
Toxic Review: ಯಶ್ 'ಟಾಕ್ಸಿಕ್'ಗೆ ಭರ್ಜರಿ ಸ್ಪಂದನೆ, ಮೊದಲ ದಿನವೇ ಫ್ಯಾನ್ಸ್ ಕೊಟ್ಟ ರಿವ್ಯೂ ಇಲ್ಲಿದೆ!
ಬೆಂಗಳೂರು: ಬಹುನಿರೀಕ್ಷೆಯ ಯಶ್ ಅವರ 'ಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ ತೆರೆಕಂಡು ತನ್ನ ಓಟ ಶುರು ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್-2 ನಂತರ ನಾಲ್ಕೂವರೆ ವರ್ಷದ ಬಳಿಕ 'ಟಾಕ್ಸಿಕ್'ನಲ್ಲಿ ಸಖತ್ ಮಾಸ್ ಆಗಿ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ಬೆಂಗಳೂರು, ಕರ್ನಾಟಕ ಮಾತ್ರವಲ್ಲದೇ ದೇಶದೆಲ್ಲಡೆ 'ಟಾಕ್ಸಿಕ್' ಹವಾ ಶುರುವಾಗಿದೆ. ಇಂದು ಬೆಳಂಬೆಳಗ್ಗೆಯೇ ಫ್ಯಾನ್ಸ್ ಥಿಯೇಟರ್ ಮುಂದೆ ಜಮಾಯಿಸಿ ಸಿನಿಮಾ ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ. ಮೊದಲ ದಿನವೇ 'ಟಾಕ್ಸಿಕ್' ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ತಮಿಳು, ಹಿಂದಿ, ಕನ್ನಡ ಭಾಷಿಗರ ಮನಗೆದ್ದ ಟಾಕ್ಸಿಕ್ ಬಗ್ಗೆ ಕೆಲವು ತೆಲುಗು ಪಿಆರ್ ಟೀಂ ಕಡೆಯಿಂದ ನೆಗೆಟಿವ್ ರಿವ್ಯೂ ಮಾಡಿದ್ದಕ್ಕೆ ಯಶ್ ಫ್ಯಾನ್ ಗರಂ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ 'ಟಾಕ್ಸಿಕ್' ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ. ಫ್ಯಾನ್ಸ್ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಎಲ್ಲ ಥಿಯೇಟರ್‍ಗಳ ಮುಂದೆ ಶಿಳ್ಳೆ ಚಪ್ಪಾಳೆ ಹೊಡೆದು, ಪಟಾಕಿ ಸಿಡಿಸಿದ ಫ್ಯಾನ್ಸ್ ಟಾಕ್ಸಿಕ್ ಸಿನಿಮಾ, ಯಶ್ ಮಾಸ್ ಆಂಡ್ ಸ್ಟೈಲಿಶ್ ಲುಕ್, ನಟನೆ, ಸಿನಿಮಾದ ಒಂದೊಂದು ಫ್ರೇಮ್ ಕುರಿತು ಹೊಗಳುತ್ತಿದ್ದಾರೆ. ಯುವತಿಯರು, ಆಂಕಲ್ಸ್ ಸೇರಿದಂತೆ ಎಲ್ಲ ವರ್ಗದ ಜನರು ಮೊದಲ ದಿನವೇ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಮೆಚ್ಚಿದ್ದಾರೆ. ನಿರ್ದೇಶನ, ಹಿನ್ನೆಲೆ ಸಂಗೀತ, ಫಸ್ಟ್ ಹಾಫ್ ಮತ್ತು ಸೆಕೆಂಡ್ ಹಾಫ್ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ.
ತೆಲುಗು ಪಿಆರ್ ಟಿಂ ಬೇಕಂತಲೇ ನೆಗಟಿವ್ ರಿವ್ಯೂ ಆರೋಪ
ಅನೇಕ ತೆಲುಗು ಆಡಿಯನ್ಸ್ ಸಹ 'ಟಾಕ್ಸಿಕ್' ಮೆಚ್ಚಿದ್ದಾರೆ. ತಮಿಳು, ಹಿಂದಿ ಮತ್ತು ಕನ್ನಡ ಭಾಷಿಗರು ಸಿನಿಮಾವನ್ನು ಎದೆಗಪ್ಪಿಕೊಂಡಿದ್ದಾರೆ. ಯವತಿಯರು ಸಿನಿಮಾಗೆ, ಯಶ್‌ಗೆ ಜೈ ಅಂದಿದ್ದಾರೆ. ಆದರೆ ಕೋರ್ಟ್ ಆದೇಶದ ಹೊರತಾಗಿಯು ಎಕ್ಸ್ ಖಾತೆಯಲ್ಲಿ ತೆಲುಗು ಪಿಆರ್ ಟೀಂ ನಿಂದ ಕಡೆಯಿಂದ ನೆಗೆಟಿವ್ ರಿವ್ಯೂ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಂಚಿಕೊಂಡ ಯಶ್ ಫ್ಯಾನ್ಸ್ ಗರಂ ಆಗಿದ್ದಾರೆ. ಇಂತಹ ಟಾಕ್‌ಗಳಿಗೆ ನಮ್ ಬಾಸ್ಸೇ ತಲೆಕೆಡಿಸಿಕೊಂಡಿಲ್ಲ. ದಯವಿಟ್ಟು ಇದೆಲ್ಲ ನಂಬದೇ ಥಿಯೇಟರ್‍ಗೆ ಬಂದು ನೀವೇ ಸಿನಿಮಾ ನೋಡಿ ಎಂದು ಕರೆ ಕೊಟ್ಟಿದ್ದಾರೆ.
ಸಿನಿಮಾ ಕನ್ನಡದ್ದಲ್ಲ ಹಾಲಿವುಡ್‌ದೆಂದು ನೋಡಿ: ಫ್ಯಾನ್ ಮನವಿ
ದಯವಿಟ್ಟು ಈ ಸಿನಿಮಾವನ್ನು ಕನ್ನಡದ್ದು ಎಂದುಕೊಂಡು ನೋಡಬೇಡಿ, ಹಾಲಿವುಡ್ ಸಿನಿಮಾ ಎಂದುಕೊಂಡು ನೋಡಿ. ಅಷ್ಟರ ಮಟ್ಟಿಗೆ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ನಾನು ಟೆಂಟ್ ಸಿನಿಮಾ ನೋಡಿಕೊಂಡು ಬಂದವನು, ಬೆಳೆದವನು. ಯಶ್ ಸಿನಿಮಾ ಹಿಸ್ಟರಿ ಕ್ರಿಯೇಟ್ ಮಾಡುತ್ತದೆ ಎಂದು ಪ್ರೇಕಕರೊಬ್ಬರು ಮನವಿ ಮಾಡಿದ್ದಾರೆ. ಸಿನಿಮಾ ಇಷ್ಟವಾಯಿತು, ಫ್ಯಾಮಿಲಿ ಕೂತು ನೋಡಲು ಕೊಂಚ ಇರುಸು ಮುರಿಸು ಆಗಬಹುದು ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ಒಟ್ಟಾರೆ ಸಿನಿಮಾ ಹೇಗಿದೆ?
ಗೋವಾದಲ್ಲಿ 1947ರ ಪೋರ್ಚುಗೀಸರ ಕಾಲದಲ್ಲಿ ನಡೆಯುವ ಕಥೆ ಇದಾಗಿದ್ದು, ತ್ರಿಕೋನ ಪ್ರೇಮ ಕಥೆ ಹೊಂದಿದೆ. ಮೊದಲಾರ್ಧದಲ್ಲಿ ಮಾಸ್ ಆಗಿ ಮೂಡಿ ಬಂದಿದ್ದು, ಯಶ್ ಅವರ ಭರ್ಜರಿ ಎಂಟ್ರಿ ಸೀನ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ನಟಿ ಕಿಯಾರಾ ಹಾಗೂ ಯಶ್ ಕೆಮೆಸ್ಟ್ರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ತಬಾಯಿ' ಹಾಡು ಜನರ ಹಾರ್ಟ್‌ಗೆ ಒಂದು ಫೀಲ್ ಕೊಡುತ್ತದೆ. ಯಶ್, ನಾಡಿಯಾ ಮತ್ತು ರೆಬಿಕಾ ಮಧ್ಯ ತ್ರಿಕೋನ ಪ್ರೇಮ ಕಥೆ ನಡುವೆ ಹೆಚ್ಚು ವೈಲೆನ್ಸ್ ಇದೆ.
Done with movie FDFS #ToxicTheMovie
— ಸುಬ್ರಮಣ್ಯ | Subramanya (@Subramanya7798) August 26, 2026
1. “TOXIC Title card” 10/10❤️
2. “YASH Entry scene” 11/10🔥
3. “Pre Interval scene” 10/10🥶
4. Chilling “Climax” 20/10🤯🤯🤯 https://t.co/TwFkeJpGLN
Done with movie FDFS #ToxicTheMovie
1. “TOXIC Title card” 10/10❤️
2. “YASH Entry scene” 11/10🔥
3. “Pre Interval scene” 10/10🥶
4. Chilling “Climax” 20/10🤯🤯🤯 https://t.co/TwFkeJpGLN
ಇನ್ನೂ ಸೆಕೆಂಡ್ ಹಾಫ್‌ನಲ್ಲಿ ತಂದೆ, ಮಗನ (ಟಿಕೆಟ್) ನಡುವಿನ ಕಥೆ ತೆರೆದುಕೊಳ್ಳುತ್ತದೆ. ಸಂಭಾಷಣೆ ಜೊತೆಗೆ ಕುಟುಂಬಗಳ ಮಧ್ಯ ಉಂಟಾಗುವ ಏರಿಳಿತ, ಜೆನ್ ಜೀ ತಲೆಮಾರಿನ ಮನಸ್ಥಿತಿ, ಆಲೋಚನೆಗಳಿಂದ ತುಂಬಿಕೊಂಡಿದೆ. ಗುನುಗುವಂತಹ ಹಾಡುಗಳಿಲ್ಲ. ಆದರೆ ಮೊದಲಾರ್ಧಕ್ಕಿಂತ ಸೆಕೆಂಡ್ ಹಾಫ್ ಮತ್ತು ಯಶ್ ಅವರ ಬೇರೆ ಬೇರೆ ಶೇಡ್ ನಟನೆ ಹೆಚ್ಚು ಇಷ್ಟವಾಯಿತು ಎನ್ನುತ್ತಿದ್ದಾರೆ ಫ್ಯಾನ್ಸ್.
All the negative PR Telugu handles :
— Rocky 4DX (@styles_rocking) August 26, 2026
Giving worst review to #Toxic to save their stars because #Yash did not invite them.
Here you go... See it...#ToxicTheMovie Review pic.twitter.com/N9QGcK7S2Q
All the negative PR Telugu handles :
Giving worst review to #Toxic to save their stars because #Yash did not invite them.
Here you go... See it...#ToxicTheMovie Review pic.twitter.com/N9QGcK7S2Q
ಬೆಂಗಳೂರಿನ ಪ್ರಮುಖ ಚಿತ್ರಮಂದಿರ, ಬೀದರ್, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಸಿನಿಮಾಗೆ ಅದ್ಧೂರಿ ವೆಲ್‌ಕಮ್ ಸಿಕ್ಕಿದೆ. ಯಶ್ ಫ್ಯಾನ್ಸ್ ನಿಜಕ್ಕೂ ಹಬ್ಬ ಆಚರಿಸುತ್ತಿದ್ದಾರೆ. ಯಾರೇ ನೆಗಟಿವ್ ರಿವ್ಯೂ ಕೊಟ್ಟರೂ ಸಿನಿಮಾ ಗೆಲ್ಲಲಿದೆ. ನಿರೀಕ್ಷೆಯಂತೆ ಗಳಿಕೆ ಮಾಡಲಿದೆ ಎಂದು ಸಿನಿಮಾ ನೋಡಿದ ಬಳಿಕ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ನೂರಾರು ಕೋಟಿಯ ಈ ಸಿನಿಮಾ 2100 ಕೋಟಿ ರೂಪಾಯಿ ಕ್ಬಬ್ ಸೇರಲಿದೆ ಅಂತಲೂ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಶೀಘ್ರವೇ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.
All the negative PR Telugu handles :
— Rocky 4DX (@styles_rocking) August 26, 2026
Giving worst review to #Toxic to save their stars because #Yash did not invite them.
Here you go... See it...#ToxicTheMovie Review pic.twitter.com/N9QGcK7S2Q
All the negative PR Telugu handles :
Giving worst review to #Toxic to save their stars because #Yash did not invite them.
Here you go... See it...#ToxicTheMovie Review pic.twitter.com/N9QGcK7S2Q