ಮಳೆ ಕ್ಷೀಣ: ಕಾಫಿ ಬೆಳೆಗಾರರ ಆತಂಕ

ಮಳೆ ಕ್ಷೀಣ: ಕಾಫಿ ಬೆಳೆಗಾರರ ಆತಂಕ

ಮಳೆ ಕ್ಷೀಣ: ಕಾಫಿ ಬೆಳೆಗಾರರ ಆತಂಕ

ಕಳಸ: ತಾಲ್ಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 35 ಮಿ.ಮೀ. ಮಳೆಯಾಗಿದ್ದು, ಮಲೆನಾಡಿನಲ್ಲೂ ಬರದ ಛಾಯೆ ಆವರಿಸಿದೆ.

ಮಳೆ ಕೊರತೆಯಿಂದ ಕಾಫಿ ಬೆಳೆಗಾರರಲ್ಲಿ ಆತಂಕ ಶುರುವಾಗಿದೆ. ಹೊಸದಾಗಿ ನೆಟ್ಟ ಕಾಫಿ ಗಿಡಗಳಿಗೆ ತೇವಾಂಶದ ಕೊರತೆ ಎದುರಾಗಿದ್ದು, ಬಿಸಿಲಿನ ತಾಪ ಹೆಚ್ಚಿರುವ ತೋಟಗಳಲ್ಲಿ ಗಿಡಗಳು ಬಾಡುತ್ತಿವೆ. ಹೀಗಾಗಿ ಸ್ಪ್ರಿಂಕ್ಲರ್ ಮೂಲಕ ನೀರಾವರಿ ಮಾಡುವ ಬಗ್ಗೆ ಬೆಳೆಗಾರರು ಆಲೋಚಿಸುತ್ತಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಕಾಫಿಗೆ ವರ್ಷದ ಕೊನೆಯ ಕಂತಿನ ಗೊಬ್ಬರ ನೀಡುವುದು ವಾಡಿಕೆ. ಈ ತಿಂಗಳಲ್ಲಿ ಹಾಕುವ ಗೊಬ್ಬರ ಪ್ರಸಕ್ತ ಸಾಲಿನ ಫಸಲಿನ ಗುಣಮಟ್ಟ ಮತ್ತು ತೂಕ ಹೆಚ್ಚಿಸುವುದರ ಜತೆಗೆ, ಮುಂದಿನ ಸಾಲಿನಲ್ಲಿ ಹೂವು ಹೆಚ್ಚಾಗಲು ಸಹಕಾರಿಯಾಗುತ್ತದೆ. ಆದರೆ ಸೆಪ್ಟೆಂಬರ್ ಮೊದಲ ವಾರದಲ್ಲೇ ತೋಟಗಳಿಗೆ ಗೊಬ್ಬರ ಹಾಕಿದ ಬೆಳೆಗಾರರು ಮಳೆ ಬಾರದಿರುವುದರಿಂದ ಆತಂಕಕ್ಕೀಡಾಗಿದ್ದಾರೆ.

‘ಮಳೆ ಬರುತ್ತದೆ ಎಂದು ನಂಬಿ 50 ಚೀಲ ಗೊಬ್ಬರ ಹಾಕಿ ಕಾಯುತ್ತಿದ್ದೆವು. ಆದರೆ ಬೇಸಿಗೆಯಂತಹ ಬಿಸಿಲು ಬಂದು ಗೊಬ್ಬರವೆಲ್ಲ ವ್ಯರ್ಥವಾಯಿತು. ಚೀಲಕ್ಕೆ ₹2 ಸಾವಿರಕ್ಕೂ ಹೆಚ್ಚು ಬೆಲೆ ಇರುವ ಗೊಬ್ಬರ ಹಾಳಾಗುವುದರ ಜತೆಗೆ ಗಿಡಗಳಿಗೂ ಪೋಷಣೆ ಇಲ್ಲದಂತಾಗಿದೆ’ ಎಂದು ಕಳಕೋಡಿಯ ಬೆಳೆಗಾರರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಸೆಪ್ಟೆಂಬರ್‌ನಲ್ಲಿ ಇಷ್ಟು ಕಡಿಮೆ ಮಳೆಯಾಗಿರುವುದನ್ನು ನನ್ನ ಅನುಭವದಲ್ಲಿ ನೋಡಿಲ್ಲ. ಗೊಬ್ಬರ ಸಿದ್ಧಪಡಿಸಿಕೊಂಡು ಮಳೆಗಾಗಿ ಕಾಯುತ್ತಿದ್ದೇವೆ. ಅಡ್ಡಮಳೆಗಳು ಬಂದೇ ಬರುತ್ತವೆ ಎಂಬ ನಿರೀಕ್ಷೆಯಿದೆ’ ಎಂದು ಗಂಗನಕೊಡಿಗೆಯ ಯುವ ಬೆಳೆಗಾರ ಗಿರೀಶ್ ಹೇಳಿದರು.

ಆಕಾಶದಲ್ಲಿ ದಟ್ಟ ಮೋಡಗಳು ಕಾಣಿಸಿಕೊಂಡರೂ ಮಳೆ ಸುರಿಯುತ್ತಿಲ್ಲ ಎಂಬ ಬೇಸರ ಬೆಳೆಗಾರರಲ್ಲಿದೆ. ಕಳೆದ ಎರಡು ದಿನಗಳಿಂದ ಕೆಲವೆಡೆ ಮಾತ್ರ ಬೇಸಿಗೆಯ ಮಳೆಯಂತೆ ಚದುರಿದ ಮಳೆ ಯಾಗಿದೆ. ಬೇಸಿಗೆಯಲ್ಲಿ ಹೂಮಳೆಗಾಗಿ ಕಾಯುವಂತೆ, ಸೆಪ್ಟೆಂಬರ್‌ನಲ್ಲಿ ಕಾಯಿ ಬಲಿಯಲು ಮಳೆಗಾಗಿ ಕಾಯುವ ಸ್ಥಿತಿ ಎದುರಾಗಿದೆ. ನಿರೀಕ್ಷೆಗಿಂತ ಕಡಿಮೆ ಯಾದ ಮಳೆಯಿಂದಾಗಿ ಅರೇಬಿಕಾ ಕಾಫಿ ಈಗಾಗಲೇ ಹಣ್ಣಾಗಿದೆ. ರೊಬಸ್ಟಾ ಕಾಫಿ ಕೂಡ ಈ ಬಾರಿ ಒಂದು ತಿಂಗಳು ಮೊದಲೇ ಹಣ್ಣಾಗುವ ನಿರೀಕ್ಷೆಯಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ