ತ್ಯಾಜ್ಯ ಟೆಂಡರ್ ಅಕ್ರಮ: ತನಿಖೆಗೆ ಸೂಚಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ತ್ಯಾಜ್ಯ ಟೆಂಡರ್ ಅಕ್ರಮ: ತನಿಖೆಗೆ ಸೂಚಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ತ್ಯಾಜ್ಯ ಟೆಂಡರ್ ಅಕ್ರಮ: ತನಿಖೆಗೆ ಸೂಚಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ತ್ಯಾಜ್ಯ ವರ್ಗಾವಣೆ ಸ್ಟೇಷನ್‌ ಸ್ಥಾಪನೆಯ ಟೆಂಡರ್‌, ಗುತ್ತಿಗೆ, ಭದ್ರತಾ ಠೇವಣಿ, ಕಾರ್ಯಾದೇಶದಲ್ಲಿ ಆಗಿರುವ ನ್ಯೂನತೆಯನ್ನು ಪರಿಶೀಲಿಸಿ, ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚಿಸಿದ್ದಾರೆ.

ಮುಖ್ಯಮಂತ್ರಿಯ ಆದೇಶದಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದು, ‘ಟೆಂಡರ್‌ ಪ್ಯಾಕೇಜ್‌ಗಳಿಗೆ (ಪ್ಯಾಕೇಜ್‌ 1, 2 ಮತ್ತು 5) ಸಂಬಂಧಿಸಿದಂತೆ ಕೂಲಂಕಷ ಪರಿಶೀಲನೆ ನಡೆಸಿ, ವಸ್ತುನಿಷ್ಠ ವರದಿ ನೀಡುವಂತೆ ಆಗಸ್ಟ್‌ 17ರಂದು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿಯಲ್ಲಿ ಆಗಸ್ಟ್‌ 12ರಂದು ‘ಠೇವಣಿ ನಿಯಮ ಮೀರಿ ಕಾರ್ಯಾದೇಶ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಮುಖ್ಯಮಂತ್ರಿಯವರು ತನಿಖೆ ನಡೆಸಲು ಆಗಸ್ಟ್‌ 13ರಂದು ಸೂಚಿಸಿದ್ದಾರೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಿಂದ (ಬಿಎಸ್‌ಡಬ್ಲ್ಯುಎಂಎಲ್) ನಗರದ ಹಲವೆಡೆ ತ್ಯಾಜ್ಯ ವರ್ಗಾವಣೆ ಸ್ಟೇಷನ್‌ (ಎಸ್‌ಟಿಎಸ್‌) ಸ್ಥಾಪನೆಗೆ ಪ್ಯಾಕೇಜ್‌ಗಳ ಟೆಂಡರ್‌ ಅನ್ನು ಆಹ್ವಾನಿಸಲಾಗಿತ್ತು. ಪ್ಯಾಕೇಜ್‌ 2 ಹಾಗೂಪ್ಯಾಕೇಜ್‌ 5 ಅನ್ನು ಮುನಿಯಪ್ಪ ಎಂಟರ್‌ಪ್ರೈಸಸ್‌ (ಲೀಡ್‌ ಮೆಂಬರ್‌), ಎಂಎಸ್‌ಜಿಪಿ ಇನ್‌ಫ್ರಾಟೆಕ್‌ ಪ್ರೈ. ಲಿ., ಟಿಪಿಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈ. ಲಿ. ಅವರು ಪಡೆದುಕೊಂಡಿದ್ದು, ಅವರಿಗೆ ಟೆಂಡರ್ ನಿಯಮಗಳಲ್ಲಿ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಅವರು ನೀಡಬೇಕಾಗಿರುವ ಭದ್ರತಾ ಠೇವಣಿಯಲ್ಲೂ ವಿನಾಯಿತಿ ನೀಡಲಾಗಿದೆ. ಇದಲ್ಲದೆ, ಸ್ವಚ್ಛ ಭಾರತ ನಿಧಿಯಲ್ಲಿ ಸುಮಾರು ₹150 ಕೋಟಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದೂ ಅಡ್ವೊಕೇಟ್‌ ಯಶವಂತ್‌ ಅವರು ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.

ಪ್ಯಾಕೇಜ್‌ 2ರಲ್ಲಿ ಯಲಹಂಕ, ದಾಸರಹಳ್ಳಿ, ಮಹದೇವಪುರ ಮತ್ತು ಕೆ.ಆರ್‌. ಪುರ ವಿಭಾಗದಲ್ಲಿ ಹಾಗೂ ಪ್ಯಾಕೇಜ್‌ 5ರಲ್ಲಿ ಮಲ್ಲೇಶ್ವರ, ಮಹಾಲಕ್ಷ್ಮಿ ಲೇಔಟ್‌, ರಾಜಾಜಿನಗರ ಹಾಗೂ ಗಾಂಧಿನಗರಗಳಲ್ಲಿ ಎಸ್‌ಟಿಎಸ್‌ ಸ್ಥಾಪನೆಗೆ ಟೆಂಡರ್ ಕರೆಯಲಾಗಿತ್ತು. ಈ ಎರಡೂ ಪ್ಯಾಕೇಜ್‌ನ ಟೆಂಡರ್‌ನಲ್ಲಿ ನಿಗದಿಯಾದ ಮೊತ್ತಕ್ಕಿಂತ ಕಡಿಮೆಗೆ ಬಿಡ್‌ ಸಲ್ಲಿಸಿದ್ದ ಮುನಿಯಪ್ಪ ಎಂಟರ್‌ಪ್ರೈಸಸ್‌ ಅವರಿಗೆ ಗುತ್ತಿಗೆ ನೀಡಲಾಗಿದೆ. ಪ್ಯಾಕೇಜ್‌ 2ರ ಟೆಂಡರ್‌ ಮೊತ್ತ ₹55.04 ಕೋಟಿ ಆಗಿದ್ದರೂ ₹37.63 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಪ್ಯಾಕೇಜ್‌ 5ರ ಟೆಂಡರ್‌ ಮೊತ್ತ ₹55.04 ಕೋಟಿಯಷ್ಟಿದ್ದರೂ ₹38.42 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಟೆಂಡರ್ ಮೊತ್ತಕ್ಕಿಂತ ಕಡಿಮೆಗೆ ಬಿಡ್‌ ಮಾಡಲಾಗಿದ್ದು, ವ್ಯತ್ಯಾಸದ ಮೊತ್ತವನ್ನು ಭದ್ರತಾ ಠೇವಣಿಯಾಗಿ ಪಡೆಯಬೇಕು ಎಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಿ ಬಿಎಸ್‌ಡಬ್ಲ್ಯುಎಂಎಲ್‌ ಎಂಜಿನಿಯರ್‌ಗಳು (ವ್ಯವಸ್ಥಾಪಕರು) ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-4-160772029

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ