ಚಿಂಚೋಳಿ: ಪಾಳು ಬಿದ್ದ ಪುರಾತನ ಗುಡಿಗಳು

ಚಿಂಚೋಳಿ: ಪಾಳು ಬಿದ್ದ ಪುರಾತನ ಗುಡಿಗಳು

ಚಿಂಚೋಳಿ: ಪಾಳು ಬಿದ್ದ ಪುರಾತನ ಗುಡಿಗಳು

ಚಿಂಚೋಳಿ: ಐತಿಹಾಸಿಕ ಪ್ರಸಿದ್ಧಿಯ ತಾಲ್ಲೂಕಿನ ಗಡಿಗ್ರಾಮ ಮಿರಿಯಾಣದಲ್ಲಿ ಸಾವಿರಾರು ವರ್ಷಗಳ ಪ್ರಾಚೀನ ದೇಗುಲಗಳು ಪಾಳು ಬಿದ್ದಿದ್ದು ಅವಸಾನದತ್ತ ಸಾಗಿವೆ.

ಮಿರಿಯಾಣದಲ್ಲಿ ಎಲ್ಲಿ ನೋಡಿದರೂ ಪುರಾತನ ಕಾಲದ ದೇವಾಲಯಗಳು ಗೋಚರಿಸುತ್ತವೆ. ಅಲ್ಲಲ್ಲಿ ವೀರಗಲ್ಲುಗಳು ಅನಾಥವಾಗಿದ್ದರೆ, ಬೃಹತ್ ಶಿವಲಿಂಗದ ದೇವಾಲಯಗಳು ಅವಸಾನದತ್ತ ಸಾಗಿವೆ. ಇಲ್ಲಿನ ಪಾಪನಾಶ ಮಂದಿರ ಸುಸ್ಥಿತಿಯಲ್ಲಿದ್ದರೆ, ಜೈನ ಬಸದಿ ಭಾಗಶಃ ಉಳಿದಿದೆ.

ಊರ ಹೊರಗಿನ ಈಶ್ವರ ದೇವಾಲಯ ಗರ್ಭಗುಡಿ ಮತ್ತು ಅಂತರಾಳ ಮಾತ್ರ ಗೋಚರಿಸಿದರೆ, ಇಲ್ಲಿನ ಮಕರ ತೋರಣ ಅತ್ಯಂತ ಆಕರ್ಷಕವಾಗಿದೆ. ಗರ್ಭಗುಡಿಯಲ್ಲಿ ಬೃಹತ್ ಲಿಂಗವಿದೆ. ಪಾಣಿಪೀಠ ಆಧುನೀಕರಣಗೊಂಡಿದೆ. ಇದರ ರಚನೆ ರಾಷ್ಟ್ರಕೂಟರ ಕಾಲಕ್ಕೆ ಸೇರಿದ ದೇವಾಲಯ ಎನ್ನಲಾಗುತ್ತದೆ.

ಮೂರು ದೇವರ ಗುಡಿ ಸಮುಚ್ಚಯ ಅತ್ಯಂತ ಆಕರ್ಷಕವಾಗಿದೆ. ಆದರೆ, ಸರಿಯಾದ ನಿರ್ವಹಣೆಯಿಲ್ಲದೇ ದೇವಾಲಯಗಳು ಪಾಳು ಬಿದ್ದಿವೆ. ದೇವಾಲಯದ ಅಂಗಳದಲ್ಲಿ ಜನರು ಕಲ್ಲುಗಳು ಇರಿಸಿದ್ದರಿಂದ ಹಾಗೂ ಗಿಡಗಂಟೆ ಪೊದೆ ಬೆಳೆದಿದ್ದರಿಂದ ರಕ್ಷಣೆಗಾಗಿ ದೇವಾಲಯಗಳು ಮೊರೆ ಇಡುತ್ತಿವೆ.

ಇಲ್ಲಿನ ಮೂರು ದೇವಾಲಯಗಳಲ್ಲಿ ಶಿವಲಿಂಗಗಳಿವೆ. ಒಂದು ದೇವಾಲಯವನ್ನು ಮಲ್ಲಿಕಾರ್ಜುನ ಭ್ರಮರಾಂಬಿಕೆ ಎಂದು ಕರೆಯುತ್ತಾರೆ. ಪಶ್ಚಿಮಾಭಿಮುಖ ಹೊಂದಿರುವ ದೇವಾಲಯದ ಪ್ರವೇಶದಲ್ಲಿ ಗಂಗೆ, ಯಮುನೆಯ ಉಬ್ಬು ಶಿಲ್ಪ ಅತ್ಯಾಕರ್ಷಕವಾಗಿವೆ. ಈ ಮೂರು ದೇವಾಲಯಗಳು ಕದಂಬ ನಾಗ ಶಿಖರ ಹೊಂದಿದ್ದು ಎಲ್ಲವೂ ಪಿರಮಿಡ್ ಆಕೃತಿಯಲ್ಲಿವೆ.

ಸ್ಥಳೀಯರು ದೇವಾಲಯದ ಜಾಲಿ ಬಾಗಿಲು ಕೂಡಿಸಿ ಜಾನುವಾರುಗಳು ಪ್ರವೇಶಿಸದಂತೆ ಮಾಡಿದ್ದಾರೆ. ಆದರೆ, ಇವರಿಗೆ ನೆರವು ಸರ್ಕಾರ ನೀಡಿಲ್ಲ. ಕನಿಷ್ಠ ಪಕ್ಷ ಸ್ವಚ್ಛತೆ ಇಲ್ಲದಂತಾಗಿದೆ. ದೇವಾಲಯದ ಸಮುಚ್ಚಯ ಆವರಣ ಸ್ವಚ್ಛಗೊಳಿಸಿ ನೆಲಹಾಸು ಕಾಣುವಂತೆ ಮಾಡಿದರೆ ಅತ್ಯಂತ ಆಕರ್ಷಕವಾಗಿ ಗೋಚರಿಸಲಿದೆ ಎನ್ನುತ್ತಾರೆ ಮುಖಂಡ ತುಕಾರಾಮ ಪವಾರ.

ಶ್ರೀನಿವಾಸ ಪಂತಲು ಎಂಬುವವರ ಮನೆ ಆವರಣದಲ್ಲಿ ಶಿವಲಿಂಗದ ದೇವಾಲಯವಿದ್ದು, ಇದು ಭೀಮೇಶ್ವರ, ದ್ವಿಬಾಹು ಗಣಪತಿ ವಿಗ್ರಹ ಹೊಂದಿರುವ ದೇವಾಲಯ ಚೌಡೇಶ್ವರಿಯದ್ದಾಗಿರುವ ಸಾಧ್ಯತೆಯಿದೆ. ಭೀಮೇಶ್ವರ ದೇವಾಲಯದಲ್ಲಿ ದೊಡ್ಡ ಶಿವಲಿಂಗ ಮಾಳಿಗೆಯ ಮನೆಯಂತಹ ಕಟ್ಟಡವಿದೆ.

ಗ್ರಾಮದ ಕೆರೆ ದಂಡೆಯ ಮೇಲಿರುವ ಪಾಪನಾಶ ಮಂದಿರ ಸುಸ್ಥಿತಿಯಲ್ಲಿದ್ದು, ನಿತ್ಯ ಪೂಜೆ, ಪ್ರಾರ್ಥನೆ ಭಜನೆ ನಡೆಯುತ್ತಿದೆ. ಇದರ ಪಕ್ಕದ ಹನುಮಾನ ದೇವಾಲಯದಲ್ಲಿ ಅಂಜನೇಯ ತನ್ನ ಎದೆ ಸೀಳಿ ರಾಮಸೀತೆಯನ್ನು ತೋರಿಸುತ್ತಿರುವ ಭಂಗಿಯ ವಿಗ್ರಹ, ನಾಗ ನಾಗಿಣಿಯರ ಶಿಲ್ಪಗಳು ಗಮನ ಸೆಳೆಯುತ್ತದೆ. ಇದರ ಎದುರು ದೊಡ್ಡ ಪುಷ್ಕರಣಿ ಇತ್ತು. ಆದರೆ ಅದು ಮುಚ್ಚಿಹೋಗಿದೆ.

ಗ್ರಾಮದಲ್ಲಿ 7 ಹನುಮಾನ ದೇವಾಲಯಗಳಿವೆ. ಹೀಗಾಗಿ ಈ ಊರು ಏಳು ಬಾರಿ ಅವಸಾನ ಹೊಂದಿ ಪುನರ್‌ ನಿರ್ಮಾಣಗೊಂಡಿದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ವೀರಯ್ಯಸ್ವಾಮಿ.

ಗ್ರಾಮದ ಈಶ್ವರ ದೇವಾಲಯದ ಹೊರಗಡೆ ರೆಡ್ಡಿ ಅವರ ಹೊಲ ಮತ್ತು ಲಿಂಗಾಯತ ಸಮುದಾಯದ ರುದ್ರಭೂಮಿಯಲ್ಲಿ ಮೂರು ವೀರಗಲ್ಲುಗಳು ಪತ್ತೆಯಾಗಿದೆ. ಈ ವೀರಗಲ್ಲುಗಳು ವೀರ ಮರಣದ ಕತೆ ಸಾರುತ್ತವೆ. ಯುದ್ಧದಲ್ಲಿ ದೊರೆಯನ್ನು‌ ಕೊಂದು ರಕ್ತದ ಮಡುವಿನ ಈಟಿಗೆ ದೇಹ ಜೋತು‌ ಬಿದ್ದಿರುವುದು, ಇನೊಬ್ಬ ದೊರೆಯ ಶವ ತಲೆ‌ಕೆಳಗೆ ಮಾಡಿ‌ ಈಟಿ ಚುಚ್ಚಿ ಭೀಭತ್ಸತನ ಮೆರೆದದ್ದು, ಕೊನೆಗೆ ಅಪ್ಸರೆಯರು ವೀರಮರಣ ಹೊಂದಿದ ಕಿರೀಟಧಾರಿ ದೊರೆಯನ್ನು ದೇವ ಲೋಕಕ್ಕೆ ಕರೆದೊಯ್ಯುವ ಶಿವಸಾಯುಜ್ಯ ಹೊಂದಿರುವುದು ಸಾರುತ್ತದೆ. ಹೀಗಾಗಿ ನಡೆದ ಯುದ್ಧದಲ್ಲಿ‌ ಪ್ರಮುಖ ಅರಸನೊಬ್ಬ ವೀರಮರಣ ಹೊಂದಿರುವುದು ವೇದ್ಯವಾಗುತ್ತದೆ. ಆದರೆ ವೀರಮರಣ ಹೊಂದಿದವರು ಯಾರು ಎಂಬುದು ಅರಿಯಲು‌ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-31-115130970

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ