
ಕಲ್ಯಾಣ ಕರ್ನಾಟಕ ಉತ್ಸವ: 24 ನೂತನ ಬಸ್‌ಗಳಿಗೆ ಸಿಎಂ ಚಾಲನೆ
ಕಲಬುರಗಿ: ‘ಕಲ್ಯಾಣ ಕರ್ನಾಟಕ ಉತ್ಸವ (ಸೆ.17)ದಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 24 ನೂತನ ಬಸ್‌ಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಸಿರು ನಿಶಾನೆ ತೋರಿಸುವರು’ ಎಂದು ನಿಗಮದ ಮುಖ್ಯ ತಾಂತ್ರಿಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನಿಗಮ ₹33.35 ಕೋಟಿ ವೆಚ್ಚದಲ್ಲಿ 20 ನಾನ್ ಎಸಿ, 20 ಎಸಿ ಸ್ಲೀಪರ್ ಹಾಗೂ 16 ಎಸಿ ಸೀಟರ್ ಸೇರಿ ಒಟ್ಟು 56 ಬಸ್‌ಗಳ ಖರೀದಿಗೆ ಆದೇಶ ನೀಡಿದ್ದು, ಮೊದಲ ಹಂತವಾಗಿ 24 ನೂತನ ಬಸ್‌ಗಳಿಗೆ ಸಿಎಂ ಚಾಲನೆ ನೀಡುವರು’ ಎಂದಿದ್ದಾರೆ.
‘ಬಸ್‌ಗಳಿಗೆ ಆಲ್ ವೀಲ್ ಏರ್ ಸಸ್ಪೆನ್ಷನ್, ಭದ್ರತೆಗೆ ನಾಲ್ಕು ಸಿಸಿಟಿವಿ ಕ್ಯಾಮೆರಾಗಳು ಹಾಗೂ ಸೀಟ್‌ಗಳ ಬಳಿ ರೀಡಿಂಗ್ ಲ್ಯಾಂಪ್, ಮೊಬೈಲ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ’ ಎಂದಿದ್ದಾರೆ.