
Madhugowda: ಕನ್ನಡದ ಪ್ರಸಿದ್ಧ ಯೂಟ್ಯೂಬರ್ ಮಧುಗೌಡಗೆ ಹೆಣ್ಣು ಮಗು: "ನಮ್ಮನೆಗೆ ಲಕ್ಷ್ಮಿ ಬಂದಿದ್ದಾಳೆ", ವಿಡಿಯೋ ವೈರಲ್
Madhugowda: ಕರ್ನಾಟಕದ ಜನಪ್ರಿಯ ಯೂಟ್ಯೂಬರ್ ಮಧು ಗೌಡ ಅವರು ತಮ್ಮ ಅಭಿಮಾನಿಗಳಿಗೆ ಸಂತೋಷದ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಜೀವನದ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದು, ಹಲವರು ಶುಭ ಹಾರೈಸಿದ್ದಾರೆ. ಮಧು ಗೌಡ ಮತ್ತು ಅವರ ಕುಟುಂಬದವರು ಯೂಟ್ಯೂಬ್‌ನ ಮೂಲಕ ಫೇಮಸ್ ಆಗಿದ್ದಾರೆ. ಕಳೆದ ಒಂದು ವಾರದಿಂದಲೂ ಮಗುವಿಗೆ ಸಂಬಂಧಿಸಿದ, ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಧು ಗೌಡ ಅವರು ಯೂಟ್ಯೂಬ್, ಸೋಶಿಯಲ್ ಮೀಡಿಯಾದ ಮೂಲಕ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು.
ಇದೀಗ ನಮ್ಮನ್ನೆಗೆ ಲಕ್ಷ್ಮಿ ಬಂದಿದ್ದಾಳೆ ಎಂದು ಮಧುಗೌಡ ಅವರು ಹೇಳಿದ್ದಾರೆ. ಮದುವೆಯಾಗಿ ಎರಡು ವರ್ಷಗಳ ನಂತರ 25ನೇ ವಯಸ್ಸಿನಲ್ಲಿ ಮಧು ಗೌಡ ಅವರು ತಾಯಿಯಾಗಿದ್ದರು. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಅವರ ಕುಟುಂಬದಲ್ಲಿ ಸಂಭ್ರಮ ಜೋರಾಗಿದ್ದು, ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭಕೋರಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವರು ಟ್ರೋಲ್ ಸಹ ಮಾಡುತ್ತಿದ್ದಾರೆ.
ಕನ್ನಡದ ಪ್ರಸಿದ್ಧ ಯೂಟ್ಯೂಬರ್ ಆಗಿರುವ ಮಧುಗೌಡ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ವಿಚಾರವನ್ನು ಕುಟುಂಬದವರು ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ. "ಮಧು ಗೌಡ ಅವರಿಗೆ ಕೊನೆಗೂ ಸಹಜ ಹೆರಿಗೆ (Normal Delivery - ನಾರ್ಮಲ್ ಡೆಲಿವರಿ) ಆಯ್ತು ಎನ್ನುವೊಂದರೊಂದಿಗೆ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಮಧುಗೌಡ ಹಾಗೂ ಅವರ ಮಗು ಆರೋಗ್ಯವಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ. ಇನ್ನು ಹೆಣ್ಣು ಮಗು ಹುಟ್ಟಿರುವುದನ್ನು ಕುಟುಂಬದವರು ಸಂಭ್ರಮಿಸಿದ್ದು, "ನಮ್ಮನೆಗೆ ಲಕ್ಷ್ಮಿ ಬಂದಿದ್ದಾಳೆ" ಎಂದಿದ್ದಾರೆ.
Madhugowda: ಮಧುಗೌಡ ವಿಡಿಯೋದಲ್ಲಿ ಏನಿದೆ ?
ಇನ್ನು ವಿಡಿಯೋದಲ್ಲಿ ಮಧುಗೌಡ ಅವರು ಮಾತನಾಡಿದ್ದು, ನಮ್ಮ ಮನೆಗೆ ಪುಟ್ಟ ಮಹಾಲಕ್ಷ್ಮಿ ಬಂದಿದ್ದಾಳೆ. ಸಹಜ ಹೆರಿಗೆ ಆಗಿ ಎರಡು ಮೂರು ಗಂಟೆಯಾಗಿದೆ. ಈಗ ಕ್ಷೇಮವಾಗಿದ್ದೇನೆ. ನಾರ್ಮಲ್ ಡೆಲಿವರಿ ಆಗಿದೆ ಹೆಣ್ಣು ಮಗು ಆಗಿದೆ. ನನ್ನ ತರನೇ ಮಗಳು ಇದ್ದಾಳೆ ಅಂತ ಎಲ್ಲ ಹೇಳ್ತಾ ಇದ್ದರೆ, ಇನ್ನು ಈ ವಿಡಿಯೋದಲ್ಲಿ ಮಗುವನ್ನು ಸಹ ತೋರಿಸಲಾಗಿದೆ. ಹೆಣ್ಣು ಮಗುವನ್ನು ಮಧುಗೌಡ ಕುಟಂಬದವರು ಮುದ್ದಾಡುತ್ತಿರುವುದು ಸಹ ವಿಡಿಯೋದಲ್ಲಿದೆ. ಇನ್ನು ಹೆರಿಗೆಯ ಬಗ್ಗೆ ಮಾತನಾಡಿರುವ ಯೂಟ್ಯೂಬರ್ ಮಧುಗೌಡ ಅವರು, ಹೆರಿಗೆ ಆಗುವಾಗ ತುಂಬಾ ನೋವಿತ್ತು. ಅದೊಂದು ದೊಡ್ಡ ಕಥೆ ಮುಂದೆ ಹೇಳುತ್ತೇನೆ ಅಂತಲೂ ಹೇಳಿದ್ದಾರೆ. ವೈದ್ಯರು ನೀವು ತುಂಬಾ ಸ್ಟ್ರಾಂಗ್ ಅಂತ ಹೇಳಿದ್ದಾರೆ ಅಂತಲೂ ಮಧುಗೌಡ ಅವರು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಮಧು ಗೌಡ ಅವರು ತಮ್ಮ ಬೇಬಿ ಬಂಪ್ ಫೋಟೋಶೂಟ್ ಮೂಲಕ ಅವರ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದರು. ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ ಎಂದು ಫೋಟೋ ಹಂಚಿಕೊಂಡಿದ್ದರು. ಮಧು ಗೌಡ ಮತ್ತು ನಿಖಿಲ್ ರವೀಂದ್ರ ಅವರು ಯೂಟ್ಯೂಬ್‌ನಲ್ಲಿ ಪ್ರಸಿದ್ಧಿ ಗಳಿಸಿದ್ದಾರೆ. ಮಧು ಗೌಡ ಮತ್ತು ನಿಖಿಲ್ ರವೀಂದ್ರ ಇಬ್ಬರೂ ಸಹ ತಮ್ಮ ವೈಯಕ್ತಿಕ ಜೀವನ, ಪ್ರವಾಸ ಮತ್ತು ದಿನನಿತ್ಯದ ವಿಚಾರಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.