ಬಾದಾಮಿ: ಅನುದಾನಕ್ಕೆ ಕಾಯುತ್ತಿರುವ ಕೇಂದ್ರ

ಬಾದಾಮಿ: ಅನುದಾನಕ್ಕೆ ಕಾಯುತ್ತಿರುವ ಕೇಂದ್ರ

ಬಾದಾಮಿ: ಅನುದಾನಕ್ಕೆ ಕಾಯುತ್ತಿರುವ ಕೇಂದ್ರ

ಬಾದಾಮಿ: ಬನಶಂಕರಿ ದೇವಾಲಯದ ಎದುರಿನ ಕನ್ನಡ ಹಂಪಿ ವಿಶ್ವ ವಿದ್ಯಾಲಯದ ವಾಸ್ತುಶಿಲ್ಪ, ಪ್ರತಿಮಾಶಾಸ್ತ್ರ ಮತ್ತು ಚಿತ್ರಕಲಾ ಕೇಂದ್ರವು ನೂತನ ಕಟ್ಟಡಕ್ಕಾಗಿ ಸರ್ಕಾರದ ಅನುದಾನವನ್ನು ದಶಕಗಳಿಂದ ಕಾಯುತ್ತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿಂದಿನ ಉಪಕುಲಪತಿ ನಾಡಿನ ಹೆಸರಾಂತ ವಿಮರ್ಶಕ ಎಂ.ಎಂ. ಕಲಬುರಗಿ ಅವರು ಅಂದಿನ ಸಚಿವರಾದ ಎಂ.ಪಿ. ಪ್ರಕಾಶ ಮತ್ತು ಲೀಲಾದೇವಿ ಪ್ರಸಾದ ಅವರ ಸಹಕಾರದಿಂದ ಐತಿಹಾಸಿಕ ಪರಂಪರೆಯ ಚಾಲುಕ್ಯರ ನಾಡಿನಲ್ಲಿ 1999 ರಲ್ಲಿ ವಾಸ್ತುಶಿಲ್ಪ, ಪ್ರತಿಮಾಶಾಸ್ತ್ರ ಕೇಂದ್ರ ಆರಂಭಿಸಿದರು.

ನಿರಂತರ 28 ವರ್ಷಗಳಿಂದ ಕಲಾ ಕೇಂದ್ರವು ಪ್ರವಾಸೋದ್ಯಮ ಸಂಕೀರ್ಣ ಕಟ್ಟಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಲ್ಪ, ಚಿತ್ರಕಲೆ ಅಧ್ಯಯನ ಕೈಗೊಂಡು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತ ಬದುಕು ಕಟ್ಟಿಕೊಂಡಿದ್ದಾರೆ.

ಮೂರ್ತಿ ಶಿಲ್ಪ, ಚಿತ್ರಕಲಾ ವಿದ್ಯಾರ್ಥಿಗಳು ಮತ್ತು ವಿವಿಧ ರಾಜ್ಯದ ಕಲಾವಿದರು ಕೆತ್ತನೆ ಮಾಡಿದ ಸಾವಿರಾರು ಸಾಂಪ್ರದಾಯಿಕ ಮತ್ತು ಸಮಕಾಲೀನ ಮೂರ್ತಿಶಿಲ್ಪಗಳು, ವರ್ಣಚಿತ್ರಗಳು ಅಂತರ ರಾಷ್ಟ್ರೀಯ ಹಿರಿಯ ಕಲಾವಿದ ನಾಡೋಜ ಆರ್.ಎಂ. ಹಡಪದ ಕಲಾ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.

‘ಕನ್ನಡ ಹಂಪಿ ವಿಶ್ವ ವಿದ್ಯಾಲಯ ಕೇಂದ್ರದ ಪಕ್ಕದಲ್ಲಿಯೇ ಪ್ರವಾಸೋದ್ಯಮ ಇಲಾಖೆಯಿಂದ ಸ್ಟಾರ್ ಹೋಟೆಲ್ ನಿರ್ಮಾಣದ ಹಂತ ಮುಗಿಯುತ್ತ ಬಂದಿದೆ. ಈಗ ಈ ಕೇಂದ್ರವನ್ನು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ತೆರವು ಮಾಡಬೇಕಿದೆ. ನಾವು ಎಲ್ಲಿಗೆ ಹೋಗಬೇಕು ಎಂದು ತಿಳಿಯದಾಗಿದೆ’ ಎಂದು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಇಲಾಖೆಯ ಪಕ್ಕದಲ್ಲಿಯೇ ಸರ್ಕಾರ ವಾಸ್ತುಶಿಲ್ಪ, ಪ್ರತಿಮಾಶಾಸ್ತ್ರ ಮತ್ತು ಚಿತ್ರಕಲಾ ಕೇಂದ್ರಕ್ಕೆ 4 ಎಕರೆ ನಿವೇಶನವನ್ನು ಮಂಜೂರು ಮಾಡಿದೆ.

‘ಹಿಂದಿನ ಮತ್ತು ಈಗಿನ ಸರ್ಕಾರಕ್ಕೆ ಕನ್ನಡ ಹಂಪಿ ವಿಶ್ವ ವಿದ್ಯಾಲಯದ ಉಪಕುಲಪತಿಗಳು ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. 60 ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ’ ಎಂದು ಕಲಾ ಕೇಂದ್ರದ ಮುಖ್ಯಸ್ಥ ಮೋಹನರಾವ್ ಪಂಚಾಳ ಪ್ರತಿಕ್ರಿಯಿಸಿದರು.

‘ ಹಿಂದಿನ ಬಿಜೆಪಿ ಸರ್ಕಾರದ ಸಚಿವ ಗೋವಿಂದ ಕಾರಜೋಳ ಕಟ್ಟಡಕ್ಕೆ ₹20 ಕೋಟಿ ಭರವಸೆ ನೀಡಿದ್ದರು. ಸರ್ಕಾರದಿಂದ ಅನುದಾನ ಮಂಜೂರಾಗಲಿಲ್ಲ. ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರಿಗೆ 2019 ರಲ್ಲಿ ಸ್ಥಳೀಯ ಸಂಘಟನೆಯಿಂದ ಮನವಿ ಸಲ್ಲಿಸಿದ್ದೆವು. ಅನುದಾನ ಬಿಡುಗಡೆಯಾಗಲಿಲ್ಲ. ಈಗ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಅತಂತ್ರ ಸ್ಥಿತಿಯಲ್ಲಿದ್ದಾರೆ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಬೇಕು ’ ಎಂದು ಉನ್ನತ ಶಿಕ್ಷಣ ಸಚಿವರಿಗೆ ಬಾದಾಮಿ ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೆಗಲ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

‘ಕನ್ನಡ ಹಂಪಿ ವಿಶ್ವ ವಿದ್ಯಾಲಯದ ಕುಲಪತಿಗಳ ಜೊತೆಗೆ ಚರ್ಚಿಸಿ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಿಂದ ಅನುದಾನವನ್ನು ಮಂಜೂರು ಮಾಡಿಸುವುದಾಗಿ’ ಶಾಸಕ ಭೀಮಸೇನ ಚಿಮ್ಮನಕಟ್ಟಿ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-19-1410001201

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ