ಮಳೆಗಾಗಿ ನಾಲತವಾಡದಲ್ಲಿ ಗೊಂಬೆ ಮದುವೆ ಆಚರಣೆ

ಮಳೆಗಾಗಿ ನಾಲತವಾಡದಲ್ಲಿ ಗೊಂಬೆ ಮದುವೆ ಆಚರಣೆ

ಮಳೆಗಾಗಿ ನಾಲತವಾಡದಲ್ಲಿ ಗೊಂಬೆ ಮದುವೆ ಆಚರಣೆ

ನಾಲತವಾಡ: ಗಂಡು ಮತ್ತು ಹೆಣ್ಣಿನ ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಆದರೆ ಇಲ್ಲಿ ನಡೆದ ಮದುವೆ ಭೂ ಲೋಕದಲ್ಲೇ ನಿಶ್ಚಯವಾಯಿತು. ವಿಧಿವಿಧಾನಗಳ ಪ್ರಕಾರವೇ ನಡೆಯಿತು.ಅಂಥಹ ವಿಶೇಷ ಏನು ಅಂತಿರಾ....?

ಹೌದು.ಇಲ್ಲಿಗೆ ಸಮೀಪದ ರಕ್ಕಸಗಿ ಗ್ರಾಮದ ಶ್ರೀ ಮರಗಮ್ಮ ದೇವಿ ದೇವಸ್ಥಾನದಲ್ಲಿ ಮಳೆಗಾಗಿ ಗಂಡು ಮತ್ತು ಹೆಣ್ಣು ಗೊಂಬೆಗಳ ಬದಲಾಗಿ ಪುಟ್ಟ ಪುಟ್ಟ ಎರಡೂ ಹೆಣ್ಣು ಮಕ್ಕಳಿಗೆ ವರ-ವಧುವಿನ ವೇಷ ಭೂಷಣ ತೊಡಿಸಿ ಗೊಂಬೆ ಲಗ್ನವೆಂದು ಜೋಡಿಗೆ ಇತ್ತೀಚೆಗೆ ಮದುವೆ ಮಾಡಲಾಯಿತು.

ವರನ ಕಡೆಯಿಂದ ಸ್ಥಳೀಯ ನಿವಾಸಿ ನೀಲಮ್ಮ ತೊಗರಿ ಅವರು ವಧು ನೋಡಲು ಬಸವರಾಜ ಚಿತವಾ ಡಗಿ ಇವರ ಮನೆಗೆ ಬಂದರು. ಬಳಿಕ 2 ಕುಟುಂಬಗಳ ನಡುವೆ ವಿವಾಹ ಕುರಿತು ಮಾತುಕತೆ ನಡೆದು, ಎರಡು ಮನೆಗಳಲ್ಲಿ ಮದುವೆ ಸಮಾರಂಭ ಆರಂಭಗೊಂಡಿತು. ವಿಳ್ಯದೆಲೆಯಲ್ಲಿ ಸಕ್ಕರೆ ನೀಡಲಾಯಿತು. ಶ್ರೀ ಮರಗಮ್ಮ ದೇವಿ ದೇವಸ್ಥಾನದ ಮುಂದೆ ಯಮನೂರಪ್ಪ ತೊಗರಿ,ಗಂಗಾಧರ ಕಾಳಗುಂಡಿ, ಶರಣಪ್ಪ ಕಮರಿ, ಪರಶುರಾಮ ತೊಗರಿ ಹಾಲಕಂಬ ನೆಟ್ಟರು.

ರೇಖಾ ಪಾಟೀಲ, ಯಲ್ಲಮ ತೊಗರಿ, ಗದ್ದೆಮ್ಮ ವಾಲಿಕಾರ,ಜಯಶ್ರೀ ಹಡಪದ, ಗೀತಾ ಟಕ್ಕಳಕಿ, ಬಸಮ್ಮ ಹುಡೇದ ಮಹಿಳೆಯರು ಮನೆ ಮನೆಗೆ ಹೋಗಿ ಓಣಿ ನಿವಾಸಿಗಳನ್ನು ಕುಂಕುಮ ಹಚ್ಚಿ ಮದುವೆಗೆ ಆಹ್ವಾನಿಸಿದ್ದರು. ಸಮಾರಂಭಕ್ಕೆ ಬಂದಿದ್ದ ಮುತ್ತೈದೆಯರಿಗೆ ಕಂಕಣ ಕಟ್ಟಲಾಯಿತು. ನೆರೆದಿದ್ದವರು‌ ಅರಿಶಿಣ ಹಚ್ಚಿಕೊಂಡರು.

ಸಂಪ್ರದಾಯ ಪ್ರಕಾರ ವಧು-ವರರಿಗೆ ಸುರಗಿ ಸುತ್ತಿ ನೀರು ಹಾಕಿದರು. ಒಂದೆಡೆ ಹಿರಿಯರು ಜನಪದ ಹಾಡುತ್ತಿದ್ದರೆ, ಮತ್ತೊಂದೆಡೆ ಸಂಪ್ರದಾಯ ಪ್ರಕಾರ ವಧು-ವರರಿಗೆ ಅರಿಶಿಣ ಬೆರೆಸಿದ ಸುರಗಿ ನೀರು ಹಾಕಿ ಸೀರೆ, ಧೋತಿ , ಗಾಂಧಿ ಟೋಪಿ ಸೇರಿದಂತೆ ಹೊಸ ಬಟ್ಟೆ ತೊಡಿಸಿದರು. ಒಂದೆಡೆ ಹಿರಿಯರು ಜನಪದ ಹಾಡುತ್ತಿದ್ದರೆ, ಮತ್ತೊಂದೆಡೆ ಚಿಕ್ಕ ಮಕ್ಕಳು ಕುಣಿದು ಸಂತೋಷಪಟ್ಟರು. ಹೆಣ್ಣಿನ ಕಡೆಯವರು ವಧು ಗೊಂಬೆ ಮಗುವಿಗೆ ಶೃಂಗಾರ ಮಾಡುವುದರಲ್ಲಿ ನಿರತರಾಗಿದ್ದರು. ವರ ವೇಷದ ಗೊಂಬೆ ಮಗುವಿಗೆ ಅಲಂಕಾರ ಮಾಡಲಾಯಿತು.

ಸಂಪ್ರದಾಯದಂತೆ ವಧು ಮತ್ತು ವರನ ಪಾತ್ರಧಾರಿ ಮಕ್ಕಳಿಗೆ ರುಮಾಲು ಸುತ್ತಿ ಬಾಸಿಂಗ ಕಟ್ಟಲಾಯಿತು.ಶಹನಾಯಿ ವಾದನದ ಗಟ್ಟಿಮೇಳದ ನಡುವೆ ವರ ಗೊಂಬೆಮಗು ವಧು ಗೊಂಬೆಮಗುವಿಗೆ ತಾಳಿ ಕಟ್ಟಿಸಲಾಯಿತು. ಪೌರೋಹಿತ್ಯವನ್ನು ಇಸ್ಮಾಯಿಲ್ ಮುಲ್ಲಾ ವಹಿಸಿಕೊಂಡು ಸೌಹಾರ್ದ ಮೆರೆದರು. ಸಂಬಂಧಿಕರು ನವ ಜೋಡಿಗೆ ಅಕ್ಷತೆ ರೋಹಣ ಹಾಕಿ ಆಶಿರ್ವದಿಸಿದರು. ಟ್ರ್ಯಾಕ್ಟರ್ ನಲ್ಲಿ ಊರ ತುಂಬೆಲ್ಲ ಮೆರವಣಿಗೆ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260804-26-113009232

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ