ಪಿಜಿ ಡೆಂಟಲ್‌ನ ಸೀಟು ಹಂಚಿಕೆ: ಸೆ.19ರಿಂದ 2ನೇ ಸುತ್ತಿನ ಕೌನ್ಸೆಲಿಂಗ್‌

ಪಿಜಿ ಡೆಂಟಲ್‌ನ ಸೀಟು ಹಂಚಿಕೆ: ಸೆ.19ರಿಂದ 2ನೇ ಸುತ್ತಿನ ಕೌನ್ಸೆಲಿಂಗ್‌

ಪಿಜಿ ಡೆಂಟಲ್‌ನ ಸೀಟು ಹಂಚಿಕೆ: ಸೆ.19ರಿಂದ 2ನೇ ಸುತ್ತಿನ ಕೌನ್ಸೆಲಿಂಗ್‌

ಬೆಂಗಳೂರು: ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ನ ಎರಡನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದ್ದು, ಇದೇ 19ರಿಂದ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭವಾಗಲಿದೆ.

ಮೊದಲ ಸುತ್ತಿನಲ್ಲಿ ಚಾಯ್ಸ್-3 ಆಯ್ಕೆ ಮಾಡಿರುವ ಹಾಗೂ ಇತರ ಚಾಯ್ಸ್‌ ದಾಖಲಿಸಿರುವ ಅಭ್ಯರ್ಥಿಗಳು ಎರಡನೇ ಸುತ್ತಿಗೆ ಅರ್ಹತೆ ಪಡೆಯಲು  ಇದೇ 19ರಿಂದ 22ರವರೆಗೆ ₹1 ಲಕ್ಷ (ಪರಿಶಿಷ್ಟ ಅಭ್ಯರ್ಥಿಗಳು ₹50,000) ಭದ್ರತಾ ಠೇವಣಿ ಪಾವತಿಸಬೇಕು. ಅದರ ಬಳಿಕವೇ ಆಯ್ಕೆ ದಾಖಲಿಸಲು ಅವಕಾಶ‌ ನೀಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.

ಮೊದಲ ಸುತ್ತಿನಲ್ಲಿ ಚಾಯ್ಸ್‌-2 ಆಯ್ಕೆ ಮಾಡಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಭದ್ರತಾ ಠೇವಣಿ ಇಡುವ ಅಗತ್ಯ ಇಲ್ಲ. ಅಭ್ಯರ್ಥಿಯು ಪಾವತಿಸಿರುವ ಮೊತ್ತವನ್ನು ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಅವರು‌ ವಿವರಿಸಿದ್ದಾರೆ.

ಇದೇ 19ರಂದು ಬೆಳಿಗ್ಗೆ ‌11ಕ್ಕೆ ಸೀಟು ಲಭ್ಯತಾಪಟ್ಟಿ ಪ್ರಕಟಿಸಲಾಗುತ್ತದೆ. 19ರಿಂದ‌ 23ರವರೆಗೆ ಆಯ್ಕೆ ಬದಲಿಸಲು ಅವಕಾಶ ನೀಡಲಾಗಿದೆ. ಇದೇ 23ರಂದು ಸಂಜೆ 4ಕ್ಕೆ ತಾತ್ಕಾಲಿಕ ಹಾಗೂ 24ರಂದು ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಇದೇ 24ರಿಂದ 28ರವರೆಗೆ ಶುಲ್ಕ ಪಾವತಿಸಬೇಕು. ಈ ಅವಧಿಯಲ್ಲಿ ಮೂಲ ದಾಖಲೆಗಳನ್ನು ಕೆಇಎ ಕಚೇರಿಯಲ್ಲಿ ಖುದ್ದು ಸಲ್ಲಿಸಬೇಕು. ಬಳಿಕ ಅಭ್ಯರ್ಥಿಗಳು ಇದೇ 29ರವರೆಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಹೇಳಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ