ಕಲಬುರಗಿಯಲ್ಲಿ ರಾಜ್ಯ ಸೀನಿಯರ್‌ ಅಥ್ಲೆಟಿಕ್ಸ್: ಮಿಂಚು ಹರಿಸಿದ ಮಣಿಕಂಠ, ಸುದೀಕ್ಷಾ

ಕಲಬುರಗಿಯಲ್ಲಿ ರಾಜ್ಯ ಸೀನಿಯರ್‌ ಅಥ್ಲೆಟಿಕ್ಸ್: ಮಿಂಚು ಹರಿಸಿದ ಮಣಿಕಂಠ, ಸುದೀಕ್ಷಾ

ಕಲಬುರಗಿಯಲ್ಲಿ ರಾಜ್ಯ ಸೀನಿಯರ್‌ ಅಥ್ಲೆಟಿಕ್ಸ್: ಮಿಂಚು ಹರಿಸಿದ ಮಣಿಕಂಠ, ಸುದೀಕ್ಷಾ

ಕಲಬುರಗಿ: ಉಡುಪಿ ಜಿಲ್ಲೆಯ ಮಣಿಕಂಠ ಹಾಗೂ ಬಳ್ಳಾರಿಯ ವಿ.ವಿ.ಸುದೀಕ್ಷಾ ಅವರು ರಾಜ್ಯ ಅಥ್ಲೆಟಿಕ್ಸ್ ಕೂಟದ 100 ಮೀ. ಓಟದಲ್ಲಿ ಅಗ್ರಸ್ಥಾನ ಗಳಿಸಿದರು.

ಇಲ್ಲಿ ಸೋಮವಾರ ಆರಂಭವಾದ ಕೂಟದ ಪುರುಷರ ವಿಭಾಗದಲ್ಲಿ ಮಣಿಕಂಠ 10.46 ಸೆ.ಗಳಲ್ಲಿ ಹಾಗೂ ಮಹಿಳೆಯರ ವಿಭಾಗದಲ್ಲಿ ಸುದೀಕ್ಷಾ 11.99 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ನವದೆಹಲಿಯಲ್ಲಿ ಅಕ್ಟೋಬರ್‌ 8ರಿಂದ 11ರವರೆಗೆ ನಡೆಯಲಿರುವ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಕರ್ನಾಟಕ ತಂಡದ ಆಯ್ಕೆಯನ್ನು ಈ ಕೂಟದಲ್ಲಿ ನಡೆಸಲಾಗುತ್ತಿದೆ.

ಫಲಿತಾಂಶಗಳು: ಪುರುಷರು: 100 ಮೀ ಓಟ: ಮಣಿಕಂಠ (ಉಡುಪಿ, ಕಾಲ: 10.46 ಸೆ.)–1, ಪ್ರಸನ್ನಕುಮಾರ (ಧಾರವಾಡ)–2, ಅಂಕಿತ್ ಜೋಗಿ (ಉಡುಪಿ)–3.

400 ಮೀ: ಬಾಲಾಜಿ (ಬೆಳಗಾವಿ, 47.97ಸೆ.)–1. ಅಲಿ ಖಾನ್ (ಬೆಂಗಳೂರು ನಗರ)–2, ಭುವನ್ ಪಿ. (ಬೆಳಗಾವಿ)–3.

800 ಮೀ.: ಕಮಲ್ ಕಣ್ಣನ್ (ಬೆಂಗಳೂರು ನಗರ, 1 ನಿ. 49.73 ಸೆ.)–1, ಕೃಷ್ಣ ಆರ್. (ವಿಜಯಪುರ)–2, ನಿಂಗಪ್ಪ (ಧಾರವಾಡ)–3.

110 ಮೀ. ಹರ್ಡಲ್ಸ್: ತೇಜಲ್ (ದಕ್ಷಿಣ ಕನ್ನಡ, 14.22 ಸೆ.)–1, ರತನ್‌ಗೌಡ ಪಾಟೀಲ –2, ಸಂತೋಷ್ ಕುಮಾರ ಎಸ್–3 (ಇಬ್ಬರೂ ಬೆಂಗಳೂರು ನಗರ).

10,000 ಮೀ.: ಶೈಲೇಶ್ (ಬೆಂಗಳೂರು ನಗರ, 31 ನಿ. 1.70 ಸೆ.)–1, ರಮೇಶ (ಧಾರವಾಡ)–2.

3,000 ಮೀ. ಸ್ಟೀಪಲ್‌ಚೇಸ್: ಭೀಮಾ ಎಚ್‌. (ಬೆಂಗಳೂರು ನಗರ, 9 ನಿ. 40.49 ಸೆ.)–1, ಗಣಪತಿ ಯಲ್ಲಪ್ಪ (ಉತ್ತರ ಕನ್ನಡ)–2, ರಮೇಶ ಬಿ. (ಧಾರವಾಡ)–3.

ಹೈಜಂಪ್: ಸುದೀಪ್ (ಶಿವಮೊಗ್ಗ, 2.05 ಮೀ.)–1, ಅಭಯ್ ಕುಮಾರ್ (ಬೆಂಗಳೂರು ನಗರ)–2, ಪ್ರಿನ್ಸ್ ಜೆ. (ದಕ್ಷಿಣ ಕನ್ನಡ)–3.

ಟ್ರಿಪಲ್ ಜಂಪ್: ಮೊಹಮ್ಮದ್ ಟಿ. (ದಕ್ಷಿಣ ಕನ್ನಡ, 14.92 ಮೀ.)–1, ಯಶಸ್‌. ಆರ್. (ಮಂಡ್ಯ)–2, ರಮೇಶ ನಾಯಕ (ದಕ್ಷಿಣ ಕನ್ನಡ)–3

ಶಾಟ್‌ಪಟ್‌: ಪ್ರಜ್ವಲ್ (ಉಡುಪಿ, 16.64 ಮೀ.)–1, ಆಕಾಶ್ ಕುಂದರ್ (ದಕ್ಷಿಣ ಕನ್ನಡ)–2, ಮೋಹನ್ (ಮೈಸೂರು)–3.

ಡಿಸ್ಕಸ್‌ ಥ್ರೊ: ಮೊಹಮ್ಮದ್ ಎಸ್‌. (ಮೈಸೂರು, 52.44 ಮೀ.)–1, ಭವೇಶ್ (ದಕ್ಷಿಣ ಕನ್ನಡ)–2, ಬಿ. ವಿಶಾಲ್ (ಮೈಸೂರು)–3.

ಮಹಿಳೆಯರು: 100 ಮೀ.: ವಿ.ವಿ. ಸುದೀಕ್ಷಾ (ಬಳ್ಳಾರಿ, 11.99 ಸೆ.)–1, ಅಮುದಾ ವೈ. (ಬೆಂಗಳೂರು)–2, ಅನುಷಾ ಜಿ. (ಉಡುಪಿ)–3.

400 ಮೀ: ದೀಕ್ಷಿತಾ ಆರ್. (ಉ.ಕ, 57.48 ಸೆ.)–1, ಎನ್‌.ಸಿ. ಮಾನಸಾ (ಕೊಡಗು)–2, ಗೀತಾ. ಸಿ. (ದಕ್ಷಿಣ ಕನ್ನಡ)–3.

800 ಮೀ.: ಪ್ರಿಯಾಂಕಾ (ಧಾರವಾಡ, 2 ನಿ. 12.78 ಸೆ.)–1, ಐಶ್ವರ್ಯಾ (ಮಂಡ್ಯ)–2.

100 ಮೀ. ಹರ್ಡಲ್ಸ್: ಅಪೂರ್ವಾ ಎ. (ಬೆಳಗಾವಿ, 15.73 ಸೆ)–1, ಪ್ರತೀಕಾ–2 (ಉಡುಪಿ).

10,000 ಮೀ: ಸಂಜನಾ ಬಿ. (ಗದಗ, 37 ನಿ. 47.82 ಸೆ.)–1, ಸೀಮಾ ಎಂ. (ಬೆಳಗಾವಿ)–2, ಸೌಜನ್ಯಾ (ಧಾರವಾಡ)–3.

3,000 ಮೀ. ಸ್ಟೀಪಲ್‌ಚೇಸ್‌: ಎಚ್‌.ವಿ. ದೀಕ್ಷಾ (ಶಿವಮೊಗ್ಗ, 11 ನಿ. 21.22 ಸೆ.)–1, ಶ್ರೀರಕ್ಷಾ (ಶಿವಮೊಗ್ಗ)–2, ಶ್ರೇಯಾ ಎಂ. (ದಕ್ಷಿಣ ಕನ್ನಡ)–3.

ಹೈಜಂಪ್: ಪಲ್ಲವಿ ಪಾಟೀಲ (ಯಾದಗಿರಿ, 1.70 ಮೀ.)–1, ಅಭಿನಯಾ (ಬೆಂಗಳೂರು ನಗರ)–2, ಅನನ್ಯಾ ಬಿ. (ಉಡುಪಿ)–3.

ಪೋಲ್ ವಾಲ್ಟ್: ಪ್ರೀತಿ (3.40 ಮೀ.)–1, ಭವಿತಾ –2 (ಇಬ್ಬರೂ ದಕ್ಷಿಣ ಕನ್ನಡ)

ಟ್ರಿಪಲ್ ಜಂಪ್: ವರ್ಷಿತಾ (ಮಂಡ್ಯ, 12.30 ಮೀ.)–1, ಮೋನಿಕಾ ಜಿ. (ಬೆಂಗಳೂರು ನಗರ)–2, ಭವಿತಾ (ದಕ್ಷಿಣ ಕನ್ನಡ )–3.

ಶಾಟ್‌ಪಟ್‌: ಆಕಾಂಕ್ಷಾ (12.42 ಮೀ.)–1, ಮಾಧುರ್ಯಾ –2 (ಇಬ್ಬರೂ ಉಡುಪಿ), ದೀಕ್ಷಿತಾ (ಬೆಂಗಳೂರು ನಗರ)–3.

ಡಿಸ್ಕಸ್‌ ಥ್ರೊ: ಮಾಧುರ್ಯಾ (ಉಡುಪಿ, 45.07 ಮೀ.)–1, ಐಶ್ವರ್ಯಾ (ದಕ್ಷಿಣ ಕನ್ನಡ)–2, ತೇಜಸ್ವಿನಿ ಸಿ. (ಮೈಸೂರು)–3.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ