
Vaishnavi Gowda: ನಟಿ ವೈಷ್ಣವಿ ಗೌಡ ಕಮ್‌ಬ್ಯಾಕ್; ಗೆಳತಿ ಗಾಯತ್ರಿ ಸೀರಿಯಲ್‌ನಲ್ಲಿ ಮಿಂಚಿಂಗ್, ಹೊಸ ಧಾರಾವಾಹಿ ಅಪ್ಡೇಟ್ಸ್
Vaishnavi Gowda: ನಟಿ ವೈಷ್ಣವಿ ಗೌಡ ಅವರು ಮದುವೆಯ ನಂತರ ಕಮ್‌ಬ್ಯಾಕ್ ಮಾಡಿದ್ದಾರೆ. ಅಗ್ನಿಸಾಕ್ಷಿ ಹಾಗೂ ಸೀತಾರಾಮ ಸೀರಿಯಲ್‌ಗಳ ಮೂಲಕ ಖ್ಯಾತಿ ಗಳಿಸಿರುವ, ಕನ್ನಡಿಗರ ಮನೆ ಮಾತಾಗಿರುವ ವೈಷ್ಣವಿ ಗೌಡ ಅವರು ಇದೀಗ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಹೊಸದೊಂದು ಸೀರಿಯಲ್‌ನಲ್ಲಿ ಮಿಂಚುವುದಕ್ಕೆ ರೆಡಿಯಾಗಿದ್ದಾರೆ. ಸೀತಾರಾಮ ಸೀರಿಯಲ್ ಮುಕ್ತಾಯವಾದ ಮೇಲೆ ವೈಷ್ಣವಿ ಗೌಡ ಅವರ ಮದುವೆಯಾಗಿತ್ತು. ಮದುವೆಯ ನಂತರ ಸಣ್ಣ ಬ್ರೇಕ್ ತೆಗೆದುಕೊಂಡು ವೈಷ್ಣವಿ ಗೌಡ ಅವರು ಕಮ್‌ಬ್ಯಾಕ್ ಮಾಡಿದ್ದಾರೆ.
ಹಳೆಯ ಗೆಳತ ಪ್ರೆಂಡ್ಶಿಪ್ ನೆನಪಿಸೋ ಹೊಸ ಕತೆ- "ಗೆಳತಿ ಗಾಯತ್ರಿ" ಸೀರಿಯಲ್‌ನಲ್ಲಿ ವೈಷ್ಣವಿ ಅವರು ಕಾಣಿಸಿಕೊಂಡಿದ್ದಾರೆ. ಕನ್ನಡದ ಖ್ಯಾತ ಕಿರುತೆರೆ ನಟಿ ವೈಷ್ಣವಿ ಅವರು ಈಚೆಗೆ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಸಹ ಆಗಿತ್ತು. ಈ ಫೋಟೋಗಳನ್ನು ನೋಡಿದ್ದ ವೈಷ್ಣವಿ ಅವರ ಅಭಿಮಾನಿಗಳು ಮೇಡಂ ಕಮ್‌ಬ್ಯಾಕ್ ಯಾವಾಗ ಮಾಡ್ತೀರ ಅಂತ ಪ್ರಶ್ನೆಗಳನ್ನು ಕೇಳಿದ್ದರು. ಈ ಫೋಟೋಗಳಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಅವರ ಅಭಿಮಾನಿಗಳು ಸುರಿಸಿದ್ದರು. ಇದೀಗ ಕೊನೆಗೂ ಅಭಿಮಾನಿಗಳಿಗೆ ವೈಷ್ಣವಿ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
'ಗೆಳತಿ ಗಾಯತ್ರಿ' ಎನ್ನುವ ಹೊಸ ಸೀರಿಯಲ್‌ನಲ್ಲಿ ವೈಷ್ಣವಿ ಗೌಡ ಅವರು ಮಿಂಚಲಿದ್ದಾರೆ. ಈ ಸೀರಿಯಲ್ ಸನ್ ಉದಯ (udayatv)ಯಲ್ಲಿ ಪ್ರಸಾರವಾಗಲಿದೆ. ವೈವಿಧ್ಯಮಯ ಕಥಾಹಂದರ ಹೊಂದಿರುವ ಸೀರಿಯಲ್ ಇದಾಗಿದೆ. ಸ್ನೇಹದ ನಿಜವಾದ ಅರ್ಥ, ಗೆಳತನದ ಬಾಂಧವ್ಯ ಹಾಗೂ ಅದರ ಮಹತ್ವವನ್ನು ಹೃದಯಸ್ಪರ್ಶಿಯಾಗಿ ಬಿಂಬಿಸುವ ಸೀರಿಯಲ್ ಇದಾಗಿದೆ ಎಂದು ಹೇಳಲಾಗಿದೆ. 'ಗೆಳತಿ ಗಾಯತ್ರಿ' ಧಾರವಾಹಿ ಇದೇ ಆಗಸ್ಟ್ 17ರಿಂದ ಸೋಮವಾರದಿಂದ ಶನಿವಾರ ಸಂಜೆ 7ಕ್ಕೆ ಪ್ರಸಾರವಾಗಲಿದೆ. ಈ ಸೀರಿಯಲ್‌ನ ಪ್ರೋಮೋ ಸಹ ಗಮನ ಸೆಳೆದಿದೆ. ಹೊಸ ಸೀರಿಯಲ್‌ನ ಪ್ರೋಮೋದಲ್ಲಿ ವೈಷ್ಣವಿ ಅವರು ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಗೆಳತಿ ಗಾಯಿತ್ರಿ ಪ್ರೋಮೋದಲ್ಲಿ ಏನಿದೆ, ವೈಷ್ಣವಿ ಅವರ ಅಭಿಮಾನಿಗಳು ಹೇಳಿದ್ದೇನು ಎನ್ನುವ ವಿವರ ಮುಂದೆ ನೋಡೋಣ.
ಗೆಳತಿ ಗಾಯಿತ್ರಿ ಹೊಸ ಸೀರಿಯಲ್ ಪ್ರೋಮೋದಲ್ಲೇನಿದೆ ?
ಇನ್ನು ಗೆಳತಿ ಗಾಯಿತ್ರಿ ಸೀರಿಯಲ್‌ನ ಪ್ರೋಮೋ ರಿಲೀಸ್ ಆಗಿದೆ. ಅದರಲ್ಲಿ ಇಬ್ಬರು ಗೆಳತಿಯರ ಬಾಲ್ಯದ ನೆನಪುಗಳಿವೆ. ಪಾರ್ವತಿ ಮತ್ತು ಗಾಯಿತ್ರಿ ಎನ್ನುವ ಇಬ್ಬರು ಗೆಳತಿಯರ ನಡುವಿನ ಬಾಂಧವ್ಯದ ಕಥೆಯನ್ನು ಈ ಸೀರಿಯಲ್ ಹೇಳಲಿದೆ. ಬಾಲ್ಯದಲ್ಲಿ ಪಾರ್ವತಿಗೆ ಸಿಕ್ಕ ಮೊದಲ ಸ್ನೇಹಿತೆ ಗಾಯತ್ರಿ. ಬಾಲ್ಯದಲ್ಲಿ ಅನ್ಯೂನ್ಯವಾಗಿದ್ದ ಇಬ್ಬರು ಗೆಳತಿಯರು ಕಾರಣಾಂತರಗಳಿಂದ ದೂರವಾಗುತ್ತಾರೆ.
ಈ ಇಬ್ಬರು ಗೆಳತಿಯರು 25 ವರ್ಷಗಳ ನಂತರ ಭೇಟಿಯಾಗುವ ಸಂದರ್ಭ ಇವರಿಬ್ಬರಿಗೂ ಎದುರಾಗುವಂತೆ ತೋರಿಸಲಾಗಿದೆ. ಕಾಲ ಸರಿದಂತೆ ಕಾರಣಾಂತರದಿಂದ ದೂರವಾದಾಗ ಪಾರ್ವತಿಗೆ ಕಾಡುವಂತೆ ನೆನಪಾಗುತ್ತಿರುವವಳು ಗಾಯತ್ರಿ. ಶ್ರೀಮಂತ ಕುಟುಂಬದಲ್ಲಿ ಸುಖಸಂಸಾರ ನಡೆಸುತ್ತಿರುವ ಪಾರ್ವತಿಗೆ ಪ್ರೀತಿಯ ಪತಿ, ಮುದ್ದಾದ ಮಗಳು ಎಲ್ಲವೂ ಇದ್ದರೂ, ಗಾಯತ್ರಿಯನ್ನು ಕಾಣುವ ಹಂಬಲ ಕಡಿಮೆಯಾಗೇ ಇಲ್ಲ ಎನ್ನುವಂತೆ ಕಥೆ ಸಾಗುತ್ತದೆ.
ವೈಷ್ಣವಿ ಗೌಡ ಅಭಿಮಾನಿಗಳು ಹೇಳಿದ್ದೇನು ?
ಗೆಳತಿ ಗಾಯಿತ್ರಿ ಎನ್ನುವ ಹೊಸ ಸೀರಿಯಲ್‌ನ ಪ್ರೋಮೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿಮ್ಮನ್ನು ನೋಡಿ ಖುಷಿ ಆಯ್ತು ಶುಭವಾಗ್ಲಿ ಮೇಡಂ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.
View this post on Instagram