ಗುಂಡಿ–ಗೊಟರುಗಳೇ ಕೊಪ್ಪ ತಾಲ್ಲೂಕಿನ ಮೇಗೂರು–ಯಡಗುಂದ ರಸ್ತೆಯ ದುಸ್ಥಿತಿ

ಗುಂಡಿ–ಗೊಟರುಗಳೇ ಕೊಪ್ಪ ತಾಲ್ಲೂಕಿನ ಮೇಗೂರು–ಯಡಗುಂದ ರಸ್ತೆಯ ದುಸ್ಥಿತಿ

ಗುಂಡಿ–ಗೊಟರುಗಳೇ ಕೊಪ್ಪ ತಾಲ್ಲೂಕಿನ ಮೇಗೂರು–ಯಡಗುಂದ ರಸ್ತೆಯ ದುಸ್ಥಿತಿ

ಚಿಕ್ಕಮಗಳೂರು: ಕಾಡಿನ ದಾರಿ, ಹೆಸರಿಗಷ್ಟೇ ಇರುವ ರಸ್ತೆ, ಗುಂಡಿ ಗೊಟರುಗಳಿಗೆ ಲೆಕ್ಕವಿಲ್ಲ, ವಾಹನ ಸಂಚಾರವಿರಲಿ, ಕಾಲ್ನಡಿಗೆಯೂ ಕಷ್ಟ... ಇದು ಕೊಪ್ಪ ತಾಲ್ಲೂಕಿನ ಮೇಗೂರ್– ಯಡಗುಂದ ರಸ್ತೆಯ ಸ್ಥಿತಿ.

ಕೊಪ್ಪ ತಾಲ್ಲೂಕಿನ ವ್ಯಾಪ್ತಿಯಲ್ಲಿ ಈ ಗ್ರಾಮಗಳು ಶೃಂಗೇರಿಗೆ ಸಮೀಪದಲ್ಲಿವೆ. ಗಡಿಕಲ್ ಕೂಡಿಗೆಯೊಂದ ಹೊರಟರೆ ಮೇಗೂರ್ ತನಕ ರಸ್ತೆ ಉತ್ತಮವಾಗಿದೆ. ಮೇಗೂರಿನಿಂದ ಯಡಗುಂದ, ಬುಕ್ಕಡಿಬೈಲು, ಕಿತ್ಲೆಗುಳೆ ಸೇರಿ ಹಲವು ಸಣ್ಣಪುಟ್ಟ ಗ್ರಾಮಗಳಿವೆ. ಈ ಗ್ರಾಮಗಳಿಗೆ ತಲುಪಲು ಇರುವ ಪ್ರಮುಖ ರಸ್ತೆಯ ಸ್ಥಿತಿ ಹೇಳ ತೀರದಾಗಿದೆ.

ಮೇಗೂರಿನಿಂದ ಹೊರಟರೆ ಕೊಂಚ ದೂರ ಹಳ್ಳ–ಗುಂಡಿಗಳ ರಸ್ತೆಯಿದೆ. ಈ ರಸ್ತೆ ಹಿಡಿದು ಮುಂದೆ ಸಾಗಿದರೆ ಗುಂಡಿಗಳಿರಲಿ ರಸ್ತೆಯೇ ಇಲ್ಲ ಎಂಬಂಥ ಸ್ಥಿತಿ ಇದೆ. ಕಾಡಿನಲ್ಲಿ ಒಂಟಿಯಾಗಿ ಸಾಗಿದ ಅನುಭವವಾಗುತ್ತದೆ. ಹಿಂದೆ ಇದ್ದ ಕಾಲುದಾರಿಯನ್ನೇ ಸ್ವಲ್ಪ ಅಗಲ ಮಾಡಲಾಗಿದ್ದು, ರಸ್ತೆಯ ಸ್ವರೂಪವೇ ಇಲ್ಲವಾಗಿದೆ. ಯಡಗುಂದಲ್ಲಿ 40 ಗ್ರಾಮಗಳಿದ್ದು, ಸುತ್ತಮುತ್ತ ಹಲವು ಜನವಸತಿಗಳಿವೆ. ಈ ಗ್ರಾಮಗಳ ಜನ ಈ ದಾರಿಯಲ್ಲಿ ಸಾಗಲು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಯಡಗುಂದದಲ್ಲಿ ಗೌಡ್ಲು ಎಂಬ ಆದಿವಾಸಿ ಸಮುದಾಯದವರೇ ವಾಸವಿದ್ದು, ಅವರು ಪಟ್ಟಣ ಅಥವಾ ಪ್ರಮುಖ ಹಳ್ಳಿಗಳಿಗೆ ಬಂದರೆ ವಾಪಸ್ ಮನೆ ತಲುಪುವುದು ಎಂದರೆ ಸಾಹಸದ ಕೆಲಸ. ಹೊಸಬರು ಈ ದಾರಿಯಲ್ಲಿ ಹೋದರೆ ಕಾಡಿನ ಮಧ್ಯೆ ಸಿಲುಕಿದ ಅನುಭವವಾಗುತ್ತದೆ. ಇಲ್ಲದ ರಸ್ತೆಯಲ್ಲಿ ಈ ಭಾಗದ ಜನ ಹೇಗೆ ಜೀವನ ನಡೆಸುತ್ತಿದ್ದಾರೆ ಎಂಬ ಪ್ರಶ್ನೆ ಕಾಡುವುದು ಸಹಜ.

‘ಯಡಗುಂದ ತಲುಪುವುದು ಸುಲಭದ ಮಾತಲ್ಲ. ಅದರಲ್ಲೂ ಮಳೆಗಾಲದಲ್ಲಿ ಈ ರಸ್ತೆಗಳಲ್ಲಿ ಕಾರುಗಳಲ್ಲಿ ಸಾಗಿದರೆ ಅರ್ಧದಲ್ಲಿ ಸಿಲುಕುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಆ ಗ್ರಾಮಗಳ ಹೊರತು ಬೇರೆ ಜನ ಈ ರಸ್ತೆಯಲ್ಲಿ ಹೋಗುವುದಿಲ್ಲ’ ಎಂದು ಸುತ್ತಮುತ್ತಲ ಹಳ್ಳಿಗಳ ಜನ ಹೇಳುತ್ತಾರೆ.

ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ದು ಪೋಷಕರೇ ವಾಪಸ್ ಕರೆದುಕೊಂಡು ಬರಬೇಕು. ದಿನವಿಡೀ ಪೋಷಕರಿಗೆ ಇದೇ ಕೆಲಸವಾಗುತ್ತದೆ. ಬಹುತೇಕರು ಕೂಲಿ ಕಾರ್ಮಿಕರೇ ಆಗಿರುವುದರಿಂದ ಮಕ್ಕಳನ್ನು ವಸತಿ ನಿಲಯಗಳಿಗೆ ಸೇರಿಸಿದ್ದಾರೆ ಎಂದು ಅವರು ವಿವರಿಸಿದರು.

‘ಈ ಹಳ್ಳಿಗಳಿಗೆ ಖಾಸಗಿ ಜೀಪುಗಳು, ಬೈಕ್‌ಗಳ ಹೊರತಾಗಿ ಬೇರೆ ವಾಹನಗಳ ಸಂಚಾರ ಕಷ್ಟ. ಇನ್ನು ಸರ್ಕಾರಿ ವಾಹನಗಳು ಈ ರಸ್ತೆಯ ಕಡೆಗೆ ತಿರುಗಿಯೂ ನೋಡುವುದಿಲ್ಲ. ಸ್ವಂತ ಬೈಕ್ ಅಥವಾ ವಾಹನ ಇಲ್ಲದವರು ಊರಿನಿಂದ ಹೊರಗೆ ಪಟ್ಟಣಕ್ಕೆ ಬರುವುದೇ ಕಷ್ಟ. ನಡೆದು ಸಾಗಬೇಕೆಂದರೆ ಮೇಗೂರಿನಿಂದ ಯಡಗುಮದಕ್ಕೆ 8 ಕಿಲೋ ಮೀಟರ್ ದೂರವಿದೆ. ರಸ್ತೆ ಇಲ್ಲದೆ ನಮ್ಮ ಜೀವನ ಅತ್ಯಂತ ನರಕವಾಗಿದೆ’ ಎಂದು ಗ್ರಾಮದ ಯುವಕ ಚೇತನ್ ಹೇಳಿದರು.

‘ಪ್ರತಿನಿತ್ಯ ಅಕ್ಷರಶಃ ವನವಾಸದ ಜೀವನ ಅನುಭವಿಸಿದ್ದೇವೆ. ರಸ್ತೆ, ವಿದ್ಯುತ್ ಸಂಪರ್ಕ ಕೇಳಿ ಸಾಕಾಗಿದ್ದೇವೆ. ಮಳೆಗಾಲದಲ್ಲಿ ನಮ್ಮ ಸ್ಥಿತಿ ಹೇಳತೀರದು. ಯಾರ ಬಳಿ ಸಮಸ್ಯೆ ಹೇಳಿಕೊಳ್ಳುವುದು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-126-821642540

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ