ಕೆಎಸ್‌ಒಯು: ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭ

ಕೆಎಸ್‌ಒಯು: ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭ

ಕೆಎಸ್‌ಒಯು: ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭ

ಧಾರವಾಡ: ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್ಒಯು) ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭವಾಗಿದೆ. ಸ್ನಾತಕ, ಸ್ನಾತಕೋತ್ತರ ಪದವಿ, ಪಿ.ಜಿ ಡಿಪ್ಲೊಮಾ, ಸರ್ಟಿಫಿಕೇಟ್‌ ಸಹಿತ ಒಟ್ಟು 65 ಕೋರ್ಸ್‌ಗಳು ಲಭ್ಯ ಇವೆ’ ಎಂದು ಕೆಎಸ್‌ಒಯು ಕುಲಪತಿ ಪ್ರೊ.ಎ.ಪಿ.ಜ್ಞಾನಪ್ರಕಾಶ್‌ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಏಕಕಾಲದಲ್ಲಿ ಭೌತಿಕ ಶಿಕ್ಷಣದಲ್ಲಿ(ರೆಗ್ಯುಲರ್‌) ಒಂದು ಮತ್ತು ದೂರ ಶಿಕ್ಷಣದಲ್ಲಿ ಒಂದು, ಒಟ್ಟು ಎರಡು ಪದವಿ ಕೋರ್ಸ್‌ ಮಾಡಲು ಅವಕಾಶ ಇದೆ. ಕೆಎಸ್‌ಒಯುನಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂ.ಎಸ್‌.‌ಡಬ್ಲ್ಯು ಮೊದಲಾದ ಕೋರ್ಸ್‌ಗಳು ಲಭ್ಯ ಇವೆ’ ಎಂದರು.

‘ರಾಜ್ಯದಲ್ಲಿ 38 ಪ್ರಾದೇಶಿಕ ಕೇಂದ್ರಗಳು ಇವೆ. ಪ್ರಾದೇಶೀಕ ಕೇಂದ್ರಗಳಲ್ಲಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆದುಕೊಳ್ಳಬೇಕು. ಅಲ್ಪಸಂಖ್ಯಾತ ಸಮುದಾಯದವರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ಶೇ 50ಕ್ಕೂ ಹೆಚ್ಚು ದೃಷ್ಟಿದೋಷವುಳ್ಳವರಿಗೆ, ಕೋವಿಡ್‌ನಿಂದ ಪೋಷಕರು ಮೃತಪಟ್ಟಿರುವವರ ಮಕ್ಕಳಿಗೆ ಪೂರ್ಣ ಶುಲ್ಕ ವಿನಾಯಿತಿ ಇದೆ. ಅಭ್ಯರ್ಥಿಗಳಿಗೆ ಕಲಿಕಾ ಸಾಮಗ್ರಿ, ಇತರ ಸೌಕರ್ಯಗಳನ್ನು ಪೂರೈಸಲಾಗುವುದು’ ಎಂದು ತಿಳಿಸಿದರು.

ಆನ್‌ಲೈನ್‌ ಕೋರ್ಸ್‌ಗಳು: ‘ಬಿ.ಎ-ಸಾಮಾನ್ಯ (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ), ಬಿ.ಕಾಂ., ಎಂ.ಎ.-ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಅರ್ಥಶಾಸ್ತ್ರ, ಎಂ.ಕಾಂ, ಎಂ.ಬಿ.ಎ., ಎಂ.ಎಸ್ಸಿ.- ಗಣಿತ ವಿಷಯ ಆನ್‌ಲೈನ್ ಕೋರ್ಸ್‌ಗಳು ಲಭ್ಯ ಇವೆ’ ಎಂದರು.

‘ಕೆಎಸ್‌ಒಯುನಲ್ಲಿ ಫಾರಿನ್‌ ಲ್ಯಾಂಗ್ವೆಜಸ್‌ ಅಧ್ಯಯನ ವಿಭಾಗ ಆರಂಭಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ₹100 ಕೋಟಿ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಜಪಾನ್‌, ಚೀನಾ ಮೊದಲಾದ ದೇಶಗಳ ರಾಯಭಾರ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಬಳ್ಳಾರಿಯಲ್ಲಿ ಜೀನ್ಸ್‌ ಬಟ್ಟೆ ಸಂಬಂಧಿ, ಯಾದಗಿರಿಯಲ್ಲಿ ಸೌರಶಕ್ತಿ ಸಂಬಂಧಿ ಕೌಶಲ ಕಲಿಕೆ ಅಲ್ಪಾವಧಿ ಕೋರ್ಸ್‌ ಆರಂಭಿಸುವ ಉದ್ದೇಶ ಇದೆ’ ಎಂದು ಹೇಳಿದರು.

ಮಾಹಿತಿಗಾಗಿ ನವನಗರದ ಕೆಎಸ್‌ಒಯು ಪ್ರಾದೇಶಿಕ ಕೇಂದ್ರ, ದೂ:0836 2441199, ಮೊ: 7019314679 ಸಂಪರ್ಕಿಸಬಹುದು. ವಿಶೇಷಾಧಿಕಾರಿ ಪ್ರೊ.ಬಸನಗೌಡ ಬಿರಾದರ, ಕೆಎಸ್‌ಒಯು ಡೀನ್ ಪ್ರೊ.ಎನ್.ಆನಂದಗೌಡ, ಧಾರವಾಡ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಲೋಕೇಶ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ