ಯಳಂದೂರು: ಗೌಡಹಳ್ಳಿಯಲ್ಲಿ 30ಕ್ಕೂ ಹೆಚ್ಚು ಜನರಿಗೆ ಜ್ವರ, ಕೀಲುನೋವು

ಯಳಂದೂರು: ಗೌಡಹಳ್ಳಿಯಲ್ಲಿ 30ಕ್ಕೂ ಹೆಚ್ಚು ಜನರಿಗೆ ಜ್ವರ, ಕೀಲುನೋವು

ಯಳಂದೂರು: ಗೌಡಹಳ್ಳಿಯಲ್ಲಿ 30ಕ್ಕೂ ಹೆಚ್ಚು ಜನರಿಗೆ ಜ್ವರ, ಕೀಲುನೋವು

ಯಳಂದೂರು: ತಾಲ್ಲೂಕಿನ ಗೌಡಹಳ್ಳಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಗ್ರಾಮಸ್ಥರು ಜ್ವರದ ಬಾಧೆಯಿಂದ ಬಳಲುತ್ತಿದ್ದು ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ರೋಗ ಬಾಧಿತರ ಕೈ ಹಾಗೂ ಕಾಲುಗಳಲ್ಲಿ ವಿಪರೀತ ಕೀಲು ನೋವು, ಜ್ವರ ಹಾಗೂ ತಲೆನೋವಿನ ಲಕ್ಷಣಗಳು ಕಾಣಿಸಿಕೊಂಡಿದ್ದು ನೋವಿನಿಂದ ನರಳುತ್ತಿದ್ದಾರೆ. ಒಂದು ವಾರದಿಂದ ರೋಗ ಬಾಧೆ ಹೆಚ್ಚಾಗಿದ್ದು ಬಹುತೇಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕುಟುಂಬದಲ್ಲಿ ಒಬ್ಬರಿಗೆ ಬಂದ ಬಳಿಕ ಇತರರಿಗೂ ಹರಡುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

‘ತೀವ್ರ ಜ್ವರದ ಜೊತೆಗೆ ಕೈ ಕಾಲುಗಳ ಕೀಲು ವಿಪರೀತ ನೋಯುತ್ತಿದ್ದು ಯಮಯಾತನೆ ಅನುಭವಿಸುತ್ತಿದ್ದೇವೆ. ಗ್ರಾಮದ ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು ನಂತರವೂ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 30ಕ್ಕೂ ಹೆಚ್ಚು ಮಂದಿ ರೋಗಕ್ಕೆ ತುತ್ತಾಗಿದ್ದಾರೆ ಎಂದು ರೈತ ಮುಖಂಡ ಸೋಮಣ್ಣ ಅಳಲು ತೋಡಿಕೊಂಡರು.

ವೈದ್ಯರು ಚಿಕುನ್‌ಗುನ್ಯಾ ರೋಗದ ಶಂಕೆ ವ್ಯಕ್ತಪಡಿಸಿದ್ದು ನೋವಿಗೆ ಮಾತ್ರೆ ಹಾಗೂ ವಿವಿಧ ಔಷಧಗಳನ್ನು ನೀಡಿದ್ದಾರೆ. ಮನೆ ಮಂದಿ ಎಲ್ಲರೂ ರೋಗದ ಬಾಧೆಯಿಂದ ನರಳುತ್ತಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿನೀಡಿ ಪರಿಶೀಲಿಸಿ ಚಿಕಿತ್ಸೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತಾಲ್ಲೂಕು ವೈದ್ಯಾಧಿಕಾರಿ ಡಾ.ಅರ್ಷದ್ ಪ್ರತಿಕ್ರಿಯಿಸಿ, ‘ರೋಗ ಬಾಧೆಯ ಕುರಿತು ಕ್ಲಸ್ಟರ್‌ ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿಲ್ಲ. ಗ್ರಾಮಕ್ಕೆ ಭೇಟಿನೀಡಿ ರೋಗ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ