ಜೆನ್‌– ಝೀ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಕಾಂಗ್ರೆಸ್‌ನಿಂದ ತರಬೇತಿ ಕೇಂದ್ರ

ಜೆನ್‌– ಝೀ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಕಾಂಗ್ರೆಸ್‌ನಿಂದ ತರಬೇತಿ ಕೇಂದ್ರ

ಜೆನ್‌– ಝೀ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಕಾಂಗ್ರೆಸ್‌ನಿಂದ ತರಬೇತಿ ಕೇಂದ್ರ

ಬೆಂಗಳೂರು: ಬಿಜೆಪಿಯು ದಕ್ಷಿಣ ಭಾರತದಲ್ಲಿ ತನ್ನ ನೆಲೆ ವಿಸ್ತರಿಸುವುದನ್ನು ತಡೆಯಲು ಮುಂದಾಗಿರುವ ಕಾಂಗ್ರೆಸ್‌, ಜೆನ್‌– ಝೀಗಳನ್ನು ಒಳಗೊಂಡ ಜಾತ್ಯತೀತ, ಧರ್ಮಾತೀತ ಮನೋಭಾವದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ತಯಾರಿ ನಡೆಸಿದೆ.

‘ಬಿಜೆಪಿಯು ಉತ್ತರ ಭಾರತದಲ್ಲಿ ಆಧಿಪತ್ಯ ಸ್ಥಾಪಿಸಿದ್ದರೂ ದಕ್ಷಿಣದ ರಾಜ್ಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪಕ್ಷದ ಬೇರುಗಳನ್ನು ಚಾಚಲು ಅದಕ್ಕೆ ಸಾಧ್ಯವಾಗಿಲ್ಲ. ಬಿಜೆಪಿಯ ಅಸ್ತ್ರವಾಗಿರುವ ಹಿಂದುತ್ವ, ದೇಶಭಕ್ತಿ, ರಾಷ್ಟ್ರಪ್ರೇಮ, ಅಯೋಧ್ಯೆ ವಿವಾದದಂತಹ ವಿಚಾರಗಳಿಗೆ ದಕ್ಷಿಣದ ಮತದಾರರು ಮಣೆ ಹಾಕಿಲ್ಲ. ಯುವಜನರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆದು ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದ ಬಿಜೆಪಿಗೆ ‘ನೀಟ್‌’ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ನಂತರ ದೇಶದ ಎಲ್ಲೆಡೆ ಸದ್ದು ಮಾಡುತ್ತಿರುವ ಜೆನ್‌– ಝೀಗಳು ನುಂಗಲಾರದ ತುತ್ತಾಗಿದ್ದಾರೆ’ ಎಂಬುದು ಕಾಂಗ್ರೆಸ್‌ ಮುಖಂಡರ ಅಭಿಪ್ರಾಯ.

ಇಂತಹ ಸಮಯದಲ್ಲಿ ಯುವಜನರಲ್ಲಿ ಸಂವಿಧಾನದ ಆಶಯಗಳಾದ ಸಮಾನತೆ, ಜಾತ್ಯತೀತತೆ, ಸಮಾಜವಾದ, ಸರ್ವಧರ್ಮ ಸಮನ್ವಯ, ಸ್ವಾತಂತ್ರ್ಯ, ಭ್ರಾತೃತ್ವದಂತಹ ರಾಷ್ಟ್ರೀಯ ಮೌಲ್ಯಗಳನ್ನು ಬಿತ್ತುವ, ಮಹಾತ್ಮ ಗಾಂಧಿ ಅವರ ಆಶಯ ಹಾಗೂ ಕಾಂಗ್ರೆಸ್‌ ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧವಾಗಿರುವ ಪ್ರತ್ಯೇಕ ಪಡೆಯನ್ನು ಸಿದ್ಧಗೊಳಿಸಲು ದಕ್ಷಿಣ ಭಾರತದಲ್ಲೇ ಮೊದಲ ‘ಕಾಂಗ್ರೆಸ್‌ ತರಬೇತಿ ಕೇಂದ್ರ’ವನ್ನು ಸ್ಥಾಪಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಲಕ್ಕೇನಹಳ್ಳಿ ಬಳಿ 4.02 ಎಕರೆ ಪ್ರದೇಶದಲ್ಲಿ ಈ ಕೇಂದ್ರ ತಲೆ ಎತ್ತುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಹಿಂದುತ್ವದ ಮೂಲಕ ಪಕ್ಷ ಸಂಘಟನೆ ಬಲಗೊಳಿಸಿಕೊಳ್ಳುತ್ತಾ ಸಾಗಿರುವ ಸಂಘ ಪರಿವಾರ ಮತ್ತು ಬಿಜೆಪಿಗೆ ಪರ್ಯಾಯವಾಗಿ ಸಂವಿಧಾನದ ಆಶಯಗಳ ಪ್ರತಿಪಾದನೆಗೆ ಯುವಸಮೂಹವನ್ನು ಸಜ್ಜುಗೊಳಿಸಬೇಕಿದೆ. ಜೆನ್‌–ಝೀಗಳು ಕೋಮು, ಧರ್ಮದ ದ್ವೇಷಿಗಳಾಗದಂತೆ ತಡೆಯುವುದು, ಪೊಳ್ಳು ರಾಷ್ಟ್ರೀಯತೆ ಹೆಸರಲ್ಲಿ ಪರಧರ್ಮ, ಜಾತಿ, ಸಮುದಾಯಗಳ ವಿರುದ್ಧ ವಿಷಬೀಜ ಬಿತ್ತುತ್ತಿರುವ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವಿದ್ಯಾರ್ಥಿ ಸಮೂಹವನ್ನು ದಾರಿ ತಪ್ಪಿಸುವ ಆರ್‌ಎಸ್‌ಎಸ್‌, ಬಿಜೆಪಿಯ ತತ್ವ, ಸಿದ್ಧಾಂತಗಳ ತಂತ್ರಕ್ಕೆ ಒಳಗಾಗದಂತೆ ಎಚ್ಚರವಹಿಸಬೇಕಿದೆ. ಅಂತಹ ಆಶಯಗಳನ್ನು ಸಾಕಾರಗೊಳಿಸಲು ತರಬೇತಿ ಕೇಂದ್ರ ಶ್ರಮಿಸಲಿದೆ’ ಎನ್ನುತ್ತಾರೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌. 

‘ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ಡಾ‌. ನಾ.‌ಸು.ಹರ್ಡೀಕರ್‌ ರಾಷ್ಟ್ರೀಯ ಸೇವಾದಳ ತರಬೇತಿ ಅಕಾಡೆಮಿ ಮತ್ತು ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ತರಬೇತಿ ಕೇಂದ್ರ ನಡೆಸಲಾಗುತ್ತಿದೆ. ಆದರೆ, ಅದು ಟ್ರಸ್ಟ್‌ ಮೂಲಕ ನಡೆಯುತ್ತಿದೆ. ಅಲ್ಲಿ ಸೇವಾದಳದ ಕಾರ್ಯಕರ್ತರಲ್ಲದೆ, ಜಾತ್ಯತೀತ ಮನೋಭಾವದ ಎಲ್ಲರಿಗೂ ತರಬೇತಿ ನೀಡಲಾಗುತ್ತಿದೆ. ಆದರೆ, ನೆಲಮಂಗಲದ ಕೇಂದ್ರದಲ್ಲಿ ಕಾಂಗ್ರೆಸ್‌ ಪರ ಒಲವು ತೋರುವ ಯುವಕ–ಯುವತಿಯರಿಗೆ, ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರಿಗಷ್ಟೇ ತರಬೇತಿ ನೀಡಲಾಗುವುದು’ ಎಂದು ಹರಿಪ್ರಸಾದ್‌ ಮಾಹಿತಿ ನೀಡಿದರು. 

ವರ್ಷದ 365 ದಿನವೂ ಕಾರ್ಯನಿರ್ವಹಣೆ

ನೆಲಮಂಗಲದ ಬಳಿ ನಿರ್ಮಾಣವಾಗಲಿರುವ ಕಾಂಗ್ರೆಸ್‌ ತರಬೇತಿ ಕೇಂದ್ರವು ವರ್ಷದ 365 ದಿನವೂ ಕಾರ್ಯನಿರ್ವಹಿಸಲಿದೆ.  ಪ್ರತಿದಿನ 500ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲು ಸ್ಥಳಾವಕಾಶ ಒಳಗೊಂಡ ಸಭಾಂಗಣ ತರಬೇತಿಯ ಅವಧಿಯಲ್ಲಿ ಉಳಿದುಕೊಳ್ಳಲು ಯುವಕ–ಯುವತಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇರಲಿದೆ. ಉಚಿತ ಊಟ–ಉಪಾಹಾರವನ್ನೂ ನೀಡಲಾಗುತ್ತದೆ. ನಿತ್ಯವೂ ಕಾರ್ಯಾಗಾರ ವಿಚಾರ ಸಂಕಿರಣಗಳು ಉಪನ್ಯಾಸ ಸಂವಾದ ಚರ್ಚೆಗಳು ವಿಚಾರ ವಿನಿಮಯ ನಡೆಯಲಿದೆ. ಪ್ರತಿಯೊಬ್ಬರಿಗೂ ಕನಿಷ್ಠ 7ರಿಂದ 15 ದಿನಗಳ ತರಬೇತಿ ಇರುತ್ತದೆ. ತರಬೇತಿ ಕೇಂದ್ರವನ್ನು ಕೆಪಿಸಿಸಿ ನಿರ್ವಹಣೆ ಮಾಡಲಿದೆ. ನಿರ್ಮಾಣದ ಸಂಪೂರ್ಣ ವೆಚ್ಚ ನಿರ್ವಹಣಾ ವೆಚ್ಚವನ್ನೂ ಕಾಂಗ್ರೆಸ್‌ ಭರಿಸಲಿದೆ. ಅದಕ್ಕಾಗಿ ಪ್ರತ್ಯೇಕ ನಿಧಿ ಸ್ಥಾಪಿಸಲಾಗುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ