ದುಲೀಪ್ ಟ್ರೋಫಿ: ಫೈನಲ್‌ ಪ್ರವೇಶದತ್ತ ದಕ್ಷಿಣ ವಲಯದ ದಿಟ್ಟ ಹೆಜ್ಜೆ

ದುಲೀಪ್ ಟ್ರೋಫಿ: ಫೈನಲ್‌ ಪ್ರವೇಶದತ್ತ ದಕ್ಷಿಣ ವಲಯದ ದಿಟ್ಟ ಹೆಜ್ಜೆ

ದುಲೀಪ್ ಟ್ರೋಫಿ: ಫೈನಲ್‌ ಪ್ರವೇಶದತ್ತ ದಕ್ಷಿಣ ವಲಯದ ದಿಟ್ಟ ಹೆಜ್ಜೆ

ಬೆಂಗಳೂರು: ಸತತ ಎರಡನೇ ವರ್ಷವೂ ದುಲೀಪ್ ಟ್ರೋಫಿ ಫೈನಲ್ ಪ್ರವೇಶಿಸುವ ಕನಸಿನ ಹಾದಿಯಲ್ಲಿ ದಕ್ಷಿಣ ವಲಯ ತಂಡವು ದಿಟ್ಟ ಹೆಜ್ಜೆ ಇಟ್ಟಿದೆ. 

ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ತಂಡವು ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯುತ್ತಿರುವ ಸೆಮಿಫೈನಲ್‌ ಪಂದ್ಯದ  ಮೂರನೇ ದಿನವಾದ ಮಂಗಳವಾರ ಉತ್ತರ ವಲಯದ ಮರುಹೋರಾಟಕ್ಕೆ ತಕ್ಕಮಟ್ಟಿಗೆ ಕಡಿವಾಣ ಹಾಕುವಲ್ಲಿ ವರ್ಮಾ ಬಳಗವು ಯಶಸ್ವಿಯಾಗಿದೆ. ದಿನದಾಟದ ಅಂತ್ಯಕ್ಕೆ ಉತ್ತರ ವಲಯವು 66 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 256 ರನ್ ಗಳಿಸಿತು. ಒಟ್ಟು 139 ರನ್‌ ಮುನ್ನಡೆ ಸಾಧಿಸಿದೆ. ಕೊನೆ  ದಿನದಾಟದಲ್ಲಿ ಉತ್ತರ ವಲಯದ ಉಳಿದಿರುವ ವಿಕೆಟ್‌ಗಳನ್ನು ಬೇಗ ಕಬಳಿಸಿ ಜಯಿಸುವ ಛಲದಲ್ಲಿ ತಿಲಕ್ ಬಳಗವಿದೆ. ಒಂದೊಮ್ಮೆ ಆಗದಿದ್ದರೂ ಡ್ರಾ ಸಾಧಿಸಿ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಫೈನಲ್‌ಗೆ ಪ್ರವೇಶಿಸುವ ಅವಕಾಶವೂ ತಂಡಕ್ಕೆ ಇದೆ. 

ವರ್ಮಾ (ಔಟಾಗದೆ 116, 250ಎ, 4x9) ಅವರ ಶತಕದ ಬಲದಿಂದ ದಕ್ಷಿಣ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ 117 ರನ್‌ಗಳ ಮುನ್ನಡೆ ಸಾಧಿಸಿತು. ಸೋಮವಾರದ ಆಟದ ಮುಕ್ತಾಯಕ್ಕೆ ತಂಡವು 94 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 285 ರನ್ ಗಳಿಸಿತ್ತು.  ಶತಕ ಗಳಿಸಿದ್ದ  ತಿಲಕ್ ಕ್ರೀಸ್‌ನಲ್ಲಿದ್ದರು. ಮೊತ್ತಕ್ಕೆ ಮತ್ತೆ 27 ರನ್‌ ಸೇರಿಸುವಲ್ಲಿ ತಿಲಕ್ ಮತ್ತು ಸಾಯಿತೇಜ (13 ರನ್) ಯಶಸ್ವಿಯಾದರು. ಅಬಿದ್ ಬೌಲಿಂಗ್‌ನಲ್ಲಿ ಸಾಯಿತೇಜ ಕ್ಲೀನ್‌ಬೌಲ್ಡ್ ಆದರು. 

ಎರಡನೇ ಇನಿಂಗ್ಸ್ ಆರಂಭಿಸಿದ ಉತ್ತರ ವಲಯಕ್ಕೆ ಆರಂಭದಲ್ಲಿಯೇ ಆಘಾತವಾಯಿತು. ದಕ್ಷಿಣದ  ವಿಕೆಟ್‌ಕೀಪರ್ ಶರವೇಗದ ಸ್ಟಂಪಿಂಗ್ ಮೂಲಕ ಕಮ್ರನ್ ಇಕ್ಬಾಲ್‌ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಆದರೆ ಸನತ್ ಸಾಂಗ್ವಾನ್ (76; 148ಎ, 4X8) ಮತ್ತು ಆಯುಷ್ ದೊಸೆಜಾ (52; 76ಎ, 4X5)  ಎರಡನೇ ವಿಕೆಟ್ ಜೊತೆಯಾಟದಲ್ಲಿ 104 ರನ್ ಸೇರಿಸಿದರು.  ಚಹಾಕ್ಕೆ ಸ್ವಲ್ಪ ಸಮಯಕ್ಕೆ ಮುನ್ನ ಆಯುಷ್  ಅವರು ವಿದ್ವತ್ ಕಾವೇರಪ್ಪ ಅವರ ಎಸೆತದಲ್ಲಿ ಕೀಪರ್ ಜಗದೀಶನ್‌ ಅವರಿಗೆ ಕ್ಯಾಚ್ ಕೊಟ್ಟರು. ಸನತ್ ಜೊತೆಗೂಡಿದ ಆಯುಷ್ ಬಡೋನಿ (31 ರನ್) ಕೂಡ ಒಂದಿಷ್ಟು ಹೊತ್ತು ಇನಿಂಗ್ಸ್‌ಗೆ ಸ್ಥಿರತೆ ನೀಡಿದರು.   

ನಿಧೀಶ್ ಅವರು ಸಂಗ್ವಾನ್  ವಿಕೆಟ್ ಗಳಿಸುವ ಮೂಲಕ ತಂಡಕ್ಕೆ ಯಶಸ್ಸು ತಂದುಕೊಟ್ಟರು. ಇಲ್ಲಿಂದ ಮುಂದೆ ನಿಯಮಿತ ಅಂತರಗಳಲ್ಲಿ ವಿಕೆಟ್‌ ಕಬಳಿಸುವಲ್ಲಿ ಬೌಲರ್‌ಗಳು ಯಶಸ್ವಿಯಾದರು. ಚಹಾ ವಿರಾಮದ ನಂತರ ಐದು ವಿಕೆಟ್ ಪತನವಾದವು. ಸ್ಪಿನ್ನರ್ ಶ್ರೇಯಸ್ ಗೋಪಾಲ್ (77ಕ್ಕೆ2)  ಅವರು ನಿಧೀಶ್ (47ಕ್ಕೆ2) ಮಿಂಚಿದರು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಉತ್ತರ ವಲಯ: 66 ಓವರ್‌ಗಳಲ್ಲಿ 7ಕ್ಕೆ256. ದಕ್ಷಿಣ ವಲಯ: 100.3 ಓವರ್‌ಗಳಲ್ಲಿ 312 (ತಿಲಕ್ ವರ್ಮಾ ಅಜೇಯ 116, ಕವುರಿ ಸಾಯಿತೇಜ 13, ಅರ್ಷದೀಪ್ ಸಿಂಗ್ 59ಕ್ಕೆ2, ಅನ್ಷುಲ್ ಕಂಬೋಜ್ 58ಕ್ಕೆ2, ಗುರ್ನೂರ್ ಬ್ರಾರ್ 88ಕ್ಕೆ4, ಅಬಿದ್ ಮುಷ್ತಾಕ್ 41ಕ್ಕೆ1) ಎರಡನೇ ಇನಿಂಗ್ಸ್: 66 ಓವರ್‌ಗಳಲ್ಲಿ 7ಕ್ಕೆ256 (ಸನತ್ ಸಂಗ್ವಾನ್ 76, ಆಯುಷ್ ದೊಸೆಜಾ 52, ಆಯುಷ್ ಬಡೋನಿ 31, ನಿಶಾಂತ್ ಸಂಧು ಬ್ಯಾಟಿಂಗ್ 20,  ಅನ್ಷುಲ್ ಕಂಬೋಜ್ 29, ಎಂ.ಡಿ. ನಿಧೀಶ್ 47ಕ್ಕೆ2, ಕವುರಿ ಸಾಯಿತೇಜ 34ಕ್ಕೆ2, ಶ್ರೇಯಸ್ ಗೋಪಾಲ್ 77ಕ್ಕೆ2) 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ