ಕೊಡ್ಸುಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹3 ಕೋಟಿ ದೇಣಿಗೆ

ಕೊಡ್ಸುಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹3 ಕೋಟಿ ದೇಣಿಗೆ

ಕೊಡ್ಸುಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹3 ಕೋಟಿ ದೇಣಿಗೆ

ಭಟ್ಕಳ (ಉತ್ತರ ಕನ್ನಡ): ತಾಲ್ಲೂಕಿನ ಮುರುಡೇಶ್ವರ ಸಮೀಪದ ಕೊಡ್ಸುಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೈಟೆಕ್ ಕಟ್ಟಡ ನಿರ್ಮಿಸಲು, ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಉದ್ಯಮಿ ದುರ್ಗೇಶ ಸಂಜೀವರಾವ್‌ ಚಂದಾವರಕರ್ ₹3 ಕೋಟಿ ದೇಣಿಗೆ ನೀಡಿದ್ದಾರೆ.

1 ರಿಂದ 9ನೇ ತರಗತಿವರೆಗೆ ವಿದ್ಯಾರ್ಥಿಗಳು ಓದುತ್ತಿರುವ ಶಾಲೆಗೆ ಹೊಸದಾಗಿ ಕಟ್ಟಡ ನಿರ್ಮಿಸಲು ಶುಕ್ರವಾರ ಚಾಲನೆ ನೀಡಲಾಗಿದೆ. ಸ್ಥಳೀಯ ಶಾಸಕ ಮಂಕಾಳ ವೈದ್ಯ ಸಮ್ಮುಖದಲ್ಲಿ ದುರ್ಗೇಶ ಅವರು ಕಾಮಗಾರಿಗೆ ಚಾಲನೆ ನೀಡಿದರು. ಕಟ್ಟಡ ನಿರ್ಮಾಣಕ್ಕೆ ತಗಲುವ ಸಂಪೂರ್ಣ ವೆಚ್ಚ ತಾವೇ ಭರಿಸುವ ವಾಗ್ದಾನ ಮಾಡಿದರು.

ಕುಗ್ರಾಮವಾದ ಕೊಡ್ಸುಳ ಶಾಲೆಗೆ ಸಮೀಪದ ಹತ್ತಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿ ಒಟ್ಟು 175 ವಿದ್ಯಾರ್ಥಿಗಳು ಓದುತ್ತಿದ್ದು, ಕಲಿಕೆಗೆ ಕೇವಲ ಆರು ಕೊಠಡಿಗಳು ಇವೆ.

‘ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹೆಚ್ಚುವರಿ ಕೊಠಡಿ ಅಗತ್ಯವಿರುವುದರ ಬಗ್ಗೆ ದಾನಿ ದುರ್ಗೇಶ ಚಂದಾವರಕರ್ ಅವರೊಂದಿಗೆ ಚರ್ಚಿಸಲಾಗಿತ್ತು. ಎಲ್ಲವನ್ನೂ ಆಲಿಸಿದ ಬಳಿಕ ಅವರು ಹೈಟೆಕ್ ಮಾದರಿಯ ಕಟ್ಟಡ ನಿರ್ಮಾಣಕ್ಕೆ ₹3 ಕೋಟಿ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು’ ಎಂದು ಶಾಲೆಯ ಮುಖ್ಯ ಶಿಕ್ಷಕ ಪರಮೇಶ್ವರ ನಾಯ್ಕ ಹೇಳಿದರು.

ಹೊಸ ಕಟ್ಟಡದಲ್ಲಿ ಎಲ್‍ಕೆಜಿಯಿಂದ 10ನೇ ತರಗತಿಯವರೆಗೆ ಕಲಿಕಾ ಕೊಠಡಿಗಳು, ಕಂಪ್ಯೂಟರ್ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಸಭಾಂಗಣ, ಅಡುಗೆ ಕೋಣೆ, ಉಗ್ರಾಣ ಕೋಣೆ, ಶಿಕ್ಷಕರ ಕೊಠಡಿ, ಶೌಚಾಲಯ, ಆಧುನಿಕ ಕಲಿಕಾ ಸಾಮಗ್ರಿಗಳು, ಸ್ಮಾರ್ಟ್ ಬೋರ್ಡ್, ಆಧುನಿಕ ಪೀಠೋಪಕರಣಗಳ ವ್ಯವಸ್ಥೆ ಒಳಗೊಳ್ಳಲಿದೆ.

ದುರ್ಗೇಶ ಅವರು ಮುಂಬೈನಲ್ಲಿ ನೆಲೆಸಿದ್ದು, ವಿಡೋಲ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರು ಆಗಿದ್ದಾರೆ. ಕೊಡ್ಸುಳ ಶಾಲೆಯ ಕಟ್ಟಡ ನಿರ್ಮಾಣಕ್ಕೆ ತಮ್ಮ ಕುಟುಂಬದ ಹೆಸರಿನಲ್ಲಿದ್ದ 28 ಗುಂಟೆ ಜಾಗವನ್ನು ಈ ಹಿಂದೆ ದಾನವಾಗಿ ಬರೆದುಕೊಟ್ಟಿದ್ದನ್ನು ಗ್ರಾಮಸ್ಥರು ಸ್ಮರಿಸುತ್ತಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ