
ಜಾವೆಲಿನ್: ಸ್ವರ್ಣ ಗೆದ್ದ ಶಾರುಕ್
ಬೆಂಗಳೂರು: ರಾಜ್ಯ ಪೊಲೀಸ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಶಾರುಕ್ ಎಚ್.ಟಿ. ಅವರು ‘ರಾಷ್ಟ್ರೀಯ ಜಾವೆಲಿನ್ ದಿನಾಚರಣೆ’ಯ ಅಂಗವಾಗಿ ನಡೆದ ಅಂತರ ಜಿಲ್ಲಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.
ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಶಾರುಕ್ ಅವರು ಭರ್ಜಿಯನ್ನು 59.39 ಮೀ. ದೂರಕ್ಕೆ ಎಸೆದರು. ಹಾವೇರಿಯ ಸಂಗಪ್ಪ ಕುಮಾರ (52.41 ಮೀ.) ಮತ್ತು ಮೈಸೂರಿನ ಹರೀಶ ಎಚ್.ಎಂ. (48.80 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.
Tags
Sports