
ಧರ್ಮಪುರ: ವಾಲ್ಮೀಕಿ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ
ಧರ್ಮಪುರ: ಮಹರ್ಷಿ ವಾಲ್ಮೀಕಿಯವರ ಜೀವನಾದರ್ಶಗಳು ಯುವಪೀಳಿಗೆಗೆ ದಾರಿದೀಪವಾಗಿದ್ದು, ತಪ್ಪದೇ ಪಾಲಿಸ ಬೇಕು ಎಂದು ಆನಂದಪ್ಪ ಗುರೂಜಿ ತಿಳಿಸಿದರು.
ಸಮೀಪದ ತೊರೆ ಓಬೇನಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಕಂಚಿನ ಪ್ರತಿಮೆ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ವಾಲ್ಮೀಕಿ ರಚಿಸಿದ ರಾಮಾಯಣ ದಲ್ಲಿ ಧರ್ಮ, ಸತ್ಯ, ಮಾತಾಪಿತೃ ಭಕ್ತಿ, ಸೋದರತ್ವ, ಆದರ್ಶ ಆಡಳಿತದ ಪರಿಕಲ್ಪನೆಗಳನ್ನು ಕಾಣಬಹುದು. ಈ ಕೃತಿಯು ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ತಿಳಿಸುವ ನೈತಿಕ ಸಂಹಿತೆಯಾಗಿದೆ ಎಂದರು.
ಮುದ್ದುರಂಗಪ್ಪ ಸ್ವಾಮಿ, ಜೆ.ಬಿ.ರಾಜು, ಶ್ರೀನಿವಾಸ್, ಲೋಕೇಶ್, ದಕ್ಷಿಣಮೂರ್ತಿ, ಪ್ರಜ್ವಲ್, ತಿಮ್ಮರಾಜು, ಗುರುಮೂರ್ತಿ, ಶಿವಣ್ಣ, ರಂಗಸ್ವಾಮಿ, ರವಿ, ನಾಗಣ್ಣ, ನವೀನ್, ಶಶಿಧರ್, ಬಸವರಾಜ್, ಪೂಜಾರ್ ನಾಗರಾಜ್ ಉಪಸ್ಥಿತರಿದ್ದರು.