BMW ‘ಎಕ್ಸ್ 1’ ಸರಣಿಯ ನೂತನ ಆವೃತ್ತಿ ಬಿಡುಗಡೆ:₹49.90 ಲಕ್ಷದಿಂದ ಬೆಲೆ ಆರಂಭ

BMW ‘ಎಕ್ಸ್ 1’ ಸರಣಿಯ ನೂತನ ಆವೃತ್ತಿ ಬಿಡುಗಡೆ:₹49.90 ಲಕ್ಷದಿಂದ ಬೆಲೆ ಆರಂಭ

BMW ‘ಎಕ್ಸ್ 1’ ಸರಣಿಯ ನೂತನ ಆವೃತ್ತಿ ಬಿಡುಗಡೆ:₹49.90 ಲಕ್ಷದಿಂದ ಬೆಲೆ ಆರಂಭ

ಗುರುಗ್ರಾಮ: ಐಷಾರಾಮಿ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾವು ‘ಎಕ್ಸ್ 1’ ಸರಣಿಯ ನೂತನ ಆವೃತ್ತಿ ‘ಎಲ್‌ಡಬ್ಲ್ಯುಬಿ’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಎಕ್ಸ್ ಷೋರೂಂ ಬೆಲೆ ₹49.90 ಲಕ್ಷದಿಂದ ಆರಂಭವಾಗಲಿದೆ.

ಶುಕ್ರವಾರ‌ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಂಡಬ್ಲ್ಯು ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹರ್ದೀಪ್ ಸಿಂಗ್ ಬ್ರಾರ್ ಅವರು ಕಾರನ್ನು ಅನಾವರಣಗೊಳಿಸಿದರು.

‘ಚೆನ್ನೈನಲ್ಲಿರುವ ಕಂಪನಿಯ ಕಾರ್ಖಾನೆಯಲ್ಲಿ ಹೊಸ ಕಾರು ತಯಾರಾಗಿದೆ. ‘ಎಕ್ಸ್ 1’ ಸರಣಿಯ ಕಳೆದ ನಾಲ್ಕು ಆವೃತ್ತಿಯ ಕಾರುಗಳಿಗೆ ಹೋಲಿಸಿದರೆ ಲಾಂಗ್ ವ್ಹೀಲ್ ಬೇಸ್ (ಎಲ್‌ಡಬ್ಲ್ಯುಬಿ) ಹೊಂದಿದೆ. ಸಾಹಸ, ಪ್ರವಾಸ, ಫಿಟ್ ನೆಸ್, ಕ್ರೀಡಾಸಕ್ತಿ ಹೊಂದಿರುವವರ ಅಭಿರುಚಿಗೆ ತಕ್ಕಂತೆ ವಿಶಾಲ ಒಳಾಂಗಣ, ಪವರ್ ಎಂಜಿನ್, ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ ಸೇರಿದಂತೆ ಸೌಲಭ್ಯಗಳನ್ನು ಉನ್ನತೀಕರಿಸಲಾಗಿದೆ’ ಎಂದು ಹರ್ದೀಪ್ ಸಿಂಗ್ ಹೇಳಿದರು.

‘ಕಂಪನಿಯ ಕಾರುಗಳ ಮಾರಾಟದಲ್ಲಿ ಎಕ್ಸ್ 1 ಸರಣಿಯು ಶೇ 30ರಷ್ಟು ಪಾಲು‌ ಹೊಂದಿದೆ.‌ ಹೊಸ ಕಾರಿನಲ್ಲಿ 156 ಎಚ್‌ಪಿ ಮತ್ತು 230 ಎನ್ಎಂಟಾರ್ಕ್ ಸಾಮರ್ಥ್ಯದ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 18 ಇಂಚು ಅಗಲದ ಅಲಾಯ್ ವೀಲ್ ಇದೆ. ಹಿಂಬದಿ ಸೀಟುಗಳಲ್ಲಿ ವಿಶಾಲ ಸ್ಥಳಾವಕಾಶ, 1,700 ಲೀಟರ್ಸ್ ಬೂಟ್ ಸ್ಪೇಸ್ ಇರಲಿದೆ' ಎಂದು ವಿವರಿಸಿದರು.

‘ಹರ್ಮನ್ ಕಾರ್ಡನ್ ಕಂಪನಿಯ 12 ಸ್ಪೀಕರ್‌ಗಳು, ಪ್ಯಾನೊರಾಮಿಕ್ ಸನ್ ರೂಫ್, ಅಗಲವಾದ ಎಲ್‌ಇಡಿ ಪರದೆ, ಬಿಎಂಡಬ್ಲ್ಯುಐ ಡ್ರೈವ್ ಸಿಸ್ಟಂ, ಡಿಜಿಟಲ್ ಕೀ, 360 ಡಿಗ್ರಿ ಕ್ಯಾಮೆರಾ, ಆಟೊಮೇಟೆಡ್‌ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ’ ಎಂದರು.

9 ಸಾವಿರ ಕಾರುಗಳ ಮಾರಾಟ: ‘ಪ್ರಸಕ್ತ ವರ್ಷದಲ್ಲಿ ಕಂಪನಿಯ 9 ಸಾವಿರ ಕಾರುಗಳು ಮಾರಾಟವಾಗಿದ್ದು, ವಹಿವಾಟಿನಲ್ಲಿ ಶೇ 17ರಷ್ಟು ಬೆಳವಣಿಗೆ ದರ ಸಾಧಿಸಲಾಗಿದೆ. ಕಂಪನಿಯ ಇ.ವಿ ಕಾರುಗಳಿಗೂ ಹೆಚ್ಚು ಬೇಡಿಕೆಯಿದೆ’ ಎಂದು ಹರ್ದೀಪ್ ಹೇಳಿದರು.

ಇದೇ ವೇಳೆ ಕಂಪನಿಯ ಹೊಸ ಇ.ವಿ ಕಾರು ‘ಐ5 ಎಲ್‌ಡಬ್ಲ್ಯುಬಿ’ ಅನ್ನು ಪ್ರದರ್ಶಿಸಿದ ಅವರು, ‘99 ಕಾರುಗಳನ್ನು ಅಷ್ಟೇ ತಯಾರಿಸಲಾಗಿದ್ದು, ಇದರ ಮುಂಗಡ ಬುಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.

(ಕಂಪನಿಯ ಆಮಂತ್ರಣದ ಮೇರೆಗೆ ಕಾರ್ಯಕ್ರಮದಲ್ಲಿ ನಮ್ಮ ಪ್ರತಿನಿಧಿ ಪಾಲ್ಗೊಂಡಿದ್ದರು)

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ