
ಕಲಬುರಗಿ ಶಾಲಾ ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕಲಬುರಗಿ: ನಗರದ ಅಪ್ಪಾ ಪಬ್ಲಿಕ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಈಚೆಗೆ ಸಂತ ಜಾನ್ ಶಾಲೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಗೀತಗಾಯನ (ದೇಶ ಭಕ್ತಿ) ಸ್ಪರ್ಧೆಯಲ್ಲಿ ಜಯ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿವೆ.
ಅಪ್ಪಾ ಪಬ್ಲಿಕ್ ಶಾಲೆಯ ಸ್ಕೌಟ್ಸ್ ತಂಡವು ಪ್ರಥಮ ಹಾಗೂ ಗೈಡ್ಸ್ ದ್ವಿತೀಯ ಸ್ಥಾನ ಪಡೆದಿದೆ. ಸ್ಕೌಟ್ಸ್‌ನಲ್ಲಿ 12 ತಂಡಗಳು ಮತ್ತು ಗೈಡ್ಸ್‌ನಲ್ಲಿ 13 ತಂಡಗಳು ಭಾಗವಹಿಸಿದ್ದವು.
ಸ್ಕೌಟ್ಸ್ ತಂಡ: ಸಮರ್ಥ್ ಬಿ.ಹಡಪದ, ಶುಭಮ್ ಹಲಮಠ, ಪ್ರಜ್ವಲ್ ಸಿರಸಗಿ, ಅಲೋಕ್ ಕೋಸಗಿ, ಸುದರ್ಶನ್ ಕೋಲ್ಕಾರ್, ಶಿವರಾಜ್ ಪೂಜಾರಿ, ಶಿವಾನಂದ ಬಿ.ಪಾಟೀಲ, ಪೃಥ್ವಿರಾಜ್.
ಗೈಡ್ಸ್ ತಂಡ: ಐಶ್ವರ್ಯ ಕೆ., ಆಧ್ಯಾ ಧುತ್ತರಗಿ, ಆರುಷಿ ದೊಡ್ಡಮನಿ, ಸೌಮ್ಯ ಸಾಲಿ, ಶ್ರೀಲಕ್ಷ್ಮಿ ಸಜ್ಜನ್, ಐಶ್ವರ್ಯ ಅಡಕಿ, ಮಯೂರಿ ರೆಡ್ಡಿ, ಸಾನ್ವಿ.