Bigg Boss Kannada Season 13: ಗಗನ್ ಚಿನ್ನಪ್ಪ - ಮಂಜುನಾಥ್ ಮಧ್ಯೆ ಕಿರಿಕ್, ಮೊದಲ ದಿನ ಏನೆಲ್ಲ ಆಯ್ತು, ಇಲ್ಲಿದೆ ಹೈಲೈಟ್ಸ್‌

Bigg Boss Kannada Season 13: ಗಗನ್ ಚಿನ್ನಪ್ಪ - ಮಂಜುನಾಥ್ ಮಧ್ಯೆ ಕಿರಿಕ್, ಮೊದಲ ದಿನ ಏನೆಲ್ಲ ಆಯ್ತು, ಇಲ್ಲಿದೆ ಹೈಲೈಟ್ಸ್‌

Bigg Boss Kannada Season 13: ಗಗನ್ ಚಿನ್ನಪ್ಪ - ಮಂಜುನಾಥ್ ಮಧ್ಯೆ ಕಿರಿಕ್, ಮೊದಲ ದಿನ ಏನೆಲ್ಲ ಆಯ್ತು, ಇಲ್ಲಿದೆ ಹೈಲೈಟ್ಸ್‌

ಬಿಗ್‌ಬಾಸ್ ಕನ್ನಡ ಸೀಸನ್ 13ರ (Bigg Boss Kannada Season 13) ಹಲವು ಕಾರಣಗಳಿಗೆ ವೀಕ್ಷಕರ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿ ಬಿಗ್‌ಬಾಸ್‌ಗೆ ಒಬ್ಬರಿಗಿಂತ ಹೆಚ್ಚು ಕಾಮನ್‌ಮ್ಯಾನ್‌ಗಳು ಏಕಕಾಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್ ಕನ್ನಡ ಪ್ರೋಗ್ರಾಮ್‌ಗೆ ಈ ಬಾರಿ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಈ ಬಾರಿಯ ಬಿಗ್‌ಬಾಸ್ ವಿಭಿನ್ನ ಏವಿಯೇಷನ್ ಥೀಮ್‌ನೊಂದಿಗೆ ಪ್ರಾರಂಭವಾಗಿದೆ. 16 ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಮೊದಲ ದಿನವೇ ಕಿತ್ತಾಟ ಜೋರಾಗಿದೆ. ಮನೆ ಒಳಗೆ ಹೋಗುವುದರ ಒಳಗೆಯೇ ಸ್ಪರ್ಧಿಗಳ ನಡುವೆ ಮಾತಿನ ಸಮರ ಶುರುವಾಗಿತ್ತು. ಬಿಗ್ ಬಾಸ್ ನೀಡಿದ ಮೊದಲ ಟಾಸ್ಕ್‌ನಿಂದಲೇ ಸ್ಪರ್ಧಿಗಳ ಜೊತೆ ಮಾತಿನ ಚಕಮಕಿ ಶುರುವಾಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 13 ಪ್ರಾರಂಭವಾಗಿದೆ. ಇದರಲ್ಲಿ ಯಾರೆಲ್ಲ ಇದ್ದಾರೆ, ನೆನ್ನೆಯಿದ ಇಲ್ಲಿಯ ವರೆಗೂ ಏನಾಗಿದೆ ಎನ್ನುವ ಹೈಲೆಟ್ಸ್‌ ಇಲ್ಲಿದೆ.

ಈ ಬಾರಿಯ ಬಿಗ್‌ಬಾಸ್ ಸೀಸನ್ ವಿಭಿನ್ನವಾಗಿ ಪ್ರಾರಂಭವಾಗಿದೆ. ಬಿಗ್ ಬಾಸ್ Grand Take Off ವಿಮಾನ ಮಾದರಿಯಲ್ಲಿತ್ತು. ಪ್ರತಿಯೊಬ್ಬ ಸ್ಪರ್ಧಿಗೂ ಫ್ಲೈಟ್ ಟಿಕೆಟ್ ಕೊಟ್ಟ ನಟ ಕಿಚ್ಚ ಸುದೀಪ್ ಅವರು ಎಂದಿನಂತೆ ತಮ್ಮದೇ ಶೈಲಿ ಸೀಸನ್‌ಗೆ ಮೆರಗು ಕೊಟ್ಟಿದ್ದಾರೆ. ಬಿಗ್‌ಬಾಸ್‌ಗೆ ಸ್ವಾಗತ ಕ್ಯಾಪ್ಟನ್ ಕಿಚ್ಚ ಸುದೀಪ್ ಎಂದು ಸುದೀಪ್ ಅವರಿಗೆ ಬಿಗ್‌ಬಾಸ್ ಸ್ವಾಗತ ಕೋರಿದರು. ವಿಮಾನ ಮಾದರಿಯಲ್ಲಿ ಸೆಟ್ ನಿರ್ಮಿಸಿ, ಸ್ಪರ್ಧಿಗಳಿಗೆ ಅಲ್ಲಿ ಕುಳಿತುಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. ಹವಾಮಾನದಲ್ಲಿ ಏರುಪೇರು ಎನ್ನುವ ಮೂಲಕ ಬಿಗ್‌ಬಾಸ್ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮೊದಲ ಶಾಕ್ ಕೊಟ್ಟಿದ್ದಾರೆ. ಮನೆಯ ಒಳಗೆ ಹೋಗುವುದಕ್ಕೂ ಮುಂಚೆ ನೀಡಲಾಗಿದ್ದ ಟಾಸ್ಕ್‌ನಿಂದ ಸ್ಪರ್ಧಿಗಳ ನಡುವೆ ಕಿರಿಕ್ ಶುರುವಾಯ್ತು. ಕೆಲವರು ನಮಗೆ ಆಗ್ತಿಲ್ಲ, ರೋಸಿಸೋದ್ಯಾಕೆ ಅಂತ ಕೇಳಿದ್ರು.

Bigg Boss Kannada Season 13: ಮೊದಲ ಟಾಸ್ಕ್‌ನಲ್ಲಿಯೇ ಸ್ಪರ್ಧಿಗಳ ನಡುವೆ ಕಿರಿಕ್

ಇನ್ನು ಬಿಗ್‌ಬಾಸ್ ಕನ್ನಡ ಸೀಸನ್ 13ರ (Bigg Boss Kannada Season 13)ಕ್ಕೆ ಸೆಪ್ಟೆಂಬರ್ 6ರ ಶನಿವಾರ ಭರ್ಜರಿ ಚಾಲನೆ ಸಿಕ್ಕಿದೆ. ನಟ ಕಿಚ್ಚ ಸುದೀಪ್ ಅವರು ಸತತ 13ನೇ ಬಾರಿ ಬಿಗ್‌ಬಾಸ್ ನಡೆಸಿಕೊಡುವ ಮೂಲಕ ಭಾರತದಲ್ಲಿಯೇ ಹೊಸ ದಾಖಲೆ ಬರೆದಿದ್ದಾರೆ. ಈ ಬಾರಿಯ ಬಿಗ್‌ಬಾಸ್ ಶೋ ಹಲವು ಕಾರಣಗಳಿಗೆ ವಿಶೇಷವಾಗಿದೆ. ಅದರಲ್ಲೂ ಈ ಬಾರಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಗ್‌ಬಾಸ್ ಶೋ ಏಕಕಾಲಕ್ಕೆ ಪ್ರಾರಂಭವಾಗಿದೆ. ಕನ್ನಡದಲ್ಲಿ ಶೋ ಪ್ರಾರಂಭವಾದ ಮೊದಲ ಟಾಸ್ಕ್‌ ಸಖತ್ ಆಗಿತ್ತು.

ನಿಮಗೆ ಇಷ್ಟವಾಗದೆ ಇರುವ ಪ್ಯಾಸೆಂಜರ್ / ಸ್ಪರ್ಧಿಯ ಫೋಟೋವನ್ನು ಸೂಟ್‌ಕೇಸ್ ಮೇಲೆ ಅಂಟಿಸಿ ಅದನ್ನು ವಿಮಾನದಿಂದ ಬಿಸಾಕಬೇಕು ಎಂದು ಮೊದಲ ಟಾಸ್ಕ್‌ ಕೊಡಲಾಗಿತ್ತು. ಈ ಮೊದಲ ಟಾಸ್ಕ್‌ನಲ್ಲಿ ಹಲವರು ಮಂಜುನಾಥ್ ಅವರ ಹೆಸರು ತೆಗೆದುಕೊಂಡರು. ಅಗ್ನಿ ಪರೀಕ್ಷೆಯಲ್ಲಿ ಗೆದ್ದಿರುವ ಮಂಜುನಾಥ್ ಹಾಗೂ ಕಿರುತೆರೆ ನಟ ಗಗನ್ ಚಿನ್ನಪ್ಪ ಅವರ ನಡುವೆ ಕಿರಿಕ್ ಶುರುವಾಯ್ತು!

Bigg Boss Kannada Season 13: ಗಗನ್ ಚಿನ್ನಪ್ಪ - ಮಂಜ ನಡುವೆ ಕಿರಿಕ್!

ಈ ಟಾಸ್ಕ್‌ನಲ್ಲಿ ಗಗನ್ ಚಿನ್ನಪ್ಪ ಹಾಗೂ ಮಂಜುನಾಥ್ ನಡುವೆ ಕಿರಿಕ್ ಶುರುವಾಯ್ತು. ಸಾಮಾನ್ಯವಾಗಿ ಬಿಗ್‌ಬಾಸ್‌ನಲ್ಲಿ ಮನೆಯೊಳಗೆ ಪ್ರವೇಶಿಸಿದ ನಂತರ ನಡೆಯುತ್ತಿದ್ದ ನಾಮಿನೇಷನ್ ರೀತಿಯ ಆಟವನ್ನು ಮನೆಗೆ ಎಂಟ್ರಿ ಕೊಡುವುದಕ್ಕೂ ಮೊದಲೇ ಪ್ರಾರಂಭವಾಯ್ತು. ಟಾಸ್ಕ್‌ ಬಗ್ಗೆ ಮಾತನಾಡುವಾಗ ಗಗನ್ ಚಿನ್ನಪ್ಪ ಎಲ್ಲರ ಮುಂದೆ ತಮ್ಮ ಅಭಿಪ್ರಾಯ ಹೇಳಲು ಮುಂದಾದರು. ಆದರೆ, ಈ ವೇಳೆ ಮಂಜ ಮಧ್ಯಪ್ರವೇಶಿಸಿದ್ದು, ಗಗನ್ ಚಿನ್ನಪ್ಪಗೆ ಅವರಿಗೆ ಇಷ್ಟವಾಗಿಲ್ಲ.

ತಮ್ಮ ಸರದಿ ಬಂದಾಗ ತಾವು ಮಾತನಾಡುವುದಾಗಿ ಹೇಳಿದ ಗಗನ್, ಮಧ್ಯದಲ್ಲಿ ಅಡ್ಡಿಪಡಿಸಬೇಡ ಅಂತ ಮಂಜಗೆ ಹೇಳಿದ್ರು. ತಾಂಡವ್ ರಾಮ್ ಸಹ ಈ ಜಗಳಕ್ಕೆ ಎಂಟ್ರಿ ಕೊಟ್ಟರು. ಮಂಜ ನಿರಂತರವಾಗಿ ಮಾತನಾಡ್ತಿರೋದನ್ನ ಟೀಕಿಸಿ ಖಾಲಿ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದಂತೆ ಗಡಗಡ ಅಂತ ಸೌಂಡ್ ಅಂತ ಕೆಣಕಿದರು. ತಾಂಡವ್ ರಾಮ್ ಅವರ ಟಾಂಗ್‌ಗೆ ಮಂಜುನಾಥ್ ತಿರುಗೇಟು ಕೊಟ್ರು. ನಾನು ಖಾಲಿ ಡಬ್ಬವಲ್ಲ, ಚಿನ್ನದ ಡಬ್ಬ ಅಂತ ಹೇಳಿದ ಮಂಜು ಚಿನ್ನದ ಬೆಲೆ ಎಲ್ಲರಿಗೂ ಗೊತ್ತಾಗಲ್ಲ ಅಂದ್ರು.

ಮಂಜು ಮಾತಿಗೆ ಪ್ರತಿಕ್ರಿಯಿಸಿದ ಗಗನ್ ಚಿನ್ನಪ್ಪ ಅವರು, ಜಾಸ್ತಿ ಉರಿದುಕೊಳ್ಳಬೇಡ ಚಿನ್ನ ಅಂದ್ರು.. ಇದಕ್ಕೆ ಮಂಜು ಅವರು ನನಗೆ ಉರಿಸಿಯೇ ಅಭ್ಯಾಸ, ಧಗ ಧಗ ಧಗ ಅಂತ ಅಂದ್ರು. ಆದರೆ ಗಗನ್ ಚಿನ್ನಪ್ಪ ನೀನು ಎಷ್ಟೇ ಪ್ರಯತ್ನಿಸಿದರೂ ನನಗೇನೂ ತಟ್ಟುವುದಿಲ್ಲ ಅಂತ ತಿರುಗೇಟು ಕೊಟ್ರು. ಮೊದಲ ಹಂತದಲ್ಲಿಯೇ ಹಲವರು ಮಂಜುನಾಥ್ ಅವರ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ.

bigg boss kannada sudeep viral

bigg boss kannada sudeep viral

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ