ಹರಿಪ್ರಸಾದ್ ಹುಚ್ಚ,ಅವರ ಮಾತಿಗೆ ತಲೆಕಡೆಸಿಕೊಳ್ಳುವ ಅಗತ್ಯವಿಲ್ಲ; ಜನಾರ್ದನ ರೆಡ್ಡಿ

ಹರಿಪ್ರಸಾದ್ ಹುಚ್ಚ,ಅವರ ಮಾತಿಗೆ ತಲೆಕಡೆಸಿಕೊಳ್ಳುವ ಅಗತ್ಯವಿಲ್ಲ; ಜನಾರ್ದನ ರೆಡ್ಡಿ

ಹರಿಪ್ರಸಾದ್ ಹುಚ್ಚ,ಅವರ ಮಾತಿಗೆ ತಲೆಕಡೆಸಿಕೊಳ್ಳುವ ಅಗತ್ಯವಿಲ್ಲ; ಜನಾರ್ದನ ರೆಡ್ಡಿ

ಗಂಗಾವತಿ: ವಂದೇಮಾತರಂ ಎರಡು ಚರಣಗಳ ನಂತರದ ಸಾಲುಗಳು ಬಲಪಂಥೀಯರಿಗೆ ಸೇರಿದ್ದು ಎಂಬ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹುಚ್ಚ. ಈ ವಿಚಾರವಾಗಿ ಏನೋನೊ ಮಾತನಾಡುತ್ತಾನೆ. ಹುಚ್ಚರ ಬಗ್ಗೆ ನಾವು ತಲೆಕಡೆಸಿಕೊಳ್ಳುವ ಅಗತ್ಯವಿಲ್ಲ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಹರಿಹಾಯ್ದರು.

ನಗರದಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿ ‘ವಂದೇಮಾತರಂ ಹಾಡನ್ನು ಒಮ್ಮೆ ಪರಿಶೀಲಿಸಿಕೊಳ್ಳಲಿ. ವಿನಾಕಾರಣ ಟೀಕೆ ಮಾಡುವುದು ಸರಿಯಲ್ಲ’ ಎಂದರು.

ಹಾಡನ್ನು ಪೂರ್ಣವಾಗಿ ಹಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದು, ‘ತಂಗಡಗಿ ಹಿಟ್ಲರ್‌ ರೀತಿ ನಡೆದುಕೊಳ್ಳುತ್ತಿದ್ದಾರೆ. ದೇಶಭಕ್ತಿಗಾಗಿ ಮೂರು ನಿಮಿಷದ ಹಾಡು ಹಾಡಿದರೆ ಏನು ಸಮಸ್ಯೆ’ ಎಂದು ಪ್ರಶ್ನಿಸಿದರು.

ತಂಗಡಗಿ ಪ್ರತಿಕ್ರಿಯೆ: ಬಿಜೆಪಿಯಿಂದ ನಾನು ಸಚಿವನಾಗಿರಲಿಲ್ಲ. ನನ್ನಿಂದಲೇ ಸಚಿವ ಸಂಪುಟ ರಚನೆಯನ್ನು ಬಿಜೆಪಿ ಮಾಡಿಕೊಂಡಿದೆ. ಹಿಂದೆ ಬಿಜೆಪಿ ಅಧಿಕಾರಕ್ಕೆ ಬರಲು ಯಾರು ಕಾರಣ ಎನ್ನುವುದನ್ನು ರೆಡ್ಡಿ ನೆನಪಿಸಿಕೊಳ್ಳಲು ಎಂದು ತಂಗಡಗಿ ಹೇಳಿದರು.

‘ವಂದೇಮಾತರಂ ನಾವು ಎರಡು ಚರಣಗಳನ್ನು ಹಾಡುತ್ತಿದ್ದೇವೆ. ಅದಕ್ಕೆ ರಾಜಕೀಯ ಬಣ್ಣ ನೀಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಬದಲಾವಣೆ ಅಗತ್ಯವಿದ್ದರೆ ಚರ್ಚಿಸಿ ನಿರ್ಧರಿಸಬಹುದು’ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ