
ಅಭಿನವ್ ಮನೋಹರ್ ಶತಕ; ಕೆಎಸ್‌ಸಿಎ ಅಧ್ಯಕ್ಷರ ಇಲೆವನ್ ತಂಡಕ್ಕೆ ಸೋಲು
ಬೆಂಗಳೂರು: ಅಭಿನವ್ ಮನೋಹರ್ ಶತಕ ಗಳಿಸಿದರು. ಆದರೂ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್ ತಂಡವು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಅಲೂರಿನ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಡಾ. (ಕ್ಯಾಪ್ಟನ್) ಕೆ. ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯ ಪಂದ್ಯದಲ್ಲಿ ಕೆಎಸ್‌ಸಿಎ ಅಧ್ಯಕ್ಷರ ತಂಡವು ವಿದರ್ಭ ಎದುರು ಇನಿಂಗ್ಸ್ ಮತ್ತು 80 ರನ್‌ಗಳಿಂದ ಸೋತಿತು. ಇದರಿಂದಾಗಿ ತಂಡದ ಸೆಮಿಫೈನಲ್ ಪ್ರವೇಶದ ಹಾದಿಯು ಮತ್ತಷ್ಟು ಕಠಿಣವಾಯಿತು.
ತಂಡದ ಮನೋಹರ್ ಅವರು 89 ಎಸೆತಗಳಲ್ಲಿ 102 ರನ್ ಗಳಿಸಿ, ಹೋರಾಟ ತೋರಿದರು.
ಸಂಕ್ಷಿಪ್ತ ಸ್ಕೋರು: ಆಲೂರು 2: ಮೊದಲ ಇನಿಂಗ್ಸ್: ವಿದರ್ಭ: 120 ಓವರ್‌ಗಳಲ್ಲಿ 5ಕ್ಕೆ 530. ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ಃ 231. ಎರಡನೇ ಇನಿಂಗ್ಸ್ (ಫಾಲೋ ಆನ್) 47.5 ಓವರ್‌ಗಳಲ್ಲಿ 219 (ಅನೀಶ್ ಕೆವಿ 33, ಧ್ರುವ್ ಪಿ 30, ಅಭಿನವ್ ಮನೋಹರ್ 102; ಗೌರವ್ ಫರ್ದೆ 5-84, ತೇಜಸ್ ಸೋನಿ 2-23, ಗಣೇಶ್ ಭೋಂಸ್ಲೆ 3-47) ಫಲಿತಾಂಶ: ವಿದರ್ಭ ತಂಡಕ್ಕೆ ಇನಿಂಗ್ಸ್ ಮತ್ತು 80 ರನ್ ಜಯ.
ಚಿನ್ನಸ್ವಾಮಿ ಕ್ರೀಡಾಂಗಣ–ಕೆಎಸ್‌ಸಿಎ ಇಲೆವನ್: 71 ಓವರ್‌ಗಳಲ್ಲಿ 247 ಹಾಗೂ 5ಕ್ಕೆ213 (ಅನೀಶ್ವರ್ ಗೌತಮ್ 76, ಯಶೋವರ್ಧನ್ ಪರಂತಾಪ್ ಔಟಾಗದೆ 66 ,ಅಥರ್ವ ಅಂಕೋಲೇಕರ್ 77ಕ್ಕೆ2, ಮ್ಯಾಕ್ಸ್‌ವೆಲ್ ಸ್ವಾಮಿನಾಥನ್ 49ಕ್ಕೆ2): ಮುಂಬೈ: 106.2 ಓವರ್‌ಗಳಲ್ಲಿ 404 (ದಿವ್ಯಾಂಶ್ ಸಕ್ಸೇನಾ 133, ಅಂಗಕ್ರಿಷ್ ರಘುವಂಶಿ 29, ಸುವೇದ್ ಪಾರ್ಕರ್ 41, ಮನನ್ ಭಟ್ 43, ಸರ್ಫರಾಜ್ ಖಾನ್ 58, ಮ್ಯಾಕ್ಸ್‌ವೆಲ್ ಸ್ವಾಮಿನಾಥನ್ 47, ಸಿಲ್ವೆಸ್ಟರ್ ಡಿಸೋಜಾ 28, ಶಮಂತ್ ಎಸ್.ಎಂ. 97ಕ್ಕೆ5, ಅಭಿಷೇಕ್ ಅಹ್ಲಾವತ್ 81ಕ್ಕೆ2, ಕೀರ್ತಿ ಎಂ 54ಕ್ಕೆ2)
ಐಎಎಫ್ ಕ್ರೀಡಾಂಗಣ: ಮಧ್ಯಪ್ರದೇಶಃ 9ಕ್ಕೆ 493 ಹಾಗೂ 33 ಓವರ್‌ಗಳಲ್ಲಿ 2ಕ್ಕೆ 145 (ಹರ್ಷ್ ಗಾವ್ಳಿ 47, ಯಶ್ ದುಬೆ ಔಟಾಗದೆ 69 ) ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: 9ಕ್ಕೆ373 (ವಿಜಯ್ ರಾಜ್ ಬಿ 112, ನಿಕಿನ್ ಜೋಸ್ 34, ರೇವಂತ್ ಬೈರಿ 51, ಧೀರಜ್ ಜೆ ಗೌಡ 88, ಆರ್ಯನ್ ಪಾಂಡೆ 61ಕ್ಕೆ3, ಅಮನ್ ಭಡೋರಿಯಾ 65ಕ್ಕೆ3)
ಮೈಸೂರು: ಆಂಧ್ರ: 56.2 ಓವರ್‌ಗಳಲ್ಲಿ 354 ಮತ್ತು 179 (ರಿಕಿ ಭುಯಿ 79; ಹಾರ್ದಿಕ್ ರಾಜ್ 46ಕ್ಕೆ5, ಆದಿತ್ಯ ಗೋಯಲ್ 19ಕ್ಕೆ2), ಕೆಎಸ್‌ಸಿಎ ಕಂಬೈನ್ಡ್ ಇಲೆವನ್: 35 ಓವರ್‌ಗಳಲ್ಲಿ 208 ಹಾಗೂ 2 ವಿಕೆಟ್‌ಗೆ 134 (ಸುಹಾಸ್ ಔಟಾಗದೆ 65, ಹರ್ಷಿಲ್ 39)
ಕಿಣಿ ಸ್ಪೋರ್ಟ್ಸ್ ಅರೆನಾ: ಯುಟಿ ಕ್ರಿಕೆಟ್ ಚಂಡೀಗಢಃ 53 ಓವರ್‌ಗಳಲ್ಲಿ 399 ಮತ್ತು 7ಕ್ಕೆ202 (ಅರ್ಜುನ್ ಆಜಾದ್ 41, ಮಾನವ್ ವೊಹ್ರಾ 58, ಶಿವಮ್ ಭಾಂಬರಿ 26, ಅಕ್ಷಿತ್ ರಾಣಾ 30 ; ಹಿತೇಶ್ ವಾಲುಂಜ್ 75ಕ್ಕೆ6). ಮಹಾರಾಷ್ಟ್ರಃ 88 ಓವರ್‌ಗಳಲ್ಲಿ 340 (ಸಚಿನ್ ದಾಸ್ 29, ದಿಗ್ವಿಜಯ್ ಪಾಟೀಲ 107, ಸಿದ್ದೇಶ್ ವೀರ್ 55, ಋಷಿಕೇಶ್ ಸೋನವಾನೆ 65, ತನಯ್ ಸಂಘವಿ 26. ಜಗ್ಜಿತ್ 47ಕ್ಕೆ2, ವಿಶು ಕಶ್ಯಪ್ 32ಕ್ಕೆ2, ನಿಶುಂಕ್ 107ಕ್ಕೆ 4)