
ಬೈಕ್ ಸವಾರನ ಮೇಲೆ ಹರಿದ ಹಾಲಿನ ಟ್ಯಾಂಕರ್: ಸ್ಥಳದಲ್ಲೇ ಸಾವು
ಕುಶಾಲನಗರ: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆಗುರುಳಿದ ಬೈಕ್ ಸವಾರನ ಮೇಲೆ ಹಾಲಿನ ಟ್ಯಾಂಕರ್ ಹರಿದು ಬ್ಯಾಡಗೊಟ್ಟ ಗ್ರಾಮದ ನಿವಾಸಿ ಕಾರ್ಮಿಕ ಸುಬ್ರಮಣಿ (32) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ.
ಬೈಕಿನ್ ಹಿಂಬದಿ ಸವಾರ ಕಾರ್ತಿಕ್ ಎಂಬವರ ಕಾಲು ಮುರಿದಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
ಕುಶಾಲನಗರದಿಂದ ಕೂಡಿಗೆಯತ್ತ ತೆರಳುತ್ತಿದ್ದ ಯುವಕರು ಹಾಲಿನ ಟ್ಯಾಂಕರ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರು ಬದಿಯಿಂದ ಬಂದ ಮತ್ತೊಂದು ಬೈಕ್ ಗೆ ಡಿಕ್ಕಿಯಾಗಿ ನೆಲಕ್ಕುರುಳಿದ ಸಂದರ್ಭ ಹಿಂದಿನಿಂದ ಬಂದ ಹಾಲಿನ ಟ್ಯಾಂಕರ್ ಬೈಕ್ ಸವಾರನ ಮೇಲೆ ಹರಿದಿದೆ.
ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಎಚ್.ಟಿ.ಗೀತಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.