
Toilet Tips: ಮನೆಯ ಟಾಯ್ಲೆಟ್‌ನಲ್ಲಿ ಅಂಟಿ ಕುಳಿತ ಕಲೆ ತೆಗೆಯಲು ಇಲ್ಲಿದೆ ಸುಲಭ ಉಪಾಯ
ನಾವು ಮನೆಯನ್ನು ಸ್ವಚ್ಛವಾಗಿಡಲು ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ ಶೌಚಾಲಯ ಶುಚಿಯಾಗಿಡುವುದು ಕೂಡಾ ಅಷ್ಟೇ ಮುಖ್ಯ. ಇಲ್ಲವಾದರೆ, ಶೌಚಾಲಯದಲ್ಲಿ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುವುದು. ಮೊಂಡುತನದ ಕಲೆಗಳು ಏಳುವುದು. ಕೆಮಿಕಲ್‌ಗಳನ್ನು ಬಳಸಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಹುದು. ಆದರೆ ಕೆಮಿಕಲ್ ಟಾಯ್ಲಟ್ ಕ್ಲೀನರ್‌ಗಳಿಂದ ಕಲೆಗಳನ್ನು ತೆಗದು ಹಾಕುವುದು ಅಷ್ಟು ಸುಲಭವಲ್ಲ. ಅಲ್ಲದೆ, ಈ ಕ್ಲೆನ್ಸರ್‌ಗಳು ದುಬಾರಿಯಾಗಿಯೂ ಇರುವುದು. ಅಲ್ಲದೆ ನಮ್ಮ ಆರೋಗ್ಯಕ್ಕೂ ಇದು ಒಳ್ಳೆಯದಲ್ಲ. ಈ ಕಲೆಗಳು ಮೊದಲಿಗೆ ಸಣ್ಣದಾಗಿ ಕಂಡರೂ, ಕಾಲ ಕಳೆದಂತೆ ಗಟ್ಟಿಯಾಗುತ್ತಾ ಹೋಗುವುದು. ಅಲ್ಲದೆ, ಶೌಚಾಲಯ ಕ್ಲೀನ್ ಮಾಡಲು ಬಳಸುವ ಕೆಮಿಕಲ್, ಬ್ಲೀಚ್ ಕಮೋಡಿಗೂ ಹಾನಿ ಮಾಡಬಹುದು.
ಟಾಯ್ಲೆಟ್ ಕಲೆ ತೆಗೆಯಲು ನೈಸರ್ಗಿಕ ಮಾರ್ಗ
ಸಸ್ಟೈನಬಲ್ ಲೇಜಿಯ ಮಾಲೀಕರು ಮತ್ತು ಕ್ಲೀನಿಂಗ್ ತಜ್ಞೆ ಸೋಫಿ ಶೌಚಾಲಯದ ಕಠಿಣ ಕಲೆ ತೆಗೆಯಲು ನೈಸರ್ಗಿಕ ಉಪಾಯವನ್ನು ತೋರಿಸಿಕೊಟ್ಟಿದ್ದಾರೆ. ನಿಂಬೆಹಣ್ಣಿನಲ್ಲಿ ನೈಸರ್ಗಿಕವಾಗಿ ಅಡಗಿರುವ ಸಿಟ್ರಿಕ್ ಆಮ್ಲವು ಈ ಕಲೆಗಳನ್ನು ತೆಗೆದು ಹಾಕುವಲ್ಲಿ ಬ್ಲೀಚ್‌ಗಿಂತ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ. ಸಿಟ್ರಿಕ್ ಆಸಿಡ್ ಮತ್ತು ಹೀಟ್ ಅನ್ನು ಒಟ್ಟಿಗೆ ಬಳಸುವ ಮೂಲಕ ಟಾಯ್ಲೆಟ್‌ನಲ್ಲಿ ಮನೆ ಮಾಡಿಕೊಂಡಿರುವ ಕಲೆಗಳನ್ನು ಸುಲಭವಾಗಿ ತೆಗೆಯಬಹುದು ಎಂದು ಹೇಳಿದ್ದಾರೆ. ಕಮರ್ಶಿಯಲ್ ಕ್ಲೀನರ್‌ಗಳು ಹೆಚ್ಚಾಗಿ ಹೈಡ್ರೋಕ್ಲೋರಿಕ್ ಆಸಿಡ್ ಅಥವಾ ಸಲ್ಫಾಮಿಡಿಕ್ ಆಸಿಡ್‌ನಂಥಹ ಅಪಾಯಕಾರಿ ವಸ್ತುಗಳನ್ನು ಬಳಸುತ್ತಾರೆ. ಅವು ಕೆಲವೊಮ್ಮೆ ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು. ಜಲಚರಗಳಿಗೂ ವಿಷಕಾರಿಯಾಗಬಹುದು.
ಮಕ್ಕಳಿರುವ ಮನೆಯಲ್ಲಿ ಕೆಮಿಕಲ್ ಒಳ್ಳೆಯದಲ್ಲ
ಅಲ್ಲದೆ ಮಕ್ಕಳಿರುವ ಮನೆಯಲ್ಲಿ ರಾಸಾಯನಿಕಗಳನ್ನು ಬಳಸುವುದು ಒಳ್ಳೆಯದೂ ಅಲ್ಲ. ಆದ್ದರಿಂದ ಬಹುತೇಕ ಮಂದಿ ಕೆಮಿಕಲ್ ಬಳಸಲು ಇಷ್ಟಪಡುವುದಿಲ್ಲ. ಇಂಥವರು ಸುಲಭವಾಗಿ ಸಿಟ್ರಿಕ್ ಆಮ್ಲವನ್ನು ಬಳಸಬಹುದಾಗಿದೆ. ಸಿಟ್ರಿಕ್ ಆಮ್ಲವು ಕಲೆಯನ್ನು ಸುಲಭವಾಗಿ ತೆಗೆದು ಹಾಕುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ವಿನೆಗರ್ ಮತ್ತು ಕೋಲಾ ಎಷ್ಟು ಪರಿಣಾಮಕಾರಿ
ಶೌಚಾಲಯದ ಕಮೋಡ್‌ನಲ್ಲಿ ಅಂಟಿಕೊಂಡಿರುವ ಕಲೆಗಳನ್ನು ತೆಗೆಯಲು ವಿನೆಗರ್ ಮತ್ತು ಕೋಲಾವನ್ನು ಬಳಸಲು ಕೂಡಾ ಕೆಲವರು ಶಿಫಾರಸು ಮಾಡುತ್ತಾರೆ. ಆದರೆ, ಸೋಫಿ ಪ್ರಕಾರ ಸಿಟ್ರಿಕ್ ಆಮ್ಲ ವಿನೆಗರ್ ಮತ್ತು ಕೋಲಾಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ವಿನೆಗರ್ ಮತ್ತು ಕೋಲಾಗೆ ಹೋಲಿಸಿದರೆ ಸಿಟ್ರೆಕ್ ಆಮ್ಲಾಗೆ ತಗಲುವ ಖರ್ಚು ಕೂಡಾ ಕಡಿಮೆ.
ರಾತ್ರಿ ವೇಳೆ ಕ್ಲೀನಿಂಗ್‌ಗೆ ಬೆಸ್ಟ್
ಇನ್ಜು ಶೌಚಾಲಯವನ್ನು ಯಾವ ಸಮಯದಲ್ಲಿ ಶುಚಿಗೊಳಿಸಬೇಕು ಎಂದು ನೋಡುವುದಾದರೆ ಸಂಜೆ ಹೊತ್ತು ಇದಕ್ಕೆ ಹೆಚ್ಚು ಸೂಕ್ತ ಎನ್ನಲಾಗಿದೆ. ಯಾಕೆಂದರೆ ಸಂಜೆಯ ವೇಳೆ ಕ್ಲೀನರ್‌ಗೆ ಕಲೆಗಳನ್ನು ಕರಗಿಸಲು ಸಾಕಷ್ಟು ಸಮಯ ಸಿಗುತ್ತದೆ. ಮಲಗುವ ಮೊದಲು ಟಾಯ್ಲೆಟ್ ಕಮೋಡ್‌ಗೆ ಕ್ಲೀನರ್ ಹಾಕಿದರೆ ಮತ್ತೆ ಬೆಳಗೆವರೆಗೆ ಅದನ್ನು ತೊಳೆಯುವಂತಿಲ್ಲ. ಹಾಗೆಯೇ ಬಿಟ್ಟರೆ ಕೆಲಗಳು ಸುಲಭವಾಗಿ ಕರಗುತ್ತವೆ.
ಮೊದಲು ಕೆಟಲ್‌ನಲ್ಲಿ ನೀರು ಬಿಸಿ ಮಾಡಬೇಕು. ಆದರೆ ಕುದಿಸುವ ಅಗತ್ಯವಿಲ್ಲ. ಈ ಬಿಸಿ ನೀರನ್ನು ನಿಧಾನವಾಗಿ ಟಾಯ್ಲೆಟ್ ಬೌಲ್ ಒಳಗೆ ಹಾಕಿ. ನಂತರ, ಶೌಚಾಲಯಕ್ಕೆ ಅರ್ಧ ಬಾಕ್ಸ್ ಸಿಟ್ರಿಕ್ ಆಮ್ಲವನ್ನು ಸೇರಿಸಿ. ಈ ದ್ರಾವಣವನ್ನು ರಾತ್ರಿಯಿಡೀ ಹಾಗೆಯೇ ಬಿಡಿ. ಮರುದಿನ ಬೆಳಿಗ್ಗೆ, ಟಾಯ್ಲೆಟ್ ಬ್ರಷ್‌ನಿಂದ ಸ್ಕ್ರಬ್ ಮಾಡುವುದರಿಂದ ಉಳಿದಿರುವ ಕಲೆಗಳನ್ನು ಸುಲಭವಾಗಿ ತೆಗೆಯಬಹುದು.
ಇದನ್ನು ನಿರಂತರವಾಗಿ ಎರಡು ರಾತ್ರಿ ಮಾಡಬೇಕಾಗುತ್ತದೆ. ಸತತ ಎರಡು ದಿನಗಳವರೆಗೆ ಈ ತಂತ್ರವನ್ನು ಅಳವಡಿಸಿದರೆ ಟಾಯ್ಲಟ್ ಫಳ ಫಳನೆ ಹೊಳೆಯುವಂತೆ ಮಾಡಬಹುದು.
ಕಲೆ ಮರಳದಂತೆ ಏನು ಮಾಡಬೇಕು?
ಈ ಕಲೆಗಳು ಮತ್ತೆ ಮತ್ತೆ ಬಾರದಂತೆ ತಡೆಯಲು, ನಿಮ್ಮ ಶೌಚಾಲಯದ ಬಳಿ ಸಿಟ್ರಿಕ್ ಆಮ್ಲದ ಪೆಟ್ಟಿಗೆಯನ್ನು ಇರಿಸಿ. ನೀವು ಅದನ್ನು ಪ್ಲಾಸ್ಟಿಕ್ ಟಬ್ ಅಥವಾ ಜಾರ್‌ನಲ್ಲಿ ಇಡಬಹುದು. ಪ್ರತಿ ರಾತ್ರಿ ಮಲಗುವ ಮುನ್ನ ಅಲ್ಲಿ ಒಂದು ಚಮಚ ಸಿಟ್ರಿಕ್ ಆಸಿಡ್ ಅನ್ನು ಕಮೋಡ್‌ನಲ್ಲಿ ಹಾಕಿ ಬೆಳಗಿನವರೆಗೆ ಬಿಟ್ಟರೆ ಕಲೆಗಳು ಬರುವುದೇ ಇಲ್ಲ. ಮಾತ್ರವಲ್ಲ ಶೌಚಾಲಯದಿಂದ ಕೆಟ್ಟ ವಾಸನೆ ಕೂಡಾ ಬರುವುದಿಲ್ಲ.