ತೆಲುಗು ತಂಡ ಪ್ರಯತ್ನಿಸಿದ್ದ ವಿಮಾನ ಪರಿಕಲ್ಪನೆ ಈಗ ಕನ್ನಡ ಬಿಗ್‌ಬಾಸ್‌ನಲ್ಲಿ

ತೆಲುಗು ತಂಡ ಪ್ರಯತ್ನಿಸಿದ್ದ ವಿಮಾನ ಪರಿಕಲ್ಪನೆ ಈಗ ಕನ್ನಡ ಬಿಗ್‌ಬಾಸ್‌ನಲ್ಲಿ

ತೆಲುಗು ತಂಡ ಪ್ರಯತ್ನಿಸಿದ್ದ ವಿಮಾನ ಪರಿಕಲ್ಪನೆ ಈಗ ಕನ್ನಡ ಬಿಗ್‌ಬಾಸ್‌ನಲ್ಲಿ

ಒಂದೇ ಸಲ ನಾಲ್ಕು ಭಾಷೆಗಳಲ್ಲಿ ಬಿಗ್‌ಬಾಸ್‌ ರಿಯಾಲಿಟಿ ಶೋ ಆರಂಭಗೊಂಡಿದೆ. ವಿಮಾನದ ಪರಿಕಲ್ಪನೆಯಲ್ಲಿ ಕನ್ನಡದ ಬಿಗ್‌ಬಾಸ್ ಆರಂಭವಾಗಿದೆ.

ಈ ಬಗ್ಗೆ ಜಿಯೋಸ್ಟಾರ್‌ನ ದಕ್ಷಿಣ ವಲಯದ ಮುಖ್ಯಸ್ಥ ಕೃಷ್ಣನ್ ಕುಟ್ಟಿ ಮಾತನಾಡಿ, 'ಇದು ಕಳೆದ ವರ್ಷ ತೆಲುಗು ತಂಡ ಪ್ರಯತ್ನಿಸಿದ ಪರಿಕಲ್ಪನೆಯಾಗಿದ್ದು, ಅದಕ್ಕೆ ದೊರೆತ ಅಪಾರ ಪ್ರತಿಕ್ರಿಯೆಯನ್ನು ಗಮನಿಸಿ, ದಕ್ಷಿಣ ಭಾರತದ ಇತರ ಮಾರುಕಟ್ಟೆಗಳಲ್ಲಿಯೂ ಈ ಪರಿಕಲ್ಪನೆಯನ್ನು ಪರಿಚಯಿಸುವುದು ಆಸಕ್ತಿದಾಯಕವಾಗಿರುತ್ತದೆ ಎಂದುಕೊಂಡಿದ್ದೆವು' ಎಂದಿದ್ದಾರೆ.

'ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಜನಸಾಮಾನ್ಯರಲ್ಲಿ ಮೂವರು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಅವರು ಸೆಲೆಬ್ರಿಟಿ ಸ್ಪರ್ಧಿಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದ್ದಾರೆ. ಅಗ್ನಿಪರೀಕ್ಷೆ ಸಾಮಾನ್ಯ ಪ್ರತಿಭೆಗಳಿಗೆ ವಿಭಿನ್ನ ರೀತಿಯ ಗುರುತನ್ನೂ ನೀಡುತ್ತದೆ' ಎಂದಿದ್ದಾರೆ.

'ಈ ಸೀಸನ್‌ನಲ್ಲಿ ದಿನದ 24 ಗಂಟೆ ನೇರಪ್ರಸಾರವನ್ನು ವೀಕ್ಷಕರು ನೋಡಬಹುದು. ಕರ್ನಾಟಕದಲ್ಲಿ ಈ ಸೀಸನ್‌ನ ಜಾಹೀರಾತುದಾರರ ಭಾಗವಹಿಸುವಿಕೆಯಲ್ಲಿ ಶೇ50ರಷ್ಟು ಮೊದಲ ಬಾರಿಗೆ ಜಾಹೀರಾತು ನೀಡುತ್ತಿರುವ ಬ್ರ್ಯಾಂಡ್‌ಗಳಿಂದ ಬರುತ್ತಿದೆ ಎನ್ನುವುದೇ ಖುಷಿ ಸಂಗತಿ. ಪ್ರತಿಯೊಂದು ಬಿಗ್ ಬಾಸ್ ಆವೃತ್ತಿಯೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಪ್ರೇಕ್ಷಕರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಪ್ರೇಕ್ಷಕರು ಬಿಗ್ ಬಾಸ್‌ನ್ನು ಕೇವಲ ಟಿವಿಯಲ್ಲಿ ಪ್ರಸಾರವಾಗುವ ಸಂಚಿಕೆಗಳಿಗೆ ಸೀಮಿತವಾದ ಕಾರ್ಯಕ್ರಮವಾಗಿ ನೋಡುವುದಿಲ್ಲ. ಡಿಜಿಟಲ್ ಅನುಭವದ ಮೂಲಕ ಅವರು ದಿನದ ಯಾವುದೇ ಸಮಯದಲ್ಲಿ ಬಿಗ್ ಬಾಸ್‌ನ್ನು ವೀಕ್ಷಿಸಬಹುದು' ಎಂದು ಮಾಹಿತಿ ನೀಡಿದ್ದಾರೆ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ