ಚಿಂತಾಮಣಿ: ಖಾಸಗಿ ಶಾಲೆಗೆ ಸಡ್ಡು ಹೊಡೆವ ಚೊಕ್ಕಹಳ್ಳಿ ಶಾಲೆ

ಚಿಂತಾಮಣಿ: ಖಾಸಗಿ ಶಾಲೆಗೆ ಸಡ್ಡು ಹೊಡೆವ ಚೊಕ್ಕಹಳ್ಳಿ ಶಾಲೆ

ಚಿಂತಾಮಣಿ: ಖಾಸಗಿ ಶಾಲೆಗೆ ಸಡ್ಡು ಹೊಡೆವ ಚೊಕ್ಕಹಳ್ಳಿ ಶಾಲೆ

ಚಿಂತಾಮಣಿ: ತಾಲ್ಲೂಕಿನ ಚೊಕ್ಕಹಳ್ಳಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆ ಶಿಕ್ಷಕರ ಬದ್ಧತೆಯಿಂದ ಅಭಿವೃದ್ಧಿಯ ಸ್ಪರ್ಶ ಪಡೆದಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಆಕರ್ಷಿಸುತ್ತಿದೆ.

ತಾಲ್ಲೂಕು ಕೇಂದ್ರದಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಈ ಶಾಲೆ 1980ರಲ್ಲಿ ಪ್ರಾರಂಭವಾಯಿತು. ನಗರಕ್ಕೆ ಸಮೀಪವಾಗಿದ್ದು, ಒಂದೆಡೆ ನಗರದ ಆಕರ್ಷಣೆ ಮತ್ತೊಂದೆಡೆ ಖಾಸಗಿ ಶಾಲೆಗಳ ಸ್ಪರ್ಧೆ ನಡುವೆ ಸುತ್ತಲಿನ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಆದರೆ ಚೊಕ್ಕಹಳ್ಳಿ ಶಾಲೆ ಮಾತ್ರ ಶಿಕ್ಷಕರ ಶ್ರಮದಿಂದಾಗಿ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುತ್ತಿದೆ.

ವಿದ್ಯಾರ್ಥಿಗಳನ್ನು ಸೆಳೆಯಲು ಶಿಕ್ಷಕರು ಅಪಾರ ಶ್ರಮವಹಿಸಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ. ಶಾಲೆಗೆ ಆಕರ್ಷಕ ಪ್ರವೇಶದ್ವಾರ, ಕಾಂಪೌಂಡ್‌ ಅನ್ನು ಬಣ್ಣ ಬಣ್ಣದ ಚಿತ್ರಗಳಿಂದ ಅಂದಗೊಳಿಸಿದ್ದಾರೆ. ಕಂಪ್ಯೂಟರ್, ಪ್ರೊಜೆಕ್ಟರ್, ಸ್ಮಾರ್ಟ್‌ಕ್ಲಾಸ್, ಸುಸಜ್ಜಿತ ಶೌಚಾಲಯ ಹಾಗೂ ಶಾಲೆಯ ಪ್ರವೇಶದ್ವಾರದಿಂದಲೂ ನೆಲಕ್ಕೆ ಟೈಲ್ಸ್ ಅಳವಡಿಸಲಾಗಿದೆ. ಸುಸಜ್ಜಿತ ಸೌಲಭ್ಯಗಳಿಂದ ಮಾದರಿ ಶಾಲೆಯಾಗಿ ರೂಪುಗೊಂಡಿದೆ.

ಶಿಕ್ಷಕರು, ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಹಕಾರಿಂದ ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಶಾಲೆ ಆವರಣದಲ್ಲಿ ಪುಟ್ಟ ಗಣಪತಿ ಗುಡಿಯನ್ನು ನಿರ್ಮಿಸಲಾಗಿದೆ. ಧ್ವಜಸ್ತಂಭದ ಸುತ್ತ ಸ್ಟೀಲ್ ಗ್ರಿಲ್‌ ಮತ್ತು ಸುತ್ತ ಟೈಲ್ಸ್ ಅಳವಡಿಸಲು ₹20 ಸಾವಿರ ವೆಚ್ಚವಾಗಿದ್ದು, ದಾನಿಯೊಬ್ಬರು ಇದನ್ನು ಭರಿಸಿದ್ದಾರೆ.

ಗಣಪತಿ ಗುಡಿ ಹಾಗೂ ಅಡಿಗೆಮನೆ ಸುತ್ತಲ ಗ್ರಾಮಸ್ಥರ ನೆರವಿನಿಂದ ಟೈಲ್ಸ್ ಅಳವಡಿಸಲಾಗಿದೆ. ಹಳೆಯ ವಿದ್ಯಾರ್ಥಿಗಳಿಂದ ಸುಮಾರು ₹30 ಸಾವಿರ ವೆಚ್ಚದಲ್ಲಿ ಗೋಡೆಬರಹ ಬರೆಸಲಾಗಿದೆ. ಮುಖ್ಯಶಿಕ್ಷಕ ಶ್ರೀನಿವಾಸ್ ಸ್ವಂತ ಖರ್ಚಿನಿಂದ ಶಾಲೆಯ ಪ್ರವೇಶದ್ವಾರಕ್ಕೆ ಸ್ವಾಗತ ಕಮಾನು ನಿರ್ಮಿಸಿದ್ದಾರೆ. ಪ್ರತಿವರ್ಷ ದಾನಿಗಳ ನೆರವಿನಿಂದ ತಟ್ಟೆ, ಲೋಟ, ಸಮವಸ್ತ್ರ ಹಾಗೂ ಅಗತ್ಯ ಸಾಮಗ್ರಿ ನೀಡುತ್ತಿದ್ದಾರೆ.

ಶಿಕ್ಷಕ ಶ್ರೀನಿವಾಸ್‌ 13 ವರ್ಷಗಳಿಂದ ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಾನಿಗಳ ನೆರವು ಮತ್ತು ತಮ್ಮ ಹಣ ಸೇರಿಸಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಖಾಸಗಿ ಶಾಲೆಯಂತೆ ಕಂಗೊಳಿಸುತ್ತಿದೆ. ಇವರಿಗೆ ಈ ವರ್ಷ ಶಿಕ್ಷಣ ಇಲಾಖೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

ಆಟದ ಮೈದಾನಕ್ಕೆ ಜಾಗ ಮಂಜೂರುಶಾಲೆಗೆ ಆಟದ ಮೈದಾನದ ಕೊರತೆ ಇತ್ತು. ಇತ್ತೀಚೆಗೆ ಗ್ರಾಮ ಪಂಚಾಯಿತಿಯಿಂದ 1 ಎಕರೆ 10 ಗುಂಟೆ ಜಮೀನು ಮಂಜೂರಾಗಿದೆ. ದಾಖಲೆಗಳು ಶಾಲೆಗೆ ಹಸ್ತಾಂತರವಾದ ತಕ್ಷಣದಿಂದಲೇ ಆಟದ ಮೈದಾನವನ್ನು ಅಭಿವೃದ್ಧಿಪಡಿಸಲಾಗುವುದು. ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಅಗತ್ಯ ಎಲ್ಲ ಸೌಲಭ್ಯ ಒದಗಿಸಿ ಶಾಲೆಯನ್ನು ನಂದನವನದಂತೆ ರೂಪಿಸುವ ಗುರಿ ಇದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ