ಬಿಜೆಪಿ ಅಧ್ಯಕ್ಷರದ್ದು ತಿರುಕನ ಕನಸು: ಬಿ.ಕೆ ಹರಿಪ್ರಸಾದ್

ಬಿಜೆಪಿ ಅಧ್ಯಕ್ಷರದ್ದು ತಿರುಕನ ಕನಸು: ಬಿ.ಕೆ ಹರಿಪ್ರಸಾದ್

ಬಿಜೆಪಿ ಅಧ್ಯಕ್ಷರದ್ದು ತಿರುಕನ ಕನಸು: ಬಿ.ಕೆ ಹರಿಪ್ರಸಾದ್

ಚಿಕ್ಕಬಳ್ಳಾಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರದ್ದು ತಿರುಕನ ಕನಸು ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಟೀಕಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಅವಕಾಶ ದೊರೆಯದಿದ್ದವರಿಗೆ ಬೇರೆ ಬೇರೆ ರಾಜಕೀಯ ಅಧಿಕಾರ ನೀಡಲಾಗುವುದು. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಅವರು ಪಕ್ಷದ ಹಿರಿಯ ನಾಯಕರು ಮತ್ತು ಹಿರಿಯ ಶಾಸಕರ ಜೊತೆ ಬುಧವಾರ ಸಂಜೆ ಸಭೆ ನಡೆಸುವರು ಎಂದರು.

ಖಾತೆ ಹಂಚಿಕೆ ವಿಚಾರದಲ್ಲಿ ಚರ್ಚೆ ಮಾಡಬೇಕಾಗುತ್ತದೆ. ಇಂದು (ಬುಧವಾರ) ಸಂಜೆಯೊಳಗೆ ಖಾತೆ ಹಂಚಿಕೆ ಆಗಲಿದೆ ಎಂದರು.

ವಿಧಾನ ಮಂಡಲ ಅಧಿವೇಶನದಲ್ಲಿ ಬರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಬರ ಪರಿಹಾರಕ್ಕೆ ಹಣ ನೀಡುವಂತೆ ಕೋರಲು ಸರ್ವ ಪಕ್ಷಗಳ ಸಂಸದರ ನಿಯೋಗ ಪ್ರಧಾನಿ ಮತ್ತು ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಲಿದೆ ಎಂದರು.

ಬರ ಪರಿಹಾರಕ್ಕೆ ಮುಂಗಡವಾಗಿ ಹಣ ನೀಡುವಂತೆ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.

ಲೋಕಸಭೆ ಅಧಿವೇಶನ ನಡೆಯುತ್ತಿರುವ ಕಾರಣ ಪ್ರಧಾನಿ ಮತ್ತು ಸಚಿವರ ಭೇಟಿ ಸಾಧ್ಯವಾಗಿಲ್ಲ. ಅಧಿವೇಶನದ ನಂತರ ಕೇಂದ್ರದ ಬಳಿ ರಾಜ್ಯದ ನಿಯೋಗ ತೆರಳಲಿದೆ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ