
ಬಿಜೆಪಿ ಬಾಬರ್ ಕಿ ವಿರಾಸತ್ ಪೋಸ್ಟ್‌ಗೆ Gen Z ವಿದ್ಯಾರ್ಥಿನಿಯ ಖಡಕ್ ಕೌಂಟರ್: ವೈರಲ್ ಆಯ್ತು ವಿಡಿಯೋ
ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ನೃತ್ಯ ಮಾಡಿದ ಯುವತಿಯೊಬ್ಬಳನ್ನು ಗುರಿಯಾಗಿಸಿಕೊಂಡು ಬಿಜೆಪಿ ಹಂಚಿಕೊಂಡಿದ್ದ ವಿಡಿಯೋಗೆ, ಅದೇ ಜೆನ್ ಜೀ ವಿದ್ಯಾರ್ಥಿನಿ ಪವರ್ ಪಾಯಿಂಟ್ ಪ್ರೆಸಂಟೇಷನ್ ಅಂದರೆ ಪಿಪಿಟಿ ಮೂಲಕ ನೀಡಿದ ಖಡಕ್ ಪ್ರತ್ಯುತ್ತರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಈ ವಿದ್ಯಾರ್ಥಿನಿಯ ಧೈರ್ಯ ಮತ್ತು ಸೃಜನಶೀಲ ಉತ್ತರಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಸಿಜಿಪಿ ಸಂಘಟನೆ ಸೇರಿದಂತೆ ಲಕ್ಷಾಂತರ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಛತ್ತೀಸ್‌ಗಢ ವಿಡಿಯೋ ಮತ್ತು ಬಾಬರ್ ಕಿ ವಿರಾಸತ್ ವಿವಾದ
ಕೆಲವು ದಿನಗಳ ಹಿಂದೆ ಛತ್ತೀಸ್‌ಗಢ ಬಿಜೆಪಿ ಘಟಕವು ತಮ್ಮ ಅಧಿಕೃತ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿತ್ತು. ಅದರಲ್ಲಿ ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಾ ರೀಲ್ಸ್ ಮಾಡಿ ನರ್ತಿಸುತ್ತಿದ್ದ ಜೆನ್ ಜೀ ಹುಡುಗಿಯರ ವಿಡಿಯೋ ಒಂದೆಡೆಯಿದ್ದರೆ, ಮತ್ತೊಂದೆಡೆ ದೇಶಕ್ಕೆ ಹೆಮ್ಮೆ ತಂದ ವಿದ್ಯಾರ್ಥಿನಿಯೊಬ್ಬಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರಧಾನ ಮಾಡುತ್ತಿರುವ ದೃಶ್ಯವಿತ್ತು. "ಜೆನ್ ಜೀ ಯುವಜನತೆಯೇ, ನೀವು ಯಾವ ಮನಸ್ಥಿತಿಯನ್ನು ಆಯ್ಕೆ ಮಾಡುತ್ತೀರಿ? ದೇಶಕ್ಕೆ ಹೆಮ್ಮೆ ತರುವ ವಿದ್ಯಾರ್ಥಿಗಳೋ ಅಥವಾ ಬಾಬರ್‌ನ ಪರಂಪರೆಯಲ್ಲಿ ಕುಣಿಯುವವರೋ?" ಎಂದು ಬಿಜೆಪಿ ಶೀರ್ಷಿಕೆ ನೀಡಿತ್ತು.
ಪಿಪಿಟಿ ಮೂಲಕ ಬಿಜೆಪಿಗೆ ಖಡಕ್ ಉತ್ತರ ನೀಡಿದ ಉರ್ವಶಿ
ತಮ್ಮ ಅನುಮತಿಯಿಲ್ಲದೆ ತಮ್ಮ ಪ್ರತಿಭಟನೆಯ ವಿಡಿಯೋ ಬಳಸಿದ್ದಕ್ಕೆ ಹಾಗೂ ಬಾಬರ್ ಕಿ ವಿರಾಸತ್ ಎಂದು ನಿಂದಿಸಿದ್ದಕ್ಕೆ, ವಿಡಿಯೋದಲ್ಲಿದ್ದ ಉರ್ವಶಿ ಪಾಲಂದೂರ್ಕರ್ ಎಂಬ ವಿದ್ಯಾರ್ಥಿನಿ ಕೋಪಗೊಳ್ಳುವ ಬದಲು ಅತ್ಯಂತ ತಮಾಷೆಯಾಗಿ ಪಿಪಿಟಿ ಪ್ರೆಸಂಟೇಷನ್ ಮೂಲಕವೇ ಬಿಜೆಪಿಗೆ ಪ್ರತ್ಯುತ್ತರ ನೀಡಿದ್ದಾರೆ. "ನಿಮ್ಮ ಕ್ಯಾಪ್ಷನ್ ಗೇಮ್ ತುಂಬಾ ವೀಕ್ ಆಗಿದೆ. ನಿಮ್ಮ ಚಾಟ್‌ಜಿಪಿಟಿ ನಿಮಗೆ ಸರಿಯಾದ ಉತ್ತರಗಳನ್ನು ನೀಡುತ್ತಿಲ್ಲ. 2026ರಲ್ಲಿ ವಿಭಜಿಸಿ ಆಳುವ ತಂತ್ರ ನಡೆಯುವುದಿಲ್ಲ. ಸಂಸತ್ತಿಗೇ ಜೆನ್ ಜೀ ಪದಗಳನ್ನ ಕಲಿಸಿದ ಪೀಳಿಗೆಗೆ ನೀವು ಪಾಠ ಮಾಡಲು ಸಾಧ್ಯವಿಲ್ಲ," ಎಂದು ಆಕೆ ವ್ಯಂಗ್ಯವಾಡಿದ್ದಾರೆ.
ಅಷ್ಟೇ ಅಲ್ಲದೆ, "ನಾನು 10ನೇ ತರಗತಿ ಹಾಗೂ 12ನೇ ತರಗತಿ ಎರಡರಲ್ಲೂ ಶೇಕಡಾ 93ರಷ್ಟು ಅಂಕ ಗಳಿಸಿದ್ದೇನೆ," ಎಂದು ಹೇಳಿದ್ದಾಳೆ
ರಾಹುಲ್ ಗಾಂಧಿ, ಕೇಜ್ರಿವಾಲ್ ಹಾಗೂ ನೆಟ್ಟಿಗರಿಂದ ಮೆಚ್ಚುಗೆ
ಉರ್ವಶಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಆಮ್ ಆದ್ಮಿ ಪಾರ್ಟಿ ನಾಯಕ ಅರವಿಂದ್ ಕೇಜ್ರಿವಾಲ್ ಈ ವಿಡಿಯೋಗೆ ಕಮೆಂಟ್ ಮಾಡಿ, "ದೇವರು ನಿನಗೆ ಒಳ್ಳೆಯದು ಮಾಡಲಿ ಮಗಳೇ, ನಿನ್ನ ಈ ಆಲೋಚನೆ ನನಗೆ ತುಂಬಾ ಇಷ್ಟವಾಯಿತು," ಎಂದು ಹಾರೈಸಿದ್ದಾರೆ.
View this post on InstagramA post shared by Urwashi Palandurkar | Dancer | Content creator | (@urwashi_18)
A post shared by Urwashi Palandurkar | Dancer | Content creator | (@urwashi_18)
ಕಾಕ್ರೋಚ್ ಜನತಾ ಪಾರ್ಟಿ "ಯು ಗೋ ಗರ್ಲ್!" ಎಂದು ಬೆಂಬಲ ಸೂಚಿಸಿದ್ದರೆ, ಅಭಿಜಿತ್ ದಿಪ್ಕೆ ಆಕೆಯನ್ನು "ಲೆಜೆಂಡ್" ಎಂದು ಕರೆದಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಉರ್ವಶಿ ಅವರ ವಿಡಿಯೋವನ್ನ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ 'ಜೆನ್ ಜೀ'ಪೀಳಿಗೆಯವರ ಬೆಂಬಲಕ್ಕೆ ನಿಂತಿದ್ದಾರೆ.
ನೀಟ್ ಪ್ರತಿಭಟನೆ ಮತ್ತು ವಿದ್ಯಾರ್ಥಿಗಳ ಹೋರಾಟ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಜುಲೈ 25 ರಂದು ಸಿಜೆಪಿ ಸಂಘಟನೆಯು ನೀಟ್ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿತ್ತು. ಆದರೆ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕಿರುಕುಳ ಮುಂದುವರಿದಲ್ಲಿ ಭವಿಷ್ಯದಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ಸಂಘಟನೆ ಎಚ್ಚರಿಸಿದೆ. ಇದರ ನಡುವೆ, ಯುವಜನತೆಯನ್ನು ರಾಜಕೀಯ ಲಾಭಕ್ಕಾಗಿ ನಿಂದಿಸುವ ಪ್ರಯತ್ನಗಳಿಗೆ ಜೆನ್ ಜೀ ಪೀಳಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡುತ್ತಿರುವುದು ರಾಷ್ಟ್ರಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ.