ಗುಡಿಸಲು ನಿವಾಸಿಗಳಿಗೆ ನಿವೇಶನ ಕಲ್ಪಿಸಿ: ತಹಶೀಲ್ದಾರ್‌ಗೆ ಮನವಿ

ಗುಡಿಸಲು ನಿವಾಸಿಗಳಿಗೆ ನಿವೇಶನ ಕಲ್ಪಿಸಿ: ತಹಶೀಲ್ದಾರ್‌ಗೆ ಮನವಿ

ಗುಡಿಸಲು ನಿವಾಸಿಗಳಿಗೆ ನಿವೇಶನ ಕಲ್ಪಿಸಿ: ತಹಶೀಲ್ದಾರ್‌ಗೆ ಮನವಿ

ಲಕ್ಷ್ಮೇಶ್ವರ: ಪಟ್ಟಣದ ದೊಡ್ಡೂರು ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಜಾಗೆಯಲ್ಲಿ ವಾಸಿಸುತ್ತಿರುವ ಬಡವರಿಗೆ ಸೂಕ್ತ ನಿವೇಶನ ಕಲ್ಪಿಸಬೇಕು ಎಂದು ಒತ್ತಾಯಿಸಿದ ಕೊರಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲೇಶ ಭಜಂತ್ರಿ ಅವರು ಸೋಮವಾರ ತಹಶೀಲ್ದಾರ್‌ ಎಂ.ಧನಂಜಯ ಅವರಿಗೆ ಮನವಿ ಸಲ್ಲಿಸಿದರು.

‘ಕಳೆದ 25-30 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದೀಗ ಅದೇ ಜಾಗೆಯಲ್ಲಿ ಪ್ರಜಾಸೌಧ ನಿರ್ಮಿಸಲಾಗುತ್ತಿದ್ದು, ಅಲ್ಲಿನ ಗುಡಿಸಲುಗಳನ್ನು ತೆರವುಗೊಳಿ ಸುತ್ತಿದ್ದಾರೆ. ಅದಕ್ಕೂ ಮೊದಲು ಬಡವರಿಗೆ ಸೂಕ್ತ ಜಾಗೆ ನೀಡುವುದು ಮಾನವೀಯತೆ. ಜಿಲ್ಲಾಡಳಿತ ಅವರಿಗೆ ಶಾಶ್ವತ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.

ಜಿಲ್ಲಾ ಅಲೆಮಾರಿ ಸಮಾಜದ ನಾಮನಿರ್ದೇಶಿತ ಸದಸ್ಯ ರಾಘವೇಂದ್ರ ಪೂಜಾರ, ಯುವ ಮುಖಂಡ ಕೇಶವ ಕಟ್ಟಿಮನಿ ಮಾತನಾಡಿ, ‘ಕಳೆದ ಮೂರು ದಶಕಗಳಿಂದ ವಾಸಿಸುತ್ತಿರುವವರಿಗೆ ಕಾನೂನು ಪ್ರಕಾರ ಈ ಜಾಗೆ ಸೇರಬೇಕು. ಇದೀಗ ಕಟ್ಟಡ ಕಟ್ಟುವ ನೆಪದಲ್ಲಿ ಒಕ್ಕಲೆಬ್ಬಿಸುವುದು ಸರಿಯಲ್ಲ. ಬಡವರಿಗೆ ಅದೇ ಜಾಗೆ ಅಥವಾ ಬೇರೆಡೆ ನಿವೇಶನ ನೀಡಬೇಕು’ ಎಂದು ಆಗ್ರಹಿಸಿದರು.

ಕೊರಮ ಸಮಾಜದ ಜಿಲ್ಲಾ ಉಪಾಧ್ಯಕ್ಷ ಶಂಕ್ರಪ್ಪ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಮುತ್ತು ಭಜಂತ್ರಿ, ಜಿಲ್ಲಾ ಅಲೆಮಾರಿ ಸಮಾಜದ ನಾಮನಿರ್ದೇಶನ ಸದಸ್ಯ ರಮೇಶ ಹಂಗನಕಟ್ಟಿ, ಗದಗ ಬೆಟಗೇರಿ ಕೊರಮ ಸಮಾಜದ ಅಧ್ಯಕ್ಷ ಕರಿಯಪ್ಪ ಭಜಂತ್ರಿ, ನಗರ ಘಟಕದ ಅಧ್ಯಕ್ಷ ನಾಗರಾಜ ಭಜಂತ್ರಿ, ಪ್ರಕಾಶ ಭಜಂತ್ರಿ, ಬಸವರಾಜ ಭಜಂತ್ರಿ, ಮೌನೇಶ ಭಜಂತ್ರಿ, ನಿರ್ಮಲಾ ಶಿರಹಟ್ಟಿ, ಮಂಜವ್ವ ಬಗರಕಾರ, ಫಾತಿಮಾ ಕಲೆಗಾರ್, ಶಾಂತವ್ವ ಭಗರಕಾರ, ಚಂದ್ರಮ್ಮ ಚನ್ನದಾಸರ, ಕಲ್ಲವ್ವ ಬಗರಿಕಾರ, ಗುತ್ತೆಮ್ಮ ರಾಣೆಬೆನ್ನೂರ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ