
ಬೀದರ್–ಯಶವಂತಪುರ ರೈಲಿನ ಎಂಜಿನ್‌ನಲ್ಲಿ ಬೆಂಕಿ: ತಪ್ಪಿದ ಅನಾಹುತ
ಬೀದರ್: ಬೀದರ್–ಯಶವಂತಪುರ ರೈಲಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ರೈಲು ಶುಕ್ರವಾರ ಒಂದು ಗಂಟೆ ತಡವಾಗಿ ಸಂಚರಿಸಿದೆ.
ಶುಕ್ರವಾರ ಸಂಜೆ 6.15ಕ್ಕೆ ಬೀದರ್ ರೈಲು ನಿಲ್ದಾಣದಿಂದ ಪಯಣ ಬೆಳೆಸಿದ ಅರ್ಧ ಗಂಟೆ ಬಳಿಕ ರೈಲು ನೆರೆಯ ತೆಲಂಗಾಣದ ಜಹೀರಾಬಾದ್ ನಿಲ್ದಾಣ ತಲುಪಿತು. ಅಲ್ಲಿ ರೈಲಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದನ್ನು ಗಮನಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಇಲಾಖೆಯ ಸಿಬ್ಬಂದಿ, ಬೆಂಕಿ ನಂದಿಸಿ, ಆಗಬಹುದಾದ ಅನಾಹುತ ತಪ್ಪಿಸಿದರು.
ಬಳಿಕ ಎಲ್ಲವನ್ನೂ ಪರಿಶೀಲಿಸಿ, ಸರಿಪಡಿಸಿದ ನಂತರ 1 ಗಂಟೆ ಬಳಿಕ ರೈಲು ಅಲ್ಲಿಂದ ಯಶವಂತಪುರ ಕಡೆಗೆಪಯಣ ಬೆಳೆಸಿತು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-51-1203750770