ಅಂದ ಹೆಚ್ಚಿಸುವ ಮುನ್ನ ಎಚ್ಚರ: ಮೇಕಪ್ ಉತ್ಪನ್ನಗಳಿಂದ ಕಾಡಲಿದೆ ಅಲರ್ಜಿ ಸಮಸ್ಯೆ

ಅಂದ ಹೆಚ್ಚಿಸುವ ಮುನ್ನ ಎಚ್ಚರ: ಮೇಕಪ್ ಉತ್ಪನ್ನಗಳಿಂದ ಕಾಡಲಿದೆ ಅಲರ್ಜಿ ಸಮಸ್ಯೆ

ಅಂದ ಹೆಚ್ಚಿಸುವ ಮುನ್ನ ಎಚ್ಚರ: ಮೇಕಪ್ ಉತ್ಪನ್ನಗಳಿಂದ ಕಾಡಲಿದೆ ಅಲರ್ಜಿ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಸೌಂದರ್ಯ ವರ್ಧಕಗಳ ಬಳಕೆ ದೈನಂದಿನ ಜೀವನದ ಭಾಗವೇ ಆಗಿಹೋಗಿದೆ. ದಿನದ ಆರಂಭದಿಂದಲೇ ಕ್ರೀಮ್, ಸೀರಮ್, ಲಿಪ್‌ಸ್ಟಿಕ್‌ಗಳಂತಹ ನಾನಾ ತರಹದ ಮೇಕಪ್ ಉತ್ಪನ್ನಗಳನ್ನು ಬಳಸಿ ಕಂಗೊಳಿಸುವುದು ಸರ್ವೇಸಾಮಾನ್ಯ.

ಈ ಮೇಕಪ್‌ ಉತ್ಪನ್ನಗಳ ಖರೀದಿಗೆ ಒಂದಷ್ಟು ಜನ ಅಂಗಡಿಗಳನ್ನು ಆಯ್ಕೆ ಮಾಡಿಕೊಂಡರೆ, ಇನ್ನು ಕೆಲವರು ಮಾಲ್‌ಗಳಲ್ಲಿ, ಕ್ವಿಕ್‌ ಕಾರ್ಮರ್ಸ್‌ ಕಂಪನಿಗಳ ಮೂಲಕ ಅಥವಾ ಆನ್‌ಲೈನ್‌ನಲ್ಲಿ ಖರೀದಿಸುತ್ತಾರೆ. ಆದರೆ ಖರೀದಿಸಿದ ಉತ್ಪನ್ನಗಳು ಎಷ್ಟು ಅಸಲಿ ಎನ್ನುವುದನ್ನು ಪರೀಕ್ಷಿಸುವುದು ಕಡಿಮೆ. 

ಆಗಸ್ಟ್‌ 9ರಂದು ಕರ್ನಾಟಕ ಡ್ರಗ್ ಕಂಟ್ರೋಲ್ ವಿಭಾಗ, ನಕಲಿ ಕಾಸ್ಮೆಟಿಕ್ಸ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಮುಖ್ಯವಾಗಿ ಬೆಂಗಳೂರಿನಲ್ಲಿ ನಕಲಿ ಉತ್ಪನ್ನಗಳ ಬಳಕೆ ಎಷ್ಟಿದೆ, ಕಾಸ್ಮೆಟಿಕ್ಸ್‌ಗಳ ಬಳಕೆಯಿಂದ ಎಷ್ಟು ಜನರಿಗೆ ಅಲರ್ಜಿ ಸಮಸ್ಯೆಯಾಗಿದೆ ಎನ್ನುವ ಬಗ್ಗೆ ಸಮೀಕ್ಷೆ ಬೆಳಕು ಚೆಲ್ಲಿದೆ.

ಈ ಸಮೀಕ್ಷೆಯ ಪ್ರಕಾರ, ಸಮೀಕ್ಷೆಗೆ ಒಳಗಾದ 4,300 ಜನರಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು ಶೇ 22ರಷ್ಟು ಜನರು ಕಾಸ್ಮೆಟಿಕ್ಸ್‌ಗಳ ಬಳಕೆಯಿಂದ ಅಲರ್ಜಿ ಸಮಸ್ಯೆ ಎದುರಿಸಿದ್ದಾರೆ. ಅದೇ ರೀತಿ ಶೇ 30 ರಷ್ಟು ಜನರು ನಕಲಿ ಉತ್ಪನ್ನಗಳನ್ನು ಖರೀದಿಸಿದ್ದಾರೆ. 

ಇವರಲ್ಲಿ ಶೇ 23ರಷ್ಟು ಜನ ಸ್ಥಳೀಯ ಅಂಗಡಿಗಳಲ್ಲಿ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಖರೀದಿಸಿದರೆ, ಶೇ 21ರಷ್ಟು ಜನ ಆನ್‌ಲೈನ್‌ನಲ್ಲಿ ಮತ್ತು ಶೇ 19 ರಷ್ಟು ಜನ ಸಾಮಾನ್ಯ ಅಂಗಡಿಗಳಲ್ಲಿ, ಉಳಿದವರು ವಿವಿಧ ಪ್ರದೇಶಗಳಲ್ಲಿ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ.

ಆ.10ರಂದು ಬೆಂಗಳೂರು ನಗರದ ವಿವಿಧೆಡೆ ದಾಳಿ ನಡೆಸಿದ ಅಧಿಕಾರಿಗಳು, 10 ಅಂಗಡಿಗಳಲ್ಲಿ ಲಿಪ್‌ಸ್ಟಿಕ್, ಸೀರಮ್‌ ಮತ್ತು ಮುಖಕ್ಕೆ ಹಚ್ಚುವ ಕ್ರೀಮ್‌ಗಳನ್ನು ಜಪ್ತಿ ಮಾಡಿ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಎಚ್ಚರಿಕೆ ನೀಡುವ ಆರೋಗ್ಯ ಸಚಿವ ಯು.ಟಿ ಖಾದರ್, ‘ಸಾರ್ವಜನಿಕರ ಜೀವನದಲ್ಲಿ ಚೆಲ್ಲಾಟವಾಡುವವರನ್ನು ಸಹಿಸುವುದಿಲ್ಲ’ ಎಂದೂ ಹೇಳಿದ್ದಾರೆ.

ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ 400ಕ್ಕೂ ಹೆಚ್ಚು ಅನಧಿಕೃತ ಚರ್ಮ ಆರೈಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಸುಮಾರು 200 ಕೇಂದ್ರಗಳು ಬೆಂಗಳೂರಿನಲ್ಲಿಯೇ ಇವೆ. ಇಂತಹ ಕೇಂದ್ರಗಳಲ್ಲಿ ಪಡೆಯುವ ಚಿಕಿತ್ಸೆಗಳಿಂದ ಉಂಟಾಗುವ ಸಮಸ್ಯೆಗಳ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಚರ್ಮರೋಗ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಯಾವುದೇ ಉತ್ಪನ್ನಗಳನ್ನು ಖರೀದಿಸುವ ಮುನ್ನ ಅದರ ಬಳಕೆಯ ಅವಧಿ, ತಯಾರಕರ ಹೆಸರು, ವಿಳಾಸ, ಬ್ಯಾಚ್ ನಂಬರ್‌ಅನ್ನು ಪರಿಶೀಲಿಸುವುದು ಅಗತ್ಯ. ಅದರಲ್ಲೂ ಆನ್‌ಲೈನ್‌ನಲ್ಲಿ ಖರೀದಿಸುವಾಗ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು.

ದೇಶದಾದ್ಯಂತ ಹರಡಿರುವ ಜಾಲ

ನಕಲಿ ಉತ್ಪನ್ನಗಳ ಪತ್ತೆ ಸಮೀಕ್ಷೆಯಲ್ಲಿ ವಿವಿಧ ರಾಜ್ಯಗಳ ಸುಮಾರು 23 ಸಾವಿರ ಜನ ಪ್ರತಿಕ್ರಿಯಿಸಿದ್ದಾರೆ. ಅದರ ಪ್ರಕಾರ, ಮಹಾರಾಷ್ಟ್ರ, ದೆಹಲಿ, ಕೇರಳ, ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಶೇ 26ರಷ್ಟು ಜನ ಸೌಂಧರ್ಯ ವರ್ಧಕ ಉತ್ಪನ್ನಗಳಿಂದ ಅಲರ್ಜಿ ಸಮಸ್ಯೆ ಎದುರಿಸುತ್ತಿದ್ದಾರೆ. ಶೇ 40ರಷ್ಟು ಜನ ಒಂದಲ್ಲ ಒಂದು ನಕಲಿ ಉತ್ಪನ್ನಗಳನ್ನು ಖರೀದಿಸಿದ್ದಾರೆ ಎನ್ನುವುದು ತಿಳಿದುಬಂದಿದೆ. ನಕಲಿ ಉತ್ಪನ್ನಗಳು ಹೆಚ್ಚಾಗಿ ಆನ್‌ಲೈನ್‌ನಲ್ಲಿಯೇ ಮಾರಾಟವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ