ಬಳ್ಳಾರಿ ಚಲೋ: ಕುಡತಿನಿ ಭೂ ಸಂತ್ರಸ್ಥರ ಪರ ನಿಲ್ಲುವುದಾಗಿ ಬಿಜೆಪಿ ಭರವಸೆ

ಬಳ್ಳಾರಿ ಚಲೋ: ಕುಡತಿನಿ ಭೂ ಸಂತ್ರಸ್ಥರ ಪರ ನಿಲ್ಲುವುದಾಗಿ ಬಿಜೆಪಿ ಭರವಸೆ

ಬಳ್ಳಾರಿ ಚಲೋ: ಕುಡತಿನಿ ಭೂ ಸಂತ್ರಸ್ಥರ ಪರ ನಿಲ್ಲುವುದಾಗಿ ಬಿಜೆಪಿ ಭರವಸೆ

ಬಳ್ಳಾರಿ: ಕುಡತಿನಿ ಭೂಸಂತ್ರಸ್ಥರ ಪರವಾಗಿ ನಿಲ್ಲುವುದಾಗಿಯೂ, ಸದನದಲ್ಲಿ ರೈತರ ಪರ ಧನಿ ಎತ್ತುವುದಾಗಿಯೂ ಬಿಜೆಪಿ ನಾಯಕರು ಹೋರಾಟ ನಿರತರಿಗೆ ಭರವಸೆ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ 'ಬಳ್ಳಾರಿ ಚಲೋ' ಪಾದಯಾತ್ರೆಯು ಬುಧವಾರ ಕುಡತಿನಿ ಮೂಲಕ ಬಳ್ಳಾರಿ ಕಡೆಗೆ ಸಾಗಿತು. ಮಾರ್ಗ ಮಧ್ಯೆ ರೈತರ ಧರಣಿ ಸ್ಥಳಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿದರು.

'2012ರಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕೈಗಾರಿಕೆ ಉದ್ದೇಶಕ್ಕೆ ಕುಡುತಿನಿ ಬಳಿ ಸಾವಿರಾರು ಎಕರೆ ಭೂಮಿಯನ್ನು ಕೆ ಐ ಎ ಡಿ ಬಿ ಮೂಲಕ ವಶಕ್ಕೆ ಪಡೆಯಿತು. ಆಗ ಅವೈಜ್ಞಾನಿಕ ಭೂಬೆಲೆ ನಿಗದಿ ಮಾಡಲಾಗಿತ್ತು. ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ನಾವು ಹೋರಾಟ ಮಾಡುತ್ತಿದ್ದೇವೆ. ಈ‌ ಮಧ್ಯೆ ಭೂಮಿಯನ್ನು ಬೇರೆಯವರಿಗೆ ವರ್ಗಾಯಿಸುವ ಪ್ರಯತ್ನ ನಡೆಯುತ್ತಿದೆ' ಎಂದು ರೈತರು ಬಿಜೆಪಿ ನಾಯಕರಿಗೆ ದೂರಿದರು.

ರೈತರ ಸಮಸ್ಯೆ ಆಲಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ 'ಸಮಸ್ಯೆ ಈಗ ನನ್ನ ಗಮನಕ್ಕೆ ಬಂದಿದೆ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ' ಎಂದರು.

ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಮಾತನಾಡಿ, ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿಯೂ ಹೇಳಿದರು.

ನಂತರ ಮಾತನಾಡಿದ ಮಾಜಿ ಸಚಿವ ಬಿ ಶ್ರೀರಾಮುಲು, ಕುಡತಿಮಿ ರೈತರ ಸಮಸ್ಯೆ ಬಗ್ಗೆ ತಮಗೆ ಸ್ಪಷ್ಟ ಅರಿವು ಇರುವುದಾಗಿಯೂ, ಹೋರಾಟಗಾರರ ಪರವಾಗಿ ನಿಲ್ಲುವುದಾಗಿಯೂ ಹೇಳಿದರು.

ಬಳಿಕ ಪಾದಯಾತ್ರೆಯು ಬಳ್ಳಾರಿ ಕಡೆಗೆ ಸಾಗಿತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ