ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 05 ಸೆಪ್ಟೆಂಬರ್ 2026

ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 05 ಸೆಪ್ಟೆಂಬರ್ 2026

ಈ ದಿನದ ಪ್ರಮುಖ 10 ಸುದ್ದಿಗಳು: ಶನಿವಾರ, 05 ಸೆಪ್ಟೆಂಬರ್ 2026

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಸಗಟಿನಲ್ಲಿ ಸಕ್ಕರೆ–ಬೆಲ್ಲ ದರ ಇಳಿಕೆ; ಚಿಲ್ಲರೆಯಲ್ಲಿ ಮಾತ್ರ ಈಗಲೂ ದುಬಾರಿ !

ಬೆಂಗಳೂರು: ಹಬ್ಬಗಳ ಸಂಭ್ರಮಕ್ಕೆ ಸಿಹಿ ಸಿಗಬೇಕಿದ್ದರೂ, ಸಕ್ಕರೆ ದರದ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಇದೀಗ ಕೊಂಚ ನೆಮ್ಮದಿ ಸಿಕ್ಕಿದೆ. ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸಕ್ಕರೆ ಹಾಗೂ ಬೆಲ್ಲದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆದರೆ ಸಗಟು ದರ ಕುಸಿದಿದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಬೆಲೆ ಇಳಿಯದಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಎಕಾನಮಿ 360: ಅಲ್ಲಿ ಎನ್‌ವಿಡಿಯಾ ಕ್ರಾಂತಿ, ನಮ್ಮಲ್ಲಿ ಐಸ್‌ಕ್ರೀಂ ಭ್ರಾಂತಿ!

ಇತ್ತೀಚೆಗೆ ಅಮೆರಿಕದ 'ಎನ್‌ವಿಡಿಯಾ' ಕಂಪನಿ ತನ್ನ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿತ್ತು. ಜಗತ್ತಿನ ಕೃತಕ ಬುದ್ಧಿಮತ್ತೆ (ಎಐ) ಓಟಕ್ಕೆ ಇಂಧನ ತುಂಬುತ್ತಿರುವ ಈ ಚಿಪ್‌ ತಯಾರಿಕಾ ಕಂಪನಿಯ ಆದಾಯ, ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡು ದಾಖಲೆ ಬರೆದಿದೆ. ನೋಡ ನೋಡುತ್ತಿದ್ದಂತೆ ಕಂಪನಿಯ ಮಾರುಕಟ್ಟೆ ಮೌಲ್ಯ 5.5 ಟ್ರಿಲಿಯನ್‌ ಡಾಲರ್‌ ಗಡಿಯನ್ನು ದಾಟಿ, ಜಗತ್ತಿನ ಅತ್ಯಮೂಲ್ಯ ಕಂಪನಿಗಳ ಪಟ್ಟಿಯಲ್ಲಿ ವಿರಾಜಮಾನವಾಗಿದೆ. ಜಗತ್ತಿನ ಅನೇಕ ದೇಶಗಳ ವಾರ್ಷಿಕ ಜಿಡಿಪಿಯನ್ನೂ ಹಿಂದಿಕ್ಕಿದೆ!.

ಕೇರಳಂನ ತ್ರಿಶೂರ್‌ನಲ್ಲಿ ಭೀಕರ ಅಪಘಾತ: ಎಂಟು ವಿದ್ಯಾರ್ಥಿಗಳ ಸಾವು

ತಿರುವನಂತಪುರ: ಕೇರಳಂನ ತ್ರಿಶೂರ್ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನರ ಆಕ್ರೋಶ: ಲಾಲ್‌ಬಾಗ್‌ ಸುರಂಗ ಯೋಜನೆ ದೂರಕ್ಕೆ ಕೊಂಡೊಯ್ಯಲು ಸರ್ಕಾರ ಚಿಂತನೆ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ನಾಗರಿಕರು ಹಾಗೂ ಬಿಜೆಪಿಯಿಂದ ಭಾರಿ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಉದ್ದೇಶಿತ ಯೋಜನೆಯನ್ನು ಅಲ್ಲಿಂದ ದೂರಕ್ಕೆ ಕೊಂಡೊಯ್ಯಲು ಸರ್ಕಾರ ಚಿಂತನೆ ನಡೆಸಿದೆ.

ವಾರದ ವಿಶೇಷ: ಜಿಡಿಪಿ ಲೆಕ್ಕಾಚಾರ ಹೇಗೆ?

ಭಾರತದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಜೂನ್‌ ತ್ರೈಮಾಸಿಕದಲ್ಲಿ ಶೇ 7.8ರಷ್ಟು ಆಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಹೇಳಿದೆ. ಇದು ನಿರೀಕ್ಷೆಗೂ ಮೀರಿದ ಬೆಳವಣಿಗೆ. ಈ ಪ್ರಮಾಣದ ಬೆಳವಣಿಗೆಯೊಂದಿಗೆ, ಜಗತ್ತಿನ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ಹೆಚ್ಚಿನ ವೇಗದ ಬೆಳವಣಿಗೆಯನ್ನು ಸಾಧಿಸಿದ ದೇಶ ಎಂಬ ಹೆಗ್ಗಳಿಕೆಯನ್ನು ಭಾರತ ಪಡೆದಿದೆ. ಜಿಡಿಪಿ ಬೆಳವಣಿಗೆ ಕುರಿತ ಅಂಕಿ–ಅಂಶಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ನಂತರದಲ್ಲಿ, ಕೇಂದ್ರ ಸರ್ಕಾರದ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಗರ್ಗ್ ಅವರು, ‘ಕಳೆದ ವರ್ಷದ ಜಿಡಿಪಿ ಗಾತ್ರವನ್ನು ಪರಿಷ್ಕರಿಸದೇ ಇದ್ದಿದ್ದರೆ, ಹಣದುಬ್ಬರದ ಪ್ರಮಾಣವನ್ನು ಪರಿಗಣಿಸಿದಾಗ ಜಿಡಿಪಿ ಬೆಳವಣಿಗೆ ಶೇ 2.6ರಷ್ಟು ಮಾತ್ರ ಆಗುತ್ತಿತ್ತು’ ಎಂದು ಹೇಳಿದ್ದಾರೆ. ಇದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ

ಮೂರು ಮಕ್ಕಳಿದ್ದ ಶಾಲೆಯಲ್ಲೀಗ 34 ಚಿಣ್ಣರು: ಸರ್ಕಾರಿ ಶಾಲೆ ಉಳಿಸಿದ ಶಿಕ್ಷಕ

ಪಾಂಡವಪುರ (ಮಂಡ್ಯ): ಸೂರು ಮುರಿದು ಬೀಳುವ ಹಂತದಲ್ಲಿದ್ದ ತಾಲ್ಲೂಕಿನ ಗೌಡಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಇದ್ದದ್ದು ಕೇವಲ ಮೂರು ಮಕ್ಕಳು. ಗಿಡಗಂಟಿ ಬೆಳೆದು, ದನಕರು ಮೇಯುತ್ತಿದ್ದ ಶಿಥಿಲಾವಸ್ಥೆಯಲ್ಲಿದ್ದ ಶಾಲೆಯಲ್ಲಿ ಇಂದು 34 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಜೆನ್‌– ಝೀ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಕಾಂಗ್ರೆಸ್‌ನಿಂದ ತರಬೇತಿ ಕೇಂದ್ರ

ಬೆಂಗಳೂರು: ಬಿಜೆಪಿಯು ದಕ್ಷಿಣ ಭಾರತದಲ್ಲಿ ತನ್ನ ನೆಲೆ ವಿಸ್ತರಿಸುವುದನ್ನು ತಡೆಯಲು ಮುಂದಾಗಿರುವ ಕಾಂಗ್ರೆಸ್‌, ಜೆನ್‌– ಝೀಗಳನ್ನು ಒಳಗೊಂಡ ಜಾತ್ಯತೀತ, ಧರ್ಮಾತೀತ ಮನೋಭಾವದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ತಯಾರಿ ನಡೆಸಿದೆ.

ಕೆಪಿಎಸ್‌ಸಿ | ಅಕ್ರಮ ಪ್ರಕರಣ: ಬಸವರಾಜ್‌ ಕನ್ನಾಳೆಯ 17 ಖಾತೆ ‘ಫ್ರೀಜ್‌’

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ಬಸವರಾಜ್‌ ಕನ್ನಾಳೆ ಅವರ ಹಣಕಾಸು ವ್ಯವಹಾರಗಳ ಬೆಂಬತ್ತಿರುವ ಸಿಐಡಿ ತನಿಖಾಧಿಕಾರಿಗಳು, ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಹೆಸರಿನಲ್ಲಿ ಕನ್ನಾಳೆ ವಿವಿಧ ಬ್ಯಾಂಕ್‌ಗಳಲ್ಲಿ ತೆರೆದಿರುವ 17 ಖಾತೆಗಳನ್ನು ‘ಫ್ರೀಜ್‌’ (ಹಣ ವರ್ಗಾವಣೆಗೆ ತಡೆ) ಮಾಡಿಸಿದ್ದಾರೆ.

ನೇಪಾಳ ಪ್ರವಾಹದಿಂದ 30 ಸಾವಿರಕ್ಕೂ ಅಧಿಕ ಜನರಿಗೆ ತೊಂದರೆ: ವರದಿ

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ಸುಮಾರು 32 ಸಾವಿರಕ್ಕೂ ಅಧಿಕ ಜನರು ಬಾಧಿತರಾಗಿದ್ದಾರೆ ಎಂದು ಸರ್ಕಾರದ ಪ್ರಾಥಮಿಕ ವರದಿಯೊಂದು ತಿಳಿಸಿದೆ.

ಎಸ್‌ಐಆರ್‌: 7.31 ಲಕ್ಷ ಮಂದಿಗೆ ನೋಟಿಸ್‌

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಭಾಗವಾಗಿ 7.31 ಲಕ್ಷ ಮಂದಿಗೆ ನೋಟಿಸ್‌ ನೀಡಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ