
ಮುಳಬಾಗಿಲು ಕೌಟುಂಬಿಕ ಕಲಹದಿಂದ ಮಹಿಳೆ ಆತ್ಮಹತ್ಯೆ
ಮುಳಬಾಗಿಲು: ಕೌಟುಂಬಿಕ ಕಲಹದಿಂದ ನಗರದ ಬಾಲಕೃಷ್ಣ ಆಶ್ರಮ ಬಳಿಯ ನಿವಾಸಿ ಮನೋಜ್ಞ (23) ಮನೆಯ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೋಜ್ಞ ಅವರು ಬಾಲಕೃಷ್ಣ ಆಶ್ರಮದ ಸುಬ್ರಮಣಿ ಎಂಬುವವರನ್ನು ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ಇವರಿಗೆ ಒಂದು ವರ್ಷದ ಗಂಡು ಮಗು ಇದೆ. ಆದರೆ, ಪತಿ ಸುಬ್ರಮಣಿ ಹಾಗೂ ಅತ್ತೆ ಜಯಲಕ್ಷ್ಮಮ್ಮ ಹಾಗೂ ಮನೋಜ್ಞ ತಾಯಿ ಕುಟುಂಬದವರ ನಡುವೆ ಕೌಟುಂಬಿಕ ಕಲಹವಿತ್ತು. ಇದರಿಂದ ಮನನೊಂದ ಮನೋಜ್ಞ ಮಂಗಳವಾರ ಮನೆಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಸುಬ್ರಮಣಿ ಹಾಗೂ ಜಯಲಕ್ಷ್ಮಮ್ಮ ಅವರನ್ನು ಬಂಧಿಸಿದ್ದು, ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಯಾರಿಗಾದರೂ ಖಿನ್ನತೆ ಇದ್ದರೆ ಇಲ್ಲವೆ ಆತ್ಮಹತ್ಯೆಯ ಮನೋಭಾವ ಕಾಡುತ್ತಿದ್ದರೆ ಈ ಕೆಳಗಿನ ಸಹಾಯವಾಣಿ ಸಂಪರ್ಕಿಸಿ: ಟೆಲಿಮನಸ್–14416 ಅಥವಾ ಸಹಾಯ್– 080 25497777, 98864 44075)
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-18-2017909550