ಲಕ್ಷ್ಮೇಶ್ವರ: ನೇಪಥ್ಯಕ್ಕೆ ಸರಿದ ಭಜನಾ ಮಂಡಳಿಗಳು

ಲಕ್ಷ್ಮೇಶ್ವರ: ನೇಪಥ್ಯಕ್ಕೆ ಸರಿದ ಭಜನಾ ಮಂಡಳಿಗಳು

ಲಕ್ಷ್ಮೇಶ್ವರ: ನೇಪಥ್ಯಕ್ಕೆ ಸರಿದ ಭಜನಾ ಮಂಡಳಿಗಳು

ಲಕ್ಷ್ಮೇಶ್ವರ: ಶ್ರಾವಣ ಮಾಸದಾದ್ಯಂತ ನಸುಕಿನಲ್ಲಿ ಊರ ತುಂಬ ಭಜನೆ ಪದಗಳು ಕೇಳಿ ಬರುತ್ತಿದ್ದವು. ಎಲ್ಲೆಡೆ ಭಕ್ತಿಯ ವಾತಾವರಣ ಕಂಡು ಬರುತ್ತಿತ್ತು. ಈಗ ಈ ಪದ್ಧತಿ ಕಡಿಮೆಯಾಗಿದೆ, ಭಜನಾ ತಂಡಗಳ ಸಂಖ್ಯೆಯೂ ಕಡಿಮೆಯಾಗಿದೆ. ಬೆರಳೆಣಿಕೆಯಷ್ಟು ಉಳಿದ ಭಜನಾ ತಂಡಗಳು ಸಂಕಷ್ಟ ಎದುರಿಸುತ್ತಿವೆ.

ಎರಡೂವರೆ ದಶಕಗಳ ಹಿಂದೆ ಲಕ್ಷ್ಮೇಶ್ವರದ ವಿವಿಧ ಓಣಿಗಳಲ್ಲಿ ಹತ್ತಾರು ಭಜನಾ ತಂಡಗಳು ಇದ್ದವು. ಶ್ರಾವಣ ಮಾಸ ಮುಗಿಯುವವರೆಗೆ ವಿವಿಧೆಡೆ ತೆರಳಿ, ಭಜನೆ ನಡೆಸುತ್ತಿದ್ದರು. ದೇವಸ್ಥಾನ, ಕಲ್ಯಾಣಮಂಟಪ, ಸಮು ದಾಯ ಭವನ ಹಾಗೂ ಮನೆಗಳಲ್ಲೂ ತಾಳ, ಜಾಗಟೆ, ಡಗ್ಗಾದೊಂದಿಗೆ ಭಜನೆ ಸುಶ್ರಾವ್ಯವಾಗಿ ಕೇಳಿ ಬರುತ್ತಿತ್ತು.

ಪಟ್ಟಣದ ಸೊಪ್ಪಿನಕೇರಿಯ ಜಂತ್ಲಿ ಬಸವೇಶ್ವರ, ಇಟಗಿ ಬಸವೇಶ್ವರ, ಬಸ್ತಿ ಕೇರಿ, ಹಾವಳಿ ಆಂಜನೇಯ ದೇವಸ್ಥಾನ, ಬಸ್ತಿಬಣದ ಮಹಾಕವಿ ಪಂಪ ಭಜನಾ ಮಂಡಳಿ, ಭೋವಿ ಓಣಿಯ ಭಜನಾ ತಂಡ, ಶಾಂಭವಿ ಭಜನಾ ತಂಡ ಗಳು ಸೋಮೇಶ್ವರ, ವೀರಭದ್ರೇಶ್ವರ, ಆಂಜನೇಯ, ಈಶ್ವರ ದೇವಸ್ಥಾನ ಗಳಲ್ಲಿ ಭಜನೆ ನಡೆಸಿಕೊಡುತ್ತಿದ್ದರು. ಭಜನೆ ಕೇಳಲೆಂದೇ ಜನರು ರಾತ್ರಿಯಿಡೀ ದೇವಸ್ಥಾನದಲ್ಲಿ ಕುಳಿತುಕೊಳ್ಳುತ್ತಿದ್ದರು, ಇಲ್ಲವೇ ಮುಂಜಾನೆಯೇ ಎದ್ದು ದೇವಸ್ಥಾನಕ್ಕೆ ಬರುತ್ತಿದ್ದರು.

‘ಭಜನಾ ತಂಡಗಳ ಸದಸ್ಯರು ಬಿಳಿ ಬಟ್ಟೆ, ಕೇಸರಿ ಶಾಲು ಧರಿಸುತ್ತಾರೆ. ಅವ ರಲ್ಲೊಬ್ಬರು ಕೈಯಲ್ಲಿ ದೇವರ ಭಾವಚಿತ್ರ ಹಿಡಿದುಕೊಂಡು ಮುಂದಿರುತ್ತಾರೆ. ನಸುಕಿನಲ್ಲಿ ದೇವರ ನಾಮಸ್ಮರಣೆ ಹಾಗೂ ಭಜನೆಯೊಂದಿಗೆ ದಿನ ಆರಂಭಿಸುವುದು ವಾಡಿಕೆಯಾಗಿತ್ತು. ಇದರಿಂದ ಮನಃ ಶಾಂತಿ ಸಿಗುತ್ತದೆ ಎಂದೂ ಜನರು ನಂಬು ತ್ತಿದ್ದರು. ತಲೆಮಾರಿನಿಂದ ತಲೆಮಾರಿಗೆ ಸಾಗಿಬಂದ ಈ ಪರಂಪರೆ ಕೆಲವು ಕಡೆಗೆ ಮಾತ್ರ ಜೀವಂತವಾಗಿದೆ’ ಎಂದು ಊರಿನ ಮುಖಂಡರು ತಿಳಿಸಿದರು.

‘ನಮ್ಮ ಓಣಿಯಲ್ಲಿ ಹಿಂದಿನ ಕಾಲ ದಿಂದಲೂ ಪಾಲಿಸಿಕೊಂಡು ಬಂದಿರುವ ಭಜನಾ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿದ್ದೇವೆ. ಆದರೆ, ಈಗಿನ ಪೀಳಿಗೆಯವರು ಮೊಬೈಲ್‌ ಹಾಗೂ ದುಶ್ಚಟಗಳ ದಾಸರಾಗುತ್ತಿರುವುದರಿಂದ ಭಜನಾ ಸಂಪ್ರದಾಯದಿಂದ ದೂರ ಉಳಿದಿದ್ದಾರೆ. ಮುಂದಿನ ಪೀಳಿಗೆಗೆ ಈ ಪರಂಪರೆ ಪರಿಚಯ ಸಾಧ್ಯವಾಗದೇನೋ’ ಎಂದು ಭಜನಾ ಕಲಾವಿದ ಚನ್ನಪ್ಪ ಚಿಂಚಲಿ ಹೇಳಿದರು.

‘ಒಗ್ಗಟ್ಟಿನ ಮಂತ್ರ ಸಾರುವ ಭಜನೆ’

‘ಜಾತಿ, ಧರ್ಮ, ಮತ, ಪಂಥ ಎನ್ನದೆ ಓಣಿಯ ಎಲ್ಲರೂ ಭಜನೆಯಲ್ಲಿ ಪಾಲ್ಗೊಳ್ಳುವುದು ಒಗ್ಗಟ್ಟಿನ ಪ್ರತೀಕವಾಗಿತ್ತು. ಭಜನಾ ಸಂಸ್ಕೃತಿ ಸಾಮಾಜಿಕ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಪರಂಪರೆ ಕೊಂಡಿಯಾಗಿದೆ. ಎಲ್ಲ ವಯಸ್ಸಿನವರೂ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಭಜನೆಯ ವೈಭವ ಮರುಕಳಿಸಿದರೆ ದೇಸಿ ಸಂಸ್ಕೃತಿ, ಪರಂಪರೆ ಮುಂದುವರಿಯುತ್ತದೆ. ಭಜನಾ ಕಲಾವಿದರ ಬದುಕಿಗೂ ನೆರವಾಗುತ್ತದೆ’ ಎಂದು ಭಜನಾ ಕಲಾವಿದ ಭರಮಪ್ಪ ಕೊಡ್ಲಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-23-1559866721

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ