ಭಾರತದಲ್ಲಿ ಮುಸ್ಲಿಮರೇ ಇರಬಾರದೆಂದು ಯೋಚಿಸುವವರು ಹಿಂದೂವಲ್ಲ: ಮೋಹನ್ ಭಾಗವತ್

ಭಾರತದಲ್ಲಿ ಮುಸ್ಲಿಮರೇ ಇರಬಾರದೆಂದು ಯೋಚಿಸುವವರು ಹಿಂದೂವಲ್ಲ: ಮೋಹನ್ ಭಾಗವತ್

ಭಾರತದಲ್ಲಿ ಮುಸ್ಲಿಮರೇ ಇರಬಾರದೆಂದು ಯೋಚಿಸುವವರು ಹಿಂದೂವಲ್ಲ: ಮೋಹನ್ ಭಾಗವತ್

ನ್ಯೂಯಾರ್ಕ್: ‘ಭಾರತದಲ್ಲಿ ಮುಸ್ಲಿಮರೇ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

‘ಆರ್‌ಎಸ್‌ಎಸ್ ಶತಮಾನೋತ್ಸವದ ಜಾಗತಿಕ ಸಂಪರ್ಕ‘ ಕಾರ್ಯಕ್ರಮದ ಹಿನ್ನೆಲೆ ಮೋಹನ್ ಭಾಗವತ್ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ.

ಅಲ್ಲಿ ಮಾತನಾಡಿರುವ ಅವರು, ‘ ಭಾರತದಲ್ಲಿ ವಾಸಿಸುವ ಹಕ್ಕು ಎಲ್ಲ ಸಮುದಾಯದವರಿಗೂ ಇದೆ. ಪ್ರಪಂಚದ ಬೇರೆಲ್ಲೂ ಆಶ್ರಯ ಸಿಗದವರು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಜಗತ್ತಿನ ಎಲ್ಲರೂ ಒಂದೇ ಎಂಬ ಭಾವ ನಮಗಿದೆ. ಇಲ್ಲಿನ ವೈವಿದ್ಯತೆಯನ್ನು ಜಗತ್ತಿಗೆ ತಿಳಿಸುವುದೇ ನಮ್ಮ ಕರ್ತವ್ಯ’ ಎಂದಿದ್ದಾರೆ. 

‘ಭಾರತವನ್ನು ಸಂಪೂರ್ಣವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು? ಎಂದು ಮುಸ್ಲಿಂ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೋಹನ್, ‘ಆ ರೀತಿ ಮಾತನಾಡುವವರು ಹಿಂದೂವಲ್ಲ’ ಎಂದಿದ್ದಾರೆ.

‘ನಾನು, ನನ್ನದು‘ ಯೋಚಿಸುವ ಬದಲಾಗಿ ‘ನಾವು‘ ‘ನಮ್ಮದು‘ ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ತಾರತಮ್ಯಕ್ಕೆ ಹೆಚ್ಚಿನ ಒತ್ತು ನೀಡುವುದಿಲ್ಲ. ನಮ್ಮ ಸ್ವಯಂಸೇವಕರು ಜನರ ನೆರವಿನಿಂದ 1.30 ಲಕ್ಷ ಸೇವಾ ಯೋಜನೆಗಳನ್ನು ನಡೆಸುತ್ತಿದ್ದಾರೆ. ಜನರಿಗೆ ಯಾವುದು ಅವಶ್ಯಕತೆ ಇರುತ್ತದೊ ಆ ಸೇವೆ ಒದಗಿಸಲು ಆರ್‌ಎಸ್‌ಎಸ್ ಸಿದ್ಧವಾಗಿದೆ. ಇಲ್ಲಿ ಯಾವುದೇ ಜಾತಿ, ಭೇದಭಾವ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ