ಅಣ್ಣಯ್ಯ ಸಿನಿಮಾ ಖ್ಯಾತಿಯ ಅರುಣಾ ಇರಾನಿ ಪತಿ ಕುಕು ಕೊಹ್ಲಿ ನಿಧನ
ಬಾಲಿವುಡ್‌ನ ಹಿರಿಯ ನಿರ್ದೇಶಕ ಕುಕು ಕೊಹ್ಲಿ (77) ಅವರು ಮಂಗಳವಾರ ಸಂಜೆ ಮುಂಬೈನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕುಕು ಕೊಹ್ಲಿ ಅವರು ಕೆಲ ದಿನಗಳ ಹಿಂದೆ ಅನಾರೋಗ್ಯದಿಂದಾಗಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು.
ತಾರಾ ನಟ ಅಜಯ್ ದೇವಗನ್ ಅವರನ್ನು ‘ಫೂಲ್ ಔರ್ ಕಾಂಟೆ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಮೊದಲ ಪತ್ನಿ ರೀಟಾ ಕೊಹ್ಲಿಅವರ ನಿಧನದ ಬಳಿಕ ‘ಅಣ್ಣಯ್ಯ’ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ನಟಿಸಿದ್ದ ಅರುಣಾ ಇರಾನಿ ಅವರನ್ನು 1990ರಲ್ಲಿ ವಿವಾಹವಾಗಿದ್ದರು. ಮೊದಲ ಹೆಂಡತಿಗೆ ಪೂಜಾ ಕೊಹ್ಲಿ ಹಾಗೂ ಕರಿಷ್ಮಾ ಕೊಹ್ಲಿ ಎಂಬ ಇಬ್ಬರು ಮಕ್ಕಳಿದ್ದಾರೆ.
‘ಕೊಹ್ರಾಮ್’, ‘ಸುಹಾಗ್’, ‘ಹಕೀಕತ್’, ‘ಅನಾರಿ ನಂ. 1’, ‘ಜುಲ್ಮಿ’, ‘ಯೆ ದಿಲ್ ಆಶಿಕಾನಾ’, ‘ವೋ ತೇರಾ ನಾಮ್ ಥಾ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
Tags
Entertainment