
Karnataka Rains: ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆ, ಎಲ್ಲಿ ಎಷ್ಟು?
ಬೆಂಗಳೂರು: ಕೊಡಗು, ಶಿವಮೊಗ್ಗ ಸೇರಿದಂತೆ ಮಲೆನಾಡು ಜಿಲ್ಲೆಗಳ ವಿವಿಧ ಭಾಗಗಳು, ಕರಾವಳಿ ಜಿಲ್ಲೆಗಳ ಕೆಲವೆಡೆ ಉತ್ತಮ ಮಳೆಯಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಕಳೆದ 24 ಗಂಟೆಗಳ ಮಳೆ ಮಾಹಿತಿ ಪ್ರಕಾರ, ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮದೆಯಲ್ಲಿ 51 ಮಿ.ಮೀ ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ 45.6 ಮಿ.ಮೀ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಅಳಕೆ ಹಾಗೂ ಸುಳ್ಯ ತಾಲ್ಲೂಕಿನ ಪಲ್ಲಡ್ಕದಲ್ಲಿ ತಲಾ 36.5 ಮಿ.ಮೀ ಮಳೆಯಾಗಿದೆ.
ಮಂಗಳೂರಿನ ಪಾಂಡೇಶ್ವರದಲ್ಲಿ 34.5 ಮಿ.ಮೀ, ಉಡುಪಿ ಜಿಲ್ಲೆ ಹೆಬ್ರಿಯಲ್ಲಿ 33 ಮಿ.ಮೀ, ಮಂಗಳೂರಿನ ಮುಡುಶೆಡ್ಡೆಯಲ್ಲಿ 32 ಮಿ.ಮೀ, ಬಂಟ್ವಾಳ ತಾಲ್ಲೂಕಿನ ಕರಿಯಂಗಳದಲ್ಲಿ 31.5 ಮಿ.ಮೀ, ತೀರ್ಥಹಳ್ಳಿ ತಾಲ್ಲೂಕಿನ ಹೊಸಹಳ್ಳಿ, ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆ ಹಾಗೂ ಸಾಲೆತ್ತೂರಿನಲ್ಲಿ ತಲಾ 31 ಮಿ.ಮೀ ಮಳೆಯಾಗಿದೆ.
ಉಲ್ಲಾಳ ತಾಲ್ಲೂಕಿನ ಮಂಜನಾಡಿಯಲ್ಲಿ 30.5 ಮಿ.ಮೀ, ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ತ್ರಿಪುರದಲ್ಲಿ ತಲಾ 30 ಮಿ.ಮೀ ಮಳೆಯಾಗಿದೆ.