Toxic: 'ಟಾಕ್ಸಿಕ್' ಟೀಕಿಸಿ ಯಶ್‌ಗೆ ನಟಿ ರಿಷಿಕಾ ವಾರ್ನ್‌! ಬಿಕಿನಿ ಫೋಟೋ ಹಾಕಿ ಇದೇನಾ ಸಂಸ್ಕಾರ ಎಂದ ಫ್ಯಾನ್ಸ್..Video

Toxic: 'ಟಾಕ್ಸಿಕ್' ಟೀಕಿಸಿ ಯಶ್‌ಗೆ ನಟಿ ರಿಷಿಕಾ ವಾರ್ನ್‌! ಬಿಕಿನಿ ಫೋಟೋ ಹಾಕಿ ಇದೇನಾ ಸಂಸ್ಕಾರ ಎಂದ ಫ್ಯಾನ್ಸ್..Video

Toxic: 'ಟಾಕ್ಸಿಕ್' ಟೀಕಿಸಿ ಯಶ್‌ಗೆ ನಟಿ ರಿಷಿಕಾ ವಾರ್ನ್‌! ಬಿಕಿನಿ ಫೋಟೋ ಹಾಕಿ ಇದೇನಾ ಸಂಸ್ಕಾರ ಎಂದ ಫ್ಯಾನ್ಸ್..Video

ಬೆಂಗಳೂರು: ಇಡೀ ದೇಶವೇ ನಟ ಯಶ್ ಅವರ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದೆ. ಟಾಲಿವುಡ್ ರೇಂಜಿನ ಸಿನಿಮಾ ಇದಾಗಿದ್ದು, ಕಣ್ತುಂಬಿಕೊಳ್ಳಲು ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ. ಇತ್ತೀಚೆಗೆ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿಯೂ ನಟ ಯಶ್ ಅವರೊಂದಿಗಿನ ಕೆಲಸವನ್ನು 'ಟಾಕ್ಸಿಕ್' ಸಹ ನಟಿಯರು ಹೊಗಳಿದ್ದರು. ಇದೀಗ ಕನ್ನಡ ಇಂಡಸ್ಟ್ರಿಯ ನಟಿ, ನಿರ್ದೇಶಕರೊಬ್ಬರ ಮಗಳು ನಟ ಯಶ್ ಅವರ ಸಂಸಾರ, ಹೆಂಡತಿ, ಮಕ್ಕಳನ್ನು ಉಲ್ಲೇಖಿಸಿ ವಾರ್ನ್ ಮಾಡಿದ್ದಾರೆ. ಕರ್ನಾಟಕದಿಂದ ನಿನ್ನ ಓಡಿಸಿ ಬಿಡ್ತಿವೆ ಎಂದು ಹೇಳಿದ್ದಾರೆ.

ಹೌದು, ಕನ್ನಡದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳು, ಮತ್ತು ನಟಿ ರಿಷಿಕಾ ಸಿಂಗ್ ಅವರು ಟಾಕ್ಸಿಕ್ ಮೂವಿಗೆ ಸಂಬಂಧಿಸಿದಂತೆ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದೆ. ಯಶ್ ಅಭಿಮಾನಿಗಳ ಕೆಂಗಣ್ಣಿಗೆ ನಟಿ ಗುರಿಯಾಗಿದ್ದಾರೆ.

ಕೆಜಿಎಫ್ ಬಳಿಕ ನಟ ಯಶ್ ಅವರು ನಟಿಸಿರುವ 'ಟಾಕ್ಸಿಕ್' ಸಿನಿಮಾ ಇದೇ ಆಗಸ್ಟ್‌ 26ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಪ್ಯಾನ್ ವರ್ಲ್ಡ್ ಸಿನಿಮಾ ಮೂಲಕ ಕನ್ನಡದ ನಟನೊಬ್ಬ ಜಗತ್ತಿಗೆ ನಮ್ಮ ಶಕ್ತಿಯನ್ನು ತೋರಿಸಲು ಮುಂದಾಗಿದ್ದಾರೆ. ಅವರ ಸಿನಿಮಾ, ಯಶ್ ದೂರದೃಷ್ಟಿ ಸೇರಿದಂತೆ ನಟನೆ, ಟ್ರೈಲರ್ ಅನ್ನು ಮೆಚ್ಚಿ ಎಲ್ಲರೂ ಹೊಗಳುತ್ತಿದ್ದಾರೆ.

ಯಶ್ ಹೊಗಳಿದ್ದ 'ಟಾಕ್ಸಿಕ್' ಸಹ ನಟಿಯರು

ಅಷ್ಟೇ ಏಕೆ ಬೆಂಗಳೂರಿನಲ್ಲಿ ನಡೆದ ಟ್ರೈಲರ್‍‌ ಬಿಡುಗಡೆ ಕಾರ್ಯಕ್ರಮದಲ್ಲಿ ಸಹ ನಟಿಯರೇ ಚಿತ್ರದ ಕುರಿತು, ತಮ್ಮ ನಟನೆ, ಯಶ್ ಕುರಿತು ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಆದರೆ ಯಶ್ ಮತ್ತು ಟಾಕ್ಸಿಕ್ ಕುರಿತು ನಟಿ ರಿಷಿಕಾ ಸಿಂಗ್ ಅವರು ನಕರಾತ್ಮಕವಾಗಿ ಟೀಕಿಸಿ ವಿಡಿಯೋ ಮಾಡಿದ್ದಾರೆ. ಅದರಲ್ಲಿ ಯಶ್ ಅವರ ಸಂಸಾರವನ್ನೂ ಎಳೆದು ತಂದಿದ್ದಾರೆ. ಇದನ್ನು ಯಶ್ ಫ್ಯಾನ್ಸ್ ಸಹಿಸಿಲ್ಲ, ನಟಿಗೆ ತಿರುಗೇಟು ನೀಡಿದ್ದಾರೆ.

ವಿಡಿಯೋದಲ್ಲಿ ರಿಷಿಕಾ ಸಿಂಗ್ ಹೇಳಿದ್ದೇನು?

ಟಾಕ್ಸಿಕ್ ಡೈಲಾಗ್ ಅನ್ನು ವಿಡಿಯೋದಲ್ಲಿ ರಿಪೀಟ್ ಮಾಡಿರುವ ರಿಷಿಕಾ, "ಹೆಣ್ಣಮಕ್ಕಳಿಗೆ ಅಂದ ಇದ್ರೆ ಚಂದ, ಗಂಡು ಮಕ್ಳಿಗೆ ಮರ್ಯಾದೆ ಇದ್ರೆ ಚೆಂದ ಕಂದ! ಇದೇನು ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ. ಮನೆಯಲ್ಲಿ ಹೆಂಡ್ತಿ ಇದಾಳೆ, ಇದೇನು ಹೀರೋಯಿನ್​​​ಗಳ ಜೊತೆ ನಿನ್ನ ಚಕ್ಕಂದ ಕಂದ. ನಂಗೆ ಇಷ್ಟ ಆಗ್ಲಿಲ್ಲ ನಿನ್ನ ಹೊಸ ಗಂಧ. ನಿಂಗೂ ಹೆಣ್ ಮಗಳು ಇದಾಳೆ, ದೊಡ್ಡದಾಗಿ ಡೈಲಾಗ್ ಹೊಡೆಯೋಕೆ ಬಂದ? ಹೆಣ್ಣಮಕ್ಕಳಿಗೆ ರೆಸ್ಪೆಕ್ಟ್ ಇರ್ಲಿ, ಇಲ್ಲಾಂದ್ರೆ ಜಾಗ ಖಾಲಿ ಮಾಡಿಸಿ ಬಿಡ್ತಿವಿ ಕರ್ನಾಟಕದಿಂದ. ಐ ಆಮ್ 'ಟಾಕ್ಸಿಕ್'' ಎಂದು ರಿಷಿಕಾ ವಿಡಿಯೋದಲ್ಲಿ ಹೇಳಿದ್ದಾರೆ. ಇದು ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

'ರಿಷಿಕಾ ಬಿಕಿನಿ ಫೋಟೋ ಹಾಕಿ ಇದೇನಾ ಸಂಸ್ಕಾರ' ಅಂದ ಫ್ಯಾನ್ಸ್

ಕೆಲವರು ಸಿನಿಮಾದ ಅರೆ ಬರೆ ದೃಶ್ಯಗಳನ್ನು ಈ ಹಿಂದೆ ಟ್ರೋಲ್ ಮಾಡಿದ್ದರು. ಸಿನಿಮಾದ ಟ್ರೈಲರ್, ತಾಂತ್ರಿಕವಾಗಿ ಸಿನಿಮಾ ಮೂಡಿ ಬಂದ ಶೈಲಿ, ಯಶ್ ನಟನೆಯನ್ನು ಅನೇಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ನಟಿಯರ ಇತಿ ಮಿತಿಯಲ್ಲೇ ಒಪ್ಪಿಗೆ ಪಡೆದೇ ಟಾಕ್ಸಿಕ್ ಸಿನಿಮಾದಲ್ಲಿ ನಟಿಸಿದ್ದಾರೆ. ನಟಿಯರು ಸೂಕ್ತ ಸಂಭಾವನೇ ಪಡೆದೇ ತಮ್ಮ ವ್ಯಾಪ್ತಿಯಲ್ಲೇ ನಟಿಸಿದ್ದಾರೆ. ಇದರಿಂದ ಯಾರಿಗೇನು ಸಮಸ್ಯೆ? ಎಂದು ವಿಡಿಯೋ ನೋಡಿ 'ಟಾಕ್ಸಿಕ್' ಪರ ಕಾಮೆಂಟ್ ಮಾಡಿದ್ದಾರೆ. ನಿಮ್ಮ ಈ ವಿಮರ್ಶೆ, ಟೀಕೆ ಸರಿಯಲ್ಲ ಅಂತಲೂ ಯಶ್ ಫ್ಯಾನ್ಸ್ ರಿಷಿಕಾ ಮೇಲೆ ಗರಂ ಆಗಿದ್ದಾರೆ.

ಮತ್ತೆ ಕೆಲವರು ಈ ಹಿಂದಿನ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ 'ರಿಷಿಕಾ ಅವರ ಬಿಕಿನಿ ಫೋಟೋಗಳನ್ನು ಹಂಚಿಕೊಂಡು ಇದೇನಾ ನಿಮ್ಮ ಸಂಸ್ಕಾರ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ರಿಷಿಕಾ 'ಕಳ್ಳ-ಮಳ್ಳ-ಸುಳ್ಳು' ಸಿನಿಮಾ, ಕಂಠೀರವ ಸೇರಿದಂತೆ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಗ್‌ ಕನ್ನಡದ ಸ್ಪರ್ಧಿಯಾಗಿಯೂ ಗುರುತಿಸಿಕೊಂಡಿದ್ದರು.

ಇವರನ್ನ ಎಲ್ಲೋ ನೋಡಿದೀನಿ...
ಎಲ್ಲಿ ಅಂತ ಗೊತ್ತಾಗ್ತಾ ಇಲ್ಲಾ... 🤔 pic.twitter.com/8D33JgkSIU

— ಅಲ್ಪಸಂಖ್ಯಾತ (@alpasankhyata) August 10, 2026

ಇವರನ್ನ ಎಲ್ಲೋ ನೋಡಿದೀನಿ...
ಎಲ್ಲಿ ಅಂತ ಗೊತ್ತಾಗ್ತಾ ಇಲ್ಲಾ... 🤔 pic.twitter.com/8D33JgkSIU

yash film actress viral video fans

yash film actress viral video fans

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ