ಹಾಕಿ: ಕರ್ನಾಟಕಕ್ಕೆ ನಿರಾಯಾಸ ಗೆಲುವು

ಹಾಕಿ: ಕರ್ನಾಟಕಕ್ಕೆ ನಿರಾಯಾಸ ಗೆಲುವು

ಹಾಕಿ: ಕರ್ನಾಟಕಕ್ಕೆ ನಿರಾಯಾಸ ಗೆಲುವು

ಪುಣೆ (ಪಿಟಿಐ): ಕರ್ನಾಟಕ, ಬಿಹಾರ ಮತ್ತು ಮಿಜೋರಾಂ ತಂಡಗಳು ಇಲ್ಲಿ ನಡೆಯುತ್ತಿರುವ 16ನೇ ಹಾಕಿ ಇಂಡಿಯಾ ಜೂನಿಯರ್‌ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ತಮ್ಮ ತಮ್ಮ ಪಂದ್ಯಗಳಲ್ಲಿ ಗೆಲುವು ದಾಖಲಿಸಿದವು.

ಟೂರ್ನಿಯ ನಾಲ್ಕನೇ ದಿನವಾದ ಶನಿವಾರ ‘ಬಿ’ ಡಿವಿಷನ್‌ನ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು 6–1 ಗೋಲುಗಳಿಂದ ಉತ್ತರಾಖಂಡ ತಂಡವನ್ನು ನಿರಾಯಾಸವಾಗಿ ಮಣಿಸಿತು. ಬಿಹಾರ ತಂಡವು 6–0 ಅಂತರದಿಂದ ಗೋವಾ ತಂಡವನ್ನು ಹಿಮ್ಮೆಟ್ಟಿಸಿತು.

ಎ ಗುಂಪಿನ ಪಂದ್ಯದಲ್ಲಿ ಮಿಜೋರಾಂ ತಂಡವು 2–0ಯಿಂದ ಕೇರಳ ತಂಡವನ್ನು ಸೋಲಿಸಿತು. ಅಸ್ಸಾಂ ತಂಡವು 2–1 ಗೋಲುಗಳಿಂದ ಆಂಧ್ರಪ್ರದೇಶವನ್ನು ಮಣಿಸಿತು. ‘ಸಿ’ ಡಿವಿಷನ್‌ನ ಬಿ ಗುಂಪಿನ ಪಂದ್ಯದಲ್ಲಿ ಗುಜರಾತ್ ತಂಡವು 3-1 ಅಂತರದಿಂದ ಪುದುಚೇರಿ ವಿರುದ್ಧ ಜಯ ಸಾಧಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-51-1740805014

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ