ಉಡುಪಿ: ಪೆರಂಪಳ್ಳಿ ಸೇತುವೆ ಬಳಿ ಮಾದಕ ವಸ್ತು ಮಾರಾಟ ಇಬ್ಬರ ಬಂಧನ

ಉಡುಪಿ: ಪೆರಂಪಳ್ಳಿ ಸೇತುವೆ ಬಳಿ ಮಾದಕ ವಸ್ತು ಮಾರಾಟ ಇಬ್ಬರ ಬಂಧನ

ಉಡುಪಿ: ಪೆರಂಪಳ್ಳಿ ಸೇತುವೆ ಬಳಿ ಮಾದಕ ವಸ್ತು ಮಾರಾಟ ಇಬ್ಬರ ಬಂಧನ

ಉಡುಪಿ: ನಗರದ ಪೆರಂಪಳ್ಳಿ ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾರಿನಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಉದ್ಯಾವರದ ಅಕ್ಬರ್‌ ಮಹಮ್ಮದ್‌ ಬ್ಯಾರಿ (44), ಬೆಂಗಳೂರಿನ ಎಂ. ಎಸ್‌. ಪಾಳ್ಯದ ಸೈಯದ್‌ ಸುಹೇಲ್‌ ಬಂಧಿತ ಆರೋಪಿಗಳು. ಆರೋಪಿಗಳಿಂದ 30 ಗ್ರಾಂ ತೂಕದ ಎಂಡಿಎಂಎ, ಮೊಬೈಲ್‌ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ನಗರದ ರಾಧಾಕೃಷ್ಣ ನೃತ್ಯ ನಿಕೇತನ ಸಂಸ್ಥೆಯ ಸ್ಥಾಪಕ ದಿ. ರಾಧಾಕೃಷ್ಣ ತಂತ್ರಿ ಅವರ 91ನೇ ಹುಟ್ಟುಹಬ್ಬದ ಅಂಗವಾಗಿ ಇದೇ 19 ರಂದು ನಗರದ ಐವೈಸಿ ಸಭಾಂಗಣದಲ್ಲಿ ಗುರು ನಮನ ಕಾರ್ಯಕ್ರಮ ಜರುಗಲಿದೆ ಎಂದು ನೃತ್ಯ ಗುರು ವೀಣಾ ಎಂ. ಸಾಮಗ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕಾರ್ಯಕ್ರಮವನ್ನು ಸುರತ್ಕಲ್‌ನ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ನಿರ್ದೇಶಕ ಕೆ. ಚಂದ್ರಶೇಖರ ನಾವಡ ಉದ್ಘಾಟಿಸುವರು ಎಂದರು.

ಬೆಂಗಳೂರಿನ ವಿದುಷಿ ಸುಷ್ಮಾ ಕಾಮತ್ ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ‘ನೃತ್ಯಾಭಿಷೇಕಂ’ ನೃತ್ಯ ನಡೆಯಲಿದೆ ಎಂದು ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ