ತೋವಿವಿ ಕುಲಪತಿ ನಿವಾಸದಲ್ಲಿ ಸತ್ಯನಾರಾಯಣ ಪೂಜೆ, ಲೆಟರ್‌ಹೆಡ್‌ ಬಳಕೆಗೆ ಆಕ್ಷೇಪ

ತೋವಿವಿ ಕುಲಪತಿ ನಿವಾಸದಲ್ಲಿ ಸತ್ಯನಾರಾಯಣ ಪೂಜೆ, ಲೆಟರ್‌ಹೆಡ್‌ ಬಳಕೆಗೆ ಆಕ್ಷೇಪ

ತೋವಿವಿ ಕುಲಪತಿ ನಿವಾಸದಲ್ಲಿ ಸತ್ಯನಾರಾಯಣ ಪೂಜೆ, ಲೆಟರ್‌ಹೆಡ್‌ ಬಳಕೆಗೆ ಆಕ್ಷೇಪ

ಬೆಂಗಳೂರು: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ. ವಿಷ್ಣುವರ್ಧನ ಅವರು ತಮ್ಮ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ಏರ್ಪಡಿಸಿದ್ದು, ಇದಕ್ಕೆ ತಮ್ಮ ಅಧಿಕೃತ ಲೆಟರ್ ಹೆಡ್‌ ಬಳಕೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ನಮ್ಮ ಪರಿವಾರದ ವತಿಯಿಂದ ಆಯೋಜಿಸಿರುವ ಶ್ರೀ ಸತ್ಯನಾರಾಯಣಪೂಜೆ, ನವಗ್ರಹಶಾಂತಿ ಹೋಮ ಹಾಗೂ ಮಹಾಗಣಪತಿ ಪೂಜಾ ಮಹೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿಗಳ ವಸತಿಗೃಹ ಮುಖ್ಯ ಆವರಣದಲ್ಲಿ ಆಗಸ್ಟ್‌ 11ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಪೂಜೆಗೆ ವಿಶ್ವವಿದ್ಯಾಲಯದ ಎಲ್ಲಾ ಅಧಿಕಾರಿಗಳು, ಬೋಧಕ ವರ್ಗದವರು, ಬೋಧಕೇತರ ವರ್ಗದವರು, ಕಾರ್ಮಿಕ ವರ್ಗದವರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ವೈಯಕ್ತಿಕವಾಗಿ ಆಹ್ವಾನ ನೀಡುತ್ತಿದ್ದು. ಎಲ್ಲರೂ ಭಾಗವಹಿಸಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಎಂದು ವಿಷ್ಣುವರ್ಧನ ಅವರು ತಿಳಿಸಿದ್ದಾರೆ.

ಆದರೆ, ಅವರು ಸತ್ಯನಾರಾಯಣಪೂಜೆ ಮಾಡುವ ಜತೆಗೆ ಖಾಸಗಿ ಕಾರ್ಯಕ್ರಮಕ್ಕೆ ಲೆಟರ್‌ ಹೆಡ್‌ ಅನ್ನು ಬಳಕೆ ಮಾಡಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೆಲವರು ಕುಲಪತಿ ಅವರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಫೇಸ್ ಬುಕ್‌ ನಲ್ಲಿ ಪೋಸ್ಟ್ ಮಾಡಿರುವ ಪ್ರಕಾಶಕ, ಲೇಖಕ ಬಸವರಾಜ ಸೂಳಿಭಾವಿ, ಸತ್ಯ ನಾರಾಯಣಪೂಜೆ ನವಗ್ರಹ ಹೋಮ ಇವೆಲ್ಲ ವ್ಯಕ್ತಿಯೋರ್ವರ ವೈಯಕ್ತಿಕ ಆಚರಣೆಗಳಾದರೆ ಈ ದೇಶದಲ್ಲಿ ಯಾರದೂ ತಕರಾರು ಇರುವುದಿಲ್ಲ.. ನಂಬಿಕೆ ಮತ್ತು ಮೂಢನಂಬಿಕೆ ಎರಡೂ ವೈಯಕ್ತಿಕವಾಗಿರಬೇಕು. ಆದರೂ ಅವುಗಳನ್ನು ಸಾರ್ವಜನಿಕರಾಗಿ ತಾವು ಸೇವೆ ಮಾಡುವ ಸಂಸ್ಥೆಗಳಿಗೆ ಎಳೆದು ತರುವುದು ಇದೆಯಲ್ಲ ಅದು ಸರಿಯಾದ ನಡೆ ಆಗುವುದಿಲ್ಲ. ಸಾರ್ವಜನಿಕವಾಗಿ ಆಚರಿಸುವ ಇಂಥ ನಂಬಿಕೆ ಮತ್ತು ಮೂಢನಂಬಿಕೆ ಅಪ್ರಜಾಸತ್ತೆ ನಡೆ. ಸಂವಿಧಾನ ವಿರೋಧಿಯೂ ಹೌದು ಎಂದು ಹೇಳಿದ್ದಾರೆ.

ತೋಟಗಾರಿಕೆ ವಿವಿಗೆ ಕುಲಪತಿ ಆಗಿರಲು ಸರ್ಕಾರ ನೇಮಕವಾಗಿರುವ ಈ ವಿಷ್ಣುವರ್ಧನ ಧಾರ್ಮಿಕ ಆಚರಣೆಯ ಬ್ರೋಕರ್ ಆಗಿರಲು ಹೊರಟಿರುವಂತಿದೆ ಇಂಥ ನಡೆ. ಈ ಕಾಲದಲ್ಲಿ ಇಂಥ ನಡಾವಳಿಗಳು ಎಲ್ಲ ವಿವಿಗಳಲ್ಲಿ ಕಾಮನ್ ಅನ್ನುವಂತಾಗಿದೆ. ಇವರೇನು ಬಿಜೆಪಿ ಸರ್ಕಾರದಲ್ಲಿ ನೇಮಕವಾದವರಾ? ಅಥವಾ ಸಮಾಜವಾದಿ ಸಿದ್ಧರಾಮಯ್ಯನವರ ಕಾಂಗ್ರೆಸ್ಸಿನ ಸರ್ಕಾರದಲ್ಲಿ ನೇಮಕ ಆದವರಾ? ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೇಖಕಿ ಪ್ರತಿಭಾ ನಂದಕುಮಾರ್ ಅವರು ಕುಲಪತಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅದು ಅವರ ಮನೆಯ ಕಾರ್ಯಕ್ರಮ, ನಡೆಯುತ್ತಿರೋದು ಮನೆಯಲ್ಲಿ ಮತ್ತು ವೈಯಕ್ತಿಕ ಆಮಂತ್ರಣ. ಅದು ಅವರ ಹಕ್ಕು. ಇಲ್ಲಿ ಪ್ರಶ್ನೆ ಎದ್ದಿರೋದು ಲೆಟರ್ ಹೆಡ್ ಬಳಕೆ. ಅದೇನೂ ಅಂತಹ ದೊಡ್ಡ ಅಪರಾಧವಲ್ಲ. ವಿಧಾನ ಸೌಧದಲ್ಲಿ ಪೂಜೆ ಮಾಡಿ ಕರೀತಾರೆ. ಕೋರ್ಟಲ್ಲಿ ಮಾಡ್ತಾರೆ. ಯಾರೂ ಮಾಡದೇ ಅವರೊಬ್ಬರೇ ಮಾಡಿದ್ದರೆ ಇಷ್ಟು ಉಗ್ರವಾಗಿ ಪ್ರತಿಭಟಿಸಬಹುದಿತ್ತು. ಸ್ವಲ್ಪ ರಿಯಾಯಿತಿ ಕೊಟ್ಟರೆ ಪರವಾಗಿಲ್ಲ. ಅಷ್ಟೇ ಹೊರತು ದೊಡ್ಡ ಸಿದ್ಧಾಂತವೇನು ಇಲ್ಲ. ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕೆ ಗಲಾಟೆ ಮಾಡಿದವರಿಗೂ ನಾನು ಅದನ್ನೇ ಹೇಳಿದ್ದು ಸ್ವಲ್ಪ ಸಹಿಷ್ಣುತೆ ಇರಲಿ ಅಂತ ಎಂದು ಹೇಳಿದ್ದಾರೆ.

ಪರ ವಿರೋಧದ ಚರ್ಚೆಯ ನಡುವೆಯೇ ವಿಷ್ಣುವರ್ಧನ ಅವರ ನಿವಾಸದಲ್ಲಿ ಸತ್ಯನಾರಾಯಣಪೂಜೆ ಮಂಗಳವಾರ ನಡೆದಿದೆ. ಈ ಕುರಿತು ಪ್ರತಿಕ್ರಿಯೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ