ನಟ ಅಜಿತ್ ಕುಮಾರ್‌ಗೆ ಪುಟಾಣಿ ರೇಸಿಂಗ್ ಕಾರು ಉಡುಗೊರೆ ನೀಡಿದ ಸಿಎಂ ಜೋಸೆಫ್ ವಿಜಯ್

ನಟ ಅಜಿತ್ ಕುಮಾರ್‌ಗೆ ಪುಟಾಣಿ ರೇಸಿಂಗ್ ಕಾರು ಉಡುಗೊರೆ ನೀಡಿದ ಸಿಎಂ ಜೋಸೆಫ್ ವಿಜಯ್

ನಟ ಅಜಿತ್ ಕುಮಾರ್‌ಗೆ ಪುಟಾಣಿ ರೇಸಿಂಗ್ ಕಾರು ಉಡುಗೊರೆ ನೀಡಿದ ಸಿಎಂ ಜೋಸೆಫ್ ವಿಜಯ್

ತಮಿಳುನಾಡು ಮುಖ್ಯಮಂತ್ರಿ, ನಟ ಜೋಸೆಫ್ ವಿಜಯ್ ಅವರು ಲಂಡನ್‌ನ ಸಿಲ್ವರ್‌ಸ್ಟೋನ್ ರೇಸ್‌ಟ್ರ್ಯಾಕ್‌ನಲ್ಲಿ ನಡೆದ ನಟ-ರೇಸರ್ ಅಜಿತ್ ಕುಮಾರ್ ಅವರ ‘ಮಿಚೆಲಿನ್ ಲಿ ಮ್ಯಾನ್ಸ್ ಕಪ್’ (Michelin Le Mans Cup) ಕಾರ್ ರೇಸ್ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ಸಿ. ಜೋಸೆಫ್ ವಿಜಯ್ ಅವರು ನಟ ಅಜಿತ್ ಕುಮಾರ್‌ಗೆ ಉಡುಗೊರೆ ಒಂದನ್ನು ಕೊಟ್ಟಿದ್ದಾರೆ. ಪಂದ್ಯಾವಳಿಯ ವೀಕ್ಷಣೆಗೆ ಆಗಮಿಸಿದ್ದ ಸಿಎಂ ವಿಜಯ್, ಅಜಿತ್‌ಗೆ ಪುಟಾಣಿ ರೇಸಿಂಗ್ ಕಾರು (Miniature Race Car) ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಪುಟ್ಟ ಕಾರಿನ ಮೇಲೆ ವಿಜಯ್ ಅವರು, ‘ಪ್ರಿಯಮುಡನ್ (ಪ್ರೀತಿಯಿಂದ) ವಿಜಯ್, ನನ್ನ ಪ್ರೀತಿಯ ಸಹೋದರ ಅಜಿತ್‌ಗೆ’ ಎಂದು ಹಸ್ತಾಕ್ಷರ ಬರೆದು ನೀಡಿದ್ದಾರೆ. ಅಜಿತ್ ಖುಷಿಯಿಂದ ಉಡುಗೊರೆಯನ್ನು ಸ್ವೀಕರಿಸಿ, ಬಳಿಕ ಅದಕ್ಕೆ ಪ್ರತಿಯಾಗಿ ತಮ್ಮ ಕ್ರೀಡಾ ಹೆಲ್ಮೆಟ್ ಮೇಲೆ ‘ಲವ್ ಅಜಿತ್’ ಎಂದು ಬರೆದು ವಿಜಯ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ರೇಸ್‌ ಆರಂಭಕ್ಕೂ ಮುನ್ನ ವಿಜಯ್ ಅವರು ಅಜಿತ್ ಅವರಿದ್ದ ಟೆಂಟ್‌ನತ್ತ ಓಡಿಬಂದು ಪ್ರೀತಿಯಿಂದ ಅಪ್ಪಿಕೊಂಡರು. ಈ ವೇಳೆ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ‘ಟಿವಿಕೆ.. ಟಿವಿಕೆ..’ ಎಂದು ಕೂಗಲು ಪ್ರಾರಂಭಿಸಿದಾಗ, ಸಿಎಂ ವಿಜಯ್ ಅವರು ತಕ್ಷಣ ಕೈಸನ್ನೆ ಮಾಡಿ ತಮ್ಮ ಬದಲು ರೇಸರ್ ಅಜಿತ್ ಕುಮಾರ್ ಅವರನ್ನು ಪ್ರೋತ್ಸಾಹಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಇನ್ನು, ಈ ಪಂದ್ಯಾವಳಿಯ ವೀಕ್ಷಕರ ಗ್ಯಾಲರಿಯಲ್ಲಿ ನಟಿ ತ್ರಿಷಾ ಕೃಷ್ಣನ್ ಹಾಗೂ ಟಿವಿಕೆ ಪಕ್ಷದ ಪ್ರಮುಖ ನಾಯಕ ಆದವ್ ಅರ್ಜುನ್ ಉಪಸ್ಥಿತರಿದ್ದರು. ಇಬ್ಬರೂ ಜನಪ್ರಿಯ ನಟರು ಪರಸ್ಪರ ಅಪ್ಪಿಕೊಂಡ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ