ಬಸವಕಲ್ಯಾಣದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಜಾತ್ರೆ

ಬಸವಕಲ್ಯಾಣದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಜಾತ್ರೆ

ಬಸವಕಲ್ಯಾಣದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಜಾತ್ರೆ

ಬಸವಕಲ್ಯಾಣ: ತಾಲ್ಲೂಕಿನ ಚಂಡಕಾಪುರದ ಚಾಲುಕ್ಯ ಶೈಲಿಯ ಕಲ್ಲಿನ ಗರ್ಭಗುಡಿ, ಎತ್ತರದ ಶಿಖರವಿರುವ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ಸೆಪ್ಟೆಂಬರ್ 10 ಮತ್ತು 11 ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಪಾರ ಭಕ್ತರು ಭೇಟಿ ನೀಡುವುದರಿಂದ ತಾಲ್ಲೂಕು ಆಡಳಿತವು ವಿವಿಧ ವ್ಯವಸ್ಥೆ ಕೈಗೊಂಡಿದೆ.

ಸೆಪ್ಟೆಂಬರ್ 10ರಂದು ಹೋಳ ಆಚರಿಸಿ ದೇವಸ್ಥಾನದಲ್ಲಿ ನೈವೇದ್ಯ ಅರ್ಪಣೆ, ಪುಷ್ಪಾರ್ಚನೆ ನಡೆಯುತ್ತದೆ. ಎತ್ತುಗಳನ್ನು ಸಿಂಗರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಮರುದಿನ ದೇವಸ್ಥಾನದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಮಧ್ಯ ರಾತ್ರಿಯಿಂದಲೇ ಉತ್ಸವ ಮೂರ್ತಿಗೆ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಆರಂಭಗೊಳ್ಳುತ್ತದೆ. ಬೆಳಿಗ್ಗೆ 5 ಗಂಟೆಗೆ ಆರತಿ ಬೆಳಗಲಾಗುತ್ತದೆ.

ಬಳಿಕ ದೂರದಿಂದ ಭಕ್ತರು ಸಾಲಿನಲ್ಲಿ ನಿಂತು ನೈವೇದ್ಯ ಅರ್ಪಿಸಿ ದರ್ಶನ ಪಡೆದು ಹರಕೆ ತೀರಿಸುತ್ತಾರೆ. ಗುಡ್ಡದ ಕೆಳಗೆ ದೇವಸ್ಥಾನವಿದ್ದು ನೀರಿನ ಝರಿಯ ಪುಷ್ಕರಣಿ ಇದ್ದು, ಇದನ್ನು ಅಮೃತಕುಂಡ ಎಂದು ಕರೆಯುತ್ತಾರೆ. ಈ ಕಾರಣ ಪರಿಸರ ಯಾವಾಗಲೂ ಹಚ್ಚಹಸಿರಾಗಿರುತ್ತದೆ. ಇಲ್ಲಿನ ಕುಂಡದ ನೀರು ಬರಗಾಲದಲ್ಲೂ ಎಂದಿನಂತೆಯೇ ಇತ್ತು ಎನ್ನಲಾಗುತ್ತದೆ. ಬಹಳಷ್ಟು ಜನರು ಈ ನೀರಿನಲ್ಲಿ ಸ್ನಾನಗೈದು ದರ್ಶನ ಪಡೆಯುವುದು ವಾಡಿಕೆ.

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ದೇವಸ್ಥಾನ ಇರುವುದರಿಂದ ಮಹಾರಾಷ್ಟ್ರ, ತೆಲಂಗಾಣ ಮತ್ತು ರಾಜ್ಯದ ವಿವಿಧೆಡೆಯ ಅಪಾರ ಭಕ್ತರು ಬರುತ್ತಾರೆ. ಹೆದ್ದಾರಿಯಿಂದ ಅರ್ಧ ಕಿ.ಮೀ ಅಂತರದಲ್ಲಿನ ದೇವಸ್ಥಾನದವರೆಗೆ ಜನಜಂಗುಳಿ ನೆರೆದಿರುತ್ತದೆ. ಬೆಂಡು, ಬತ್ತಾಸು, ಮಕ್ಕಳ ಆಟಿಕೆ ಹಾಗೂ ಇತರೆ ಸಾಮಗ್ರಿ, ತಿನಿಸುಗಳ ಅಂಗಡಿಗಳಿರುತ್ತವೆ. ‘ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ಪ್ರತಿದಿನ ತಪ್ಪದೇ ಸಹಸ್ರ ಬಿಲ್ವಾರ್ಚನೆ ನಡೆಯುತ್ತದೆ. ಭಜನೆ ಮತ್ತಿತರೆ ಜಾನಪದ ಕಲಾ ಪ್ರದರ್ಶನವಿರುತ್ತದೆ’ ಎಂದು ಬಿಲ್ವಾರ್ಚನೆ ವ್ಯವಸ್ಥಾಪಕ ರಾಜೀವ ಪಾಟೀಲ ಹಳ್ಳಿ ತಿಳಿಸಿದರು.

‘ಈಚೆಗೆ ದೇವಸ್ಥಾನಕ್ಕೆ ಗುಡ್ಡ ಇಳಿದು ಹೋಗುವ ಸ್ಥಳದಲ್ಲಿ 7 ಅಡಿ ಎತ್ತರದ ಶಿವನ ಮೂರ್ತಿ ಕೂಡ ಪ್ರತಿಷ್ಠಾಪಿಸಿದ್ದ ರಿಂದಲೂ ಭಕ್ತರ ಸಂಖ್ಯೆ ಹೆಚ್ಚಿದೆ. ಜಾತ್ರೆಗೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತದೆ. ತಾಲ್ಲೂಕು ಆಡಳಿತ ಮತ್ತು ಭಕ್ತರಿಂದಲೂ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ’ ಎಂದು ತಾಲ್ಲೂಕು ಆಡಳಿತ ಸಮಿತಿ ಕಾರ್ಯದರ್ಶಿ ಶರಣು ಪವಾಡಶೆಟ್ಟಿ ಹೇಳಿದರು.

ಜಾತ್ರೆ ದಿನ ರಾತ್ರಿ 2.30 ಗಂಟೆಗೆ ಸಹಸ್ರ ಬಿಲ್ವಾರ್ಚನೆ ನಡೆದು ಧಾರ್ಮಿಕ ಚಟುವಟಿಕೆಗಳು ಆರಂಭಗೊಳ್ಳುತ್ತವೆ. ಇಡೀದಿನ ಭಕ್ತರು ದರ್ಶನ ಪಡೆದುಕೊಳ್ಳುತ್ತಾರೆ ರಾಜೀವ ಪಾಟೀಲ ಹಳ್ಳಿಬಿಲ್ವಾರ್ಚನೆ ವ್ಯವಸ್ಥಾಪಕರು

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ