– ಕಲಬುರಗಿಯ ಸೋನಕ್ಷಿ ಯುವರಾಜ–1, ಅಂಬುತಾಯಿ ಮಹಾದೇವ –2; 3,000 ಮೀ.– ಲಕ್ಷ್ಮೀ ಡಿ.–1, ಅಂಬಿಕಾ ಪಿ. 2.
ಲಾಂಗ್‌ಜಂಪ್–ಕಲಬುರಗಿಯ ಸೃಷ್ಟಿ –1, ಸಹನಾ–2; ಹೈಜಂಪ್– ಆಳಂದದ ಸೋನು ಎಲ್. –1, ಶಶಿಕಲಾ–2; ತ್ರಿವಿಧ ಜಿಗಿತ–ಆಳಂದದ ಸೋನು–1, ಶಹಾಬಾದ್‌ನ ಭಾಗ್ಯಶ್ರೀ–2; ಶಾಟಪಟ್ ಥ್ರೋ–ಕಲಬುರಗಿಯ ಮಸರತ್ ಸುಲ್ತಾನಾ–1, ಕಾವೇರಿ–2; ಡಿಸ್ಕಸ್ ಥ್ರೋ–ಕಲಬುರಗಿಯ ಕಾವೇರಿ–1, ಸೇಡಂನ ಶ್ರುತಿ–2; ಜಾವೆಲಿನ್ ಥ್ರೋ–ಮಸರತ್ ಸುಲ್ತಾನ–1, ಆಳಂದದ ನಿಖಿತಾ –2.
4X100 ಮೀ. ರಿಲೇಯಲ್ಲಿ ಕಲಬುರಗಿಯ ಸೋನಿ ನಾಯಕತ್ವದ ತಂಡ 1, ಸೇಡಂನ ಮೀನಾಕ್ಷಿ ನಾಯಕತ್ವದ ತಂಡ 2.
ವಾಲಿಬಾಲ್–ಕಲಬುರಗಿ ತಂಡ–1, ಸೇಡಂ ತಂಡ–2; ಕಬಡ್ಡಿ–ಸೇಡಂ ತಂಡ–1, ಕಮಲಾಪುರ ತಂಡ –2; ಥ್ರೋಬಾಲ್–ಶಹಾಬಾದ್ ತಂಡ –1, ಆಳಂದ ತಂಡ–2; ಹ್ಯಾಂಡ್‌ಬಾಲ್–ಕಲಬುರಗಿ ಕ್ಯಾಂಪ್‌ಬೆಲ್ ಶಾಲೆ–1, ಎಸ್‌ಆರ್‌ಎನ್ ಮೆಹತಾ ಶಾಲೆ –2; ಬಾಲ್‌ಬ್ಯಾಡ್ಮಿಂಟನ್–ಕಲಬುರಗಿಯ ಜೀವನ ಪ್ರಕಾಶ ಶಾಲೆ–1, ಕಲಬುರಗಿಯ ಸರ್ಕಾರಿ ಕನ್ಯಾ ಪ್ರೌಢಶಾಲೆ–2; ಟಿಟಿ–ಕಲಬುರಗಿ ತಂಡ 1ನೇ ಸ್ಥಾನ ಗಳಿಸಿತು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಾಜ ಶೇಖರ ಗೋನಾಯಕ, ಭೋಜನಗೌಡ ಪಾಟೀಲ, ತರಬೇತುದಾರರಾದ ಸಂಜಯ ಬಾಣದ, ಪ್ರವೀಣ ಪುಣೆ, ರಾಜು ಚೌಹಾಣ್ ಹಾಗೂ ವಿವಿಧ ತಾಲ್ಲೂಕುಗಳ ದೈಹಿಕ ಶಿಕ್ಷಣ ಶಿಕ್ಷಕರು ಪಾಲ್ಗೊಂಡಿದ್ದರು.