ಗಾಂಧಿನಗರದಲ್ಲಿ ಹೈಟೆನ್ಷನ್‌ ಲೇನ್‌ ಕಾಮಗಾರಿ: ಸ್ಥಳೀಯರಿಂದ ತಡೆ

ಗಾಂಧಿನಗರದಲ್ಲಿ ಹೈಟೆನ್ಷನ್‌ ಲೇನ್‌ ಕಾಮಗಾರಿ: ಸ್ಥಳೀಯರಿಂದ ತಡೆ

ಗಾಂಧಿನಗರದಲ್ಲಿ ಹೈಟೆನ್ಷನ್‌ ಲೇನ್‌ ಕಾಮಗಾರಿ: ಸ್ಥಳೀಯರಿಂದ ತಡೆ

ಧಾರವಾಡ: ನಗರದ ಲಕ್ಕಮ್ಮನಹಳ್ಳಿ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿಯೊಂದಕ್ಕೆ ಹೈವೋಲ್ಟೇಜ್‌ ವಿದ್ಯುತ್‌ ಪೂರೈಕೆ ನಿಟ್ಟಿನಲ್ಲಿ ಗಾಂಧಿನಗರ ಮೂಲಕ 33 ಕೆ.ವಿ ಹೈಟೆನ್ಷನ್‌ ತಂತಿ ಅಳವಡಿಸಲು ಅನುಮತಿ ನೀಡಿರುವುದು ಸಮಸ್ಯೆಗೆ ಎಡೆಮಾಡಿದೆ. ಜನವಸತಿ ಪ್ರದೇಶದಲ್ಲಿ ಹೈಟೆನ್ಷನ್‌ ಲೇನ್‌ ಅಳವಡಿಸುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ಧಾರೆ.

ಗಾಂಧಿನಗರದ ನಾಲ್ಕನೇ ಮುಖ್ಯರಸ್ತೆಯ ಆರನೇ ಕ್ರಾಸ್‌ನ ಮೋರಿ ಬದಿಯಲ್ಲಿ ಕೇಬಲ್‌ ಅಳವಡಿಕೆ ಕಾಮಗಾರಿಯನ್ನು ಸ್ಥಳೀಯರು ತಡೆದಿದ್ದಾರೆ. ಇಲ್ಲಿ ಹೈಟೆನ್ಷನ್‌ ವಿದ್ಯುತ್‌ ಮಾರ್ಗ ಅಳವಡಿಸಬಾರದು ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಮತ್ತು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸಿಐಟಿಬಿಯ ನಿವೇಶನ (ನಂಬರ್‌ 105) ಪಕ್ಕದ ಗಟಾರ ಭಾಗದಲ್ಲಿ 33 ಕೆ.ವಿ ವಿದ್ಯುತ್‌ ಮಾರ್ಗ ಅಳವಡಿಸುವುದನ್ನು ಕೈಬಿಡಬೇಕು. ಅಳವಡಿಸಿರುವ ಕಂಬ, ಕೇಬಲ್‌ ತೆರವುಗೊಳಿಸಬೇಕು ಎಂಬುದು ಸ್ಥಳೀಯರ ಆಗ್ರಹ. ಹೆಸ್ಕಾಂ ಮತ್ತು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ.

‘ಫ್ಯಾಕ್ಟರಿಗೆ ವಿದ್ಯುತ್‌ ಪೂರೈಸಲು ಗಾಂಧಿನಗರ ಭಾಗದಲ್ಲಿ ಹೈಟೆನ್ಷನ್‌ ಲೇನ್ ಕಲ್ಪಿಸುವ ಭಾಗದಲ್ಲಿ ಶಾಲೆ, ಮನೆಗಳು ಇವೆ. ಶಾರ್ಟ್‌ ಸರ್ಕಿಟ್‌ ಇತ್ಯಾದಿಯಾದರೆ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಇಲ್ಲಿ ವಿದ್ಯುತ್‌ ಮಾರ್ಗ ಅಳವಡಿಸಿದರೆ ಸ್ಥಳೀಯರಿಗೆ ತೊಂದರೆಯಾಗಲಿದೆ. ಗಟಾರ ನಿರ್ವಹಣೆಗೂ ಸಮಸ್ಯೆಯಾಗಲಿದೆ. ಫ್ಯಾಕ್ಟರಿಯವರಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳು ಲೇನ್‌ ನಿರ್ಮಾಣಕ್ಕೆ ಅನುಮತಿ ನೀಡಿದ್ಧಾರೆ’ ಎಂದು ದೂರುತ್ತಾರೆ ‌ಸ್ಥಳೀಯ ಮುಖಂಡ ಮನೋಜ್‌ ಕರಜಗಿ.

‘‌ರಸ್ತೆ ಕತ್ತರಿಸಲು (ರೋಡ್‌ ಕಟ್ಟಿಂಗ್‌) ಎಚ್‌ಡಿಎಂಸಿಯಿಂದ ಅನುಮತಿ ಪಡೆದಿದ್ದರು. 33 ಕೆ.ವಿ ವಿದ್ಯುತ್‌ ಮಾರ್ಗ ನಿರ್ಮಾಣಕ್ಕೆ ಎಂದು ಕಾರಣ ತಿಳಿಸಿರಲಿಲ್ಲ. ಕಾಮಗಾರಿ ಕೈಬಿಡಲು ಸೂಚನೆ ನೀಡಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ (ವಲಯ 12) ಎಂಜಿನಿಯರ್‌ ದೀಕ್ಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-24-335908789

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ